"ತೆಂಗಿನ ಕಾಯಿ ಗಣೇಶ" ಚತುರ್ಥಿ ದಿನದಿಂದ ಭಕ್ತರಿಗೆ ದರ್ಶನ

ಬೆಂಗಳೂರು, ಸೆ.02: ಜೆಪಿ ನಗರದ ಪುಟ್ಟೇನ ಹಳ್ಳಿಯ ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್‌ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷವಾದ ರೀತಿಯಲ್ಲಿ ಸಾರ್ವಜನಿಕ ಗಣೇಶ ಉತ್ಸವ ನಡೆಯಲಿದೆ. ಈ ಬಾರಿ 30 ಅಡಿ ಎತ್ತರದ ಪರಿಸರ ಸ್ನೇಹಿ ತೆಂಗಿನ ಕಾಯಿಯಿಂದ ನಿರ್ಮಿಸಲಾಗುವ "ತೆಂಗಿನ ಕಾಯಿ ಗಣೇಶ" ಮೂರ್ತಿ ನಿರ್ಮಾಣ ಮಾಡಲಾಗಿದೆ.

ಕಳೆದ ಬಾರಿ 40 ಅಡಿ ಎತ್ತರದ ಕಬ್ಬಿನ ಗಣಪತಿಯನ್ನು ನಿರ್ಮಿಸಿ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದ ಈ ದೇವಸ್ಥಾನ ಈ ಬಾರಿಯೂ ಹೊಸದೊಂದು ಪ್ರಯತ್ನ ಮಾಡಿದೆ. 9 ಸಾವಿರ ತೆಂಗಿನ ಕಾಯಿ ಹಾಗೂ 3 ಸಾವಿರ ಏಳನೀರು ಬಳಸಿ 30 ಎತ್ತರದ ಗಣಪತಿಯನ್ನು ನಿರ್ಮಿಸಿದೆ.

"ಗಣೇಶ ಮೂರ್ತಿ ನಿರ್ಮಾಣಕ್ಕೆ 50 ಮಂದಿ ಕಳೆದ 21 ದಿನಗಳಿಂದ ಕೆಲಸ ಮಾಡುತ್ತಿದ್ದು ಸೋಮುವಾರದಿಂದ ತೆಂಗಿನ ಕಾಯಿ ಗಣಪನ ದರ್ಶನ ಪಡೆಯಬಹುದಾಗಿದೆ. ತೆಂಗಿನ ಕಾಯಿ ಬಹಳ ದಿನಗಳ ಕಾಲ ಕೆಡದೆ ಇರುತ್ತದೆ. ಹೀಗಾಗಿ ತೆಂಗಿನ ಕಾಯಿಯನ್ನು ಬಳಸಿ ಗಣಪನ ಮೂರ್ತಿಯನ್ನು ನಿರ್ಮಿಸಲಾಗುತ್ತಿದೆ. ಕಳೆದ ವರ್ಷ ಕಬ್ಬನ್ನು ಬಳಸಿ ಗಣಪನ ಮೂರ್ತಿಯನ್ನು ನಿರ್ಮಿಸಲಾಗಿತ್ತು ಹಾಗೂ ಅದಕ್ಕೂ ಹಿಂದಿನ ವರ್ಷ 400 ಕೆಜಿ ಹತ್ತಿ ಬಳಸಿ ಬೃಹತ್‌ ಗಣಪನ ಮೂರ್ತಿಯನ್ನು ನಿರ್ಮಿಸಿದ್ದೆವು" ಎಂದು ಟ್ರಸ್ಟಿನ ವ್ಯವಸ್ಥಾಪಕರಾದ ರಾಮ್‌ ಮೋಹನ ರಾಜು ಅವರು ತಿಳಿಸಿದರು.

Eco Friendly Coconut Ganesha At JP Nagar Bengalruu

21 ಬಗೆಯ ತರಕಾರಿಗಳನ್ನು ಬಳಸಿ ಪರಿಸರ ಸ್ನೇಹಿ ಅಲಂಕಾರ: ಗಣಪತಿ ದೇವಸ್ಥಾನವನ್ನು ಈ ಬಾರಿ ಪರಿಸರ ಸ್ನೇಹಿಯಾಗಿಸಲು ತಿರ್ಮಾನಿಸಲಾಗಿದೆ. ಈ ಬಾರಿ ತರಕಾರಿಗಳನ್ನು ಬಳಸಿ ವಿಶೇಷವಾಗಿ ಆಲಂಕಾರ ಮಾಡಲಾಗಿದೆ.

10 ಸಾವಿರ ಕೆಜಿ ಕೇಸರಿಬಾತ್‌ ಪ್ರಸಾದ: "ಮತ್ತೊಂದು ವಿಶೇಷವೆಂದರೆ ಗಣೇಶನಿಗೆ 10 ಸಾವಿರ ಕೆ ಜಿ ಕೇಸರಿಬಾತ್‌ ನ್ನು ಪ್ರಸಾದವನ್ನಾಗಿ ನೀಡಲು ತೀರ್ಮಾನಿಸಲಾಗಿದೆ. ಈ ಕೇಸರಿ ಬಾತ್‌ ತಯಾರಿಕೆಗೆ 2 ಸಾವಿರ ಕೆಜಿ ರವೆ, 2 ಸಾವಿರ ಕೆಜಿ ಸಕ್ಕರೆ, 1 ಸಾವಿರ ಲೀಟರ್‌ ತುಪ್ಪ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಬಳಸಲಾಗುತ್ತಿದೆ. ಈ ಪ್ರಸಾದವನ್ನು ಹಬ್ಬದ ದಿನ ಭಕ್ತರಿಗೆ ನೀಡಲು ನಿರ್ಧರಿಸಲಾಗಿದೆ" ಎಂದು ಟ್ರಸ್ಟಿ ರಾಮ್‌ ಮೋಹನ ರಾಜು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+