E Khata: ನಗರದ ಆಸ್ತಿ ಮಾಲೀಕರಿಗೆ ಇ-ಖಾತೆ ಗುಡ್ ನ್ಯೂಸ್: ಕರೆ ನೀಡಿದ ಡಿ.ಕೆ. ಶಿವಕುಮಾರ್
ಬೆಂಗಳೂರು, ಜುಲೈ 09: ರಾಜಧಾನಿ ಬೆಂಗಳೂರಿನಲ್ಲಿ ಇ-ಖಾತಾ ಅಭಿಯಾನ ಆರಂಭವಾಗಿದೆ. ಇತ್ತೀಚೆಗೆ ಡಿಕೆ ಶಿವಕುಮಾರ್ ಅವರೇ ಅಭಿಯಾನದ ಭಾಗವಾಗಿ ಮನೆ ಮನೆಗೆ ತೆರಳಿ ಇ-ಖಾತಾ ವಿತರಣೆ ಮಾಡಿದ್ದರು. ರಿಯಲ್ ಎಸ್ಟೇಟ್ ಬೆಳೆಯುತ್ತಿದೆ. ಆಸ್ತಿಗಳ ವಂಚನೇ ವಹೀವಾಟುಗಳಿಂದ ತಪ್ಪಿಸಿಕೊಳ್ಳಲು, ಆಸ್ತಿಗಳ ರಕ್ಷಣೆಗಾಗಿ ಸರ್ಕಾರ ಇ-ಖಾತಾ ಮೇಳ ಹಮ್ಮಿಕೊಂಡಿದೆ. ಜುಲೈ ತಿಂಗಳಾದ್ಯಂತ ಬಿಬಿಎಂಪಿ ಹಾಗೂ ಕಂದಾಯ ಇಲಾಕೆ ಸಹಕಾರದಲ್ಲಿ ಅಭಿಯಾನ ಶುರುವಾಗಿದೆ.
ಐದು ಗ್ಯಾರಂಟಿ ಕೊಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ 'ನಿಮ್ಮ ಆಸ್ತಿ, ನಿಮ್ಮ ಹಕ್ಕು' ಹೆಸರಿನಡಿ ಇ-ಖಾತಾ ಗ್ಯಾರಂಟಿ ನೀಡಲಾಗುತ್ತಿದೆ. ನಾಗರಿಕರು ವಂಚನೆಗೆ ಒಳಗಾಗದೇ ನಿಮ್ಮ ಆಸ್ತಿ ರಕ್ಷಣೆಗಾಗಿ, ಕಟ್ಟಡಗಳ ಇತರ ಪ್ರಕ್ರಿಯೆಗಳಿಗೆ ಇ-ಖಾತಾ ಅಗತ್ಯವಾಗಿದೆ. ಹೀಗಾಗಿ ಎಲ್ಲರು ತಪ್ಪದೇ ಇ-ಖಾತೆ ಪಡೆಯುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರೆ ನೀಡಿದ್ದಾರೆ. ಇ-ಖಾತಾ ಪಡೆದ ಅಸ್ತಿ ಮಾಲೀಕರ ವಿಡಿಯೋ ಹಂಚಿಕೊಂಡಿದ್ದಾರೆ.

ನಾಗರಿಕರು ಮೆಗಾ ಇ-ಖಾತಾ ಡ್ರೈವ್ ಮೂಲಕ ತಮ್ಮ ಆಸ್ತಿಯನ್ನು ವೇಗವಾಗಿ, ಪಾರದರ್ಶಕವಾಗಿ ಮತ್ತು ತೊಂದರೆ-ಮುಕ್ತ ರೀತಿಯಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಇದರ ವೇಗ ಇನ್ನಷ್ಟು ಹೆಚ್ಚಾಗಬೇಕು. ಯಾವುದೇ ವಿಳಂಬ ಇಲ್ಲದೇ ನೀವು ಆಸ್ತಿಗಳ ಡಿಜಿಟಲ್ ದಾಖಲೆಗಳನ್ನು ತ್ವರತವಾಗಿ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ. ಇದು ನಮ್ಮ ಆರನೇ ಗ್ಯಾರಂಟಿ ಎಂದು ಡಿಸಿಎಂ ಈ ಹಿಂದೆಯೇ ಅವರು ಉಲ್ಲೇಖಿಸಿದ್ದರು.
ಇ-ಖಾತಾ ಪಡೆಯಲು ಹೀಗೆ ಮಾಡಿ..
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರು ಈ ಕೂಡಲೇ ಇ-ಖಾತಾಗಾಗಿ ನೀವು ಇಲ್ಲಿ ನೀಡಲಾದ ಅಧಿಕೃತ ಜಾಲತಾಣ https://bbmpeaasthi.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ಈ ಸಂಖ್ಯೆ 9480683695 ಕರೆ ಮಾಡಿ ಪಡೆಯಬಹುದು ಎಂದು ಡಿಸಿಎಂ ತಿಳಿಸಿದ್ದಾರೆ.
Your Property, Your Right.
— DK Shivakumar (@DKShivakumar) July 9, 2025
Citizens are securing their property through the Mega E-Khata Drive in a fast, transparent, and hassle-free manner.
Apply online at: https://t.co/itoKeubq1g
Or Call: 9480683695
Get your #EKhata today! pic.twitter.com/4S6xt7O5M6
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಕರಡು ಇ-ಖಾತಾಗಳಿವೆ. ಅವುಗಳ ವಿತರಣೆಗೆ ಸರ್ಕಾರ ಅಭಿಯಾನ, ಮನೆ ಮನೆಗೆ ವಿತರಣೆ, ಇತರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈವರೆಗೆ 5.5 ಲಕ್ಷ ಇ-ಖಾತಾ ವಿತರಣೆ ಮಾಡಲಾಗಿದೆ. ಜನರಿಗೆ ಅನುಕೂಲವಾಗಲೆಂದು ಆನ್‌ಲೈನ್ ಅರ್ಜಿ ಸಲ್ಲಿಕೆ, ಜನಸೇವಕ, ದೂರವಾಣಿ, ಹೀಗೆ ವಿತರಣೇಗೆ ಅಗತ್ಯ ಎಲ್ಲ ಮಾರ್ಗಗಳನ್ನು ಬಿಬಿಎಂಪಿ ಅನುಸರಿಸುತ್ತಿದೆ.












Click it and Unblock the Notifications