E-Khata: ಜುಲೈ 1ರಿಂದ ಇ-ಖಾತಾ ಕಡ್ಡಾಯ: ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ

ಬೆಂಗಳೂರು, ಜೂನ್ 15: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಕರಡು ಇ-ಖಾತಾಗಳಿವೆ. ಸದ್ಯ ಐದು ಲಕ್ಷದಷ್ಟು ಇ-ಖಾತಾವನ್ನು ಆಸ್ತಿ ಮಾಲೀಕರಿಗೆ ವಿತರಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವವರಿಗೆ ಇ- ಖಾತಾ ಕಡ್ಡಾಯಗೊಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಮುಂದಿನ ತಿಂಗಳ ಜುಲೈ 1ರಿಂದ ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ತಮ್ಮ ಕಟ್ಟಡ ನಕ್ಷೆ, ಮಂಜೂರಾತಿ ಮಾಡಿಕೊಡಲು ಪಾಲಿಕೆಗೆ ಅರ್ಜಿ ಸಲ್ಲಿಸಿದರೆ ಅಂತವರು ಇ-ಖಾತಾ ಹೊಂದಿರಬೇಕು. ಇಲ್ಲವಾದಲ್ಲಿ ಸೂಕ್ತ ದಾಖಲೆಗಳ ಸಮೇತ ಇ-ಖಾತಾ ಪಡೆಯುವಂತೆ ಡಿಕೆ ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಇ-ಖಾತೆ ಪಡೆಯುವಂತೆ ಜನರಿಗೆ ಕರೆ ನೀಡಿದ್ದಾರೆ. ಇಲ್ಲವಾದರೆ ಮಂಜೂರಾತಿ ಸಿಗುವುದು ಅನುಮಾನ ಎನ್ನಲಾಗಿದೆ.

E-Khata is Mandatory for Those Applying for Building Plan Approval from July 1st DK Shivakumar

ನಿಮ್ಮಲ್ಲಿ ಇ-ಖಾತಾ ಇಲ್ಲದಿದ್ದರೆ ಚಿಂತೆ ಬೇಡ. ಪಡೆಯುವುದು ಮತ್ತಷ್ಟು ಸರಳ, ಸುಲಭವಾಗಿದೆ. ಕಟ್ಟಡ ಮಾಲೀಕರು ಸೂಕ್ತ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ https://bbmp.karnataka.gov.in/newkhata/ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿಬೇಕು. ನಿಗದಿತ ಶುಲ್ಕ ಪಾವತಿಸಿದರೆ ಎರಡನೇ ದಿನದಲ್ಲಿ ನೀವು ಅಂತಿಮ ಇ- ಖಾತಾವನ್ನು ಪಡೆದುಕೊಳ್ಳುತ್ತೀರಿ ಎಂದು ಅವರು ಡಿಕೆ ಶಿವಕುಮಾರ್ ವಿವರಿಸಿದ್ದಾರೆ.

ಮೊದಲು ಇ-ಖಾತಾವನ್ನು ಬೆಂಗಳೂರು ಒನ್, ಬಿಬಿಎಂಪಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಪಡೆಯಬೇಕಿತ್ತು. ಇದೀಗ ನೀವು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಪಡೆಯಬಹದು. ಸಾಲದೆಂಬಂತೆ ಇತ್ತೀಚೆಗೆ ಬಿಬಿಎಂಪಿಯು 'ಜನಸೇವಕ' ವ್ಯವಸ್ಥೆ ಜಾರಿಗೆ ತಂದಿದೆ. ನೀವು ಆನ್‌ಲೈನ್‌ನಲ್ಲಿ ಇಲ್ಲವೇ ಜನಸೇವಕ ಸಹಾಯವಾಣಿಗೆ ಕರೆ ಮಾಡಿದರೆ ಮನೆಗೆ ಬಾಗಲಿಗೆ ಬಂದು ಎರಡೇ ದಿನದಲ್ಲಿ ನಿಮಗೆ ಅಂತಿಮ ಇ-ಖಾತಾ ನೀಡುತ್ತಾರೆ.

ಇ-ಖಾತೆಗೆ ಈ ದಾಖಲೆಗಳಿದ್ದರೆ ಸಾಕು

ಇನ್ನು ಯಾರೆಲ್ಲ ಈ ಖಾತಾ ಪಡೆದಿಲ್ಲವೋ ಅಂತಹ ಕಟ್ಟಡ ಮಾಲೀಕರು 'ಆಧಾರ್ ಕಾರ್ಡ್, ಆಸ್ತಿ ತೆರಿಗೆ ಎಸ್‌.ಎ.ಎಸ್ ಸಂಖ್ಯೆ, ಮಾರಾಟ ಅಥವಾ ನೋಂದಾಯಿತ ಪತ್ರ, ಸ್ವತ್ತಿನ ಛಾಯಾಚಿತ್ರ'' ಈ ಎಲ್ಲ ದಾಖಲೆಗಳ ಮೂಲಕ https://bbmp.karnataka.gov.in/newkhata/ ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಇಲ್ಲವೇ 080-4920-3888 ಗೆ ಕರೆ ಮಾಡಿ (ಜನಸೇವಕ) ಮನೆಯಲ್ಲಿಯೇ ಕುಳಿತ ಇ-ಖಾತಾ ಪಡೆಯಬಹುದು.

ಬಿಬಿಎಂಪಿ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದೆ. ಆದರೆ ಅದನ್ನು ಪರಿಣಾಮಕಾರಿಯಾಗಿ ವಿತರಣೆ ಗುರಿ ಹೊಂದಿದರೂ ಸಹಿತ, ನಿರಂತರ ಜಾಗೃತಿ ಕಾರ್ಯಕ್ರಮಗಳ ಮಧ್ಯೆ ಇ-ಖಾತಾ ಕೇವಲ ಐದು ಲಕ್ಷ ವಿತರಣೆ ಆಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವಂತೆ ಬಿಬಿಎಂಪಿ ಕರೆ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+