ಪರಿಸರ ಸ್ನೇಹಿ ಜೀವನ ಶೈಲಿಗಾಗಿ 'ಇಕೋ ಚೇತನ' ಕಾರ್ಯಕ್ರಮ

'ಇಕೋ ಚೇತನ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಅದಮ್ಯ ಚೇತನ ಸಂಸ್ಥೆ ಏಪ್ರಿಲ್ 9ರಂದು ಹಮ್ಮಿಕೊಂಡಿದೆ. ಪರಿಸರ ಸ್ನೇಹಿ ಜೀವನ ಶೈಲಿಯನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ.

ಬೆಂಗಳೂರು, ಏಪ್ರಿಲ್ 7: 'ಇಕೋ ಚೇತನ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು 'ಅದಮ್ಯ ಚೇತನ' ಸಂಸ್ಥೆ ಏಪ್ರಿಲ್ 9ರಂದು ಹಮ್ಮಿಕೊಂಡಿದೆ. ಪರಿಸರ ಸ್ನೇಹಿ ಜೀವನ ಶೈಲಿಯನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ.

ನೀರಿನ ಸದ್ಭಳಕೆ, ಕಸ ನಿರ್ವಹಣೆ, ಹಸಿರು ಪರಿಸರಕ್ಕೆ ಉತ್ತೇಜನ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಾಗಿವೆ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಈ ಎಲ್ಲಾ ಕಾರ್ಯಕ್ರಮಗಳನ್ನು ಅದಮ್ಯ ಚೇತನ ಹಮ್ಮಿಕೊಂಡಿದೆ.

" Eco Chetana" a Green LifeStyle initiative of Adamya Chetana on April 9

ಪರಿಸರ ಸ್ನೇಹಿ ಜೀವನ ಶೈಲಿಗೆ ಸಂಬಂಧಿಸಿದ ಪ್ರದರ್ಶನ ಮತ್ತು ವಸ್ತುಗಳ ಮಾರಾಟವನ್ನು ಎಚ್.ಎಸ್.ಆರ್ ಲೇಔಟ್ ಮೈದಾನ ದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಭಾನುವಾರ 10:30 ಕ್ಕೆ ಈ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು ಸಂಜೆ 5 ಗಂಟೆವರೆಗೆ ಪ್ರದರ್ಶನ ನಡೆಯಲಿದೆ.

ಇಲ್ಲಿ ವಸ್ತುಗಳ ಮಾರಾಟ, ಪ್ರಾತ್ಯಕ್ಷಿಕೆ, ತರಬೇತಿಗಳು, ಕಾಂಪೋಸ್ಟ್ ಗೊಬ್ಬರ ತಯಾರಿ ಮತ್ತು ಕೈತೋಟದ ಬಗ್ಗೆ ಪ್ರಾತ್ಯಕ್ಷಿಕೆಗಳು ನಡೆಯಲಿವೆ. ಜತೆಗೆ ಚಿತ್ರ ಬರೆಯುವ ಸ್ಪರ್ಧೆ ಮತ್ತು ಹಾಡುಗಾರಿಕೆ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಸಚಿವರು ಹಾಗೂ ಅದಮ್ಯ ಚೇತನ ಸಂಸ್ಥೆಯ ಪೋಷಕರಾದ ಅನಂತ್ ಕುಮಾರ್ ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಶಾಸಕರಾದ ಸತೀಶ್ ರೆಡ್ಡಿ, ಡಾ ತೇಜಸ್ವಿನಿ ಅನಂತ್ ಕುಮಾರ್, ಪರಿಸರ ತಜ್ಞರಾದ ಯಲ್ಲಪ್ಪ ರೆಡ್ಡಿ, ಡಾ ಬಿ.ಎನ್ ವಿಶ್ವನಾಥ್ ಮತ್ತು ನಟಿ ತಾರಾ ಅನುರಾಧ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+