E Khata: ಬೆಂಗಳೂರಿಲ್ಲಿ ಆಸ್ತಿಗಳಿಗೆ ಇ - ಖಾತಾ: ಹೊಸ ಅಪ್ಡೇಟ್ಸ್‌ ಕೊಟ್ಟ ಡಿ.ಕೆ ಶಿವಕುಮಾರ್‌!

E Khata: ಇ - ಖಾತಾಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್‌ ಅವರು ಬಿಗ್‌ ಅಪ್ಡೇಟ್ಸ್‌ ಕೊಟ್ಟಿದ್ದಾರೆ. ಆಸ್ತಿಗಳ ಸಂರಕ್ಷಣೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಎಲ್ಲಾ ಮಾದರಿಯ ಆಸ್ತಿಗಳಿಗೆ ಇ ಖಾತಾವನ್ನು ಕಡ್ಡಾಯ ಮಾಡಿದೆ. ಆದರೆ, ಕಳೆದ ಒಂದು ವರ್ಷದಿಂದಲೂ ಇ ಖಾತಾವನ್ನು ನೀಡುತ್ತಿದ್ದರೂ ಎಲ್ಲಾ ಆಸ್ತಿಗಳಿಗೆ ಇಲ್ಲಿಯ ವರೆಗೆ ಪೂರ್ಣ ಪ್ರಮಾಣದಲ್ಲಿ ಇ ಖಾತಾವನ್ನು ನೀಡಲು ಸಾಧ್ಯವಾಗಿಲ್ಲ. ಆದರೆ, ಇ ಖಾತಾಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಮಾತನಾಡಿದ್ದಾರೆ.

ನಗರದ 25 ಲಕ್ಷ ಆಸ್ತಿಗಳನ್ನು ಈ ಖಾತಾ ಮಾಡಲು ಹೇಳಿದ್ದು, ಎಲ್ಲಾ ಆಸ್ತಿಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡುತ್ತಿದ್ದು, ಈಗಾಗಲೇ 5 ಲಕ್ಷ ಆಸ್ತಿಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಇದನ್ನು ದೊಡ್ಡ ಅಭಿಯಾನವಾಗಿ ಮಾಡುತ್ತಿದ್ದೇವೆ. ಆ ಮೂಲಕ ತೆರಿಗೆ ಹಾಗೂ ಆಸ್ತಿ ದಾಖಲಾತಿಯಲ್ಲಿ ಪಾರದರ್ಶಕತೆ ತರಲಾಗುತ್ತಿದೆ. ಇದಕ್ಕಾಗಿ ನ್ಯಾಷನಲ್ ಇ - ಗವರ್ನೆನ್ಸ್ ಅವಾರ್ಡ್ ಕೂಡ ಸಿಕ್ಕಿದೆ ಎಂದು ಹೇಳಿದ್ದಾರೆ.

E-Khata for properties in Bengaluru D K Shivakumar gives new updates

ಶೀಘ್ರ ಇ ಖಾತಾ ನೀಡಲು ಸೂಚನೆ: ಇನ್ನು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರವು ಆಸ್ತಿಗಳಿಗೆ ಇ ಖಾತಾ ನೀಡುವುದನ್ನು ಕಡ್ಡಾಯ ಮಾಡಿದೆಯಾದರೂ ಸಮಸ್ಯೆ ಹಾಗೂ ಕೆಲವೊಂದು ಗೊಂದಗಳು ಮುಂದುವರಿದಿವೆ. ಇದೀಗ ಈ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಇ ಖಾತಾಗೆ ಸಂಬಂಧಿಸಿದ ಗೊಂದಲಗಳನ್ನು ಶೀಘ್ರ ಪರಿಹರಿಸುವಂತೆ ಹಾಗೂ ಕಾಲ ಮಿತಿಯಲ್ಲಿ ಈ ಖಾತಾ ವಿತರಣೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಇ - ಖಾತಾ ಎಂದರೇನು: ಆಸ್ತಿಗಳ ನೋಂದಣಿಗೆ ಇ -ಖಾತಾ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಿದೆ. ನಿವೇಶನಗಳ ಮಾರಾಟ ಹಾಗೂ ಮನೆ ಮಾರಾಟದ ವಿಷಯದಲ್ಲಿ ಅಕ್ರಮಗಳು ನಡೆಯುವುದನ್ನು ತಪ್ಪಿಸುವುದು ಹಾಗೂ ಜನರು ಮೋಸ ಹೋಗದಂತೆ ತಡೆಯುವುದು ಇದರ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಅಲ್ಲದೇ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದವರು ಅಂದರೆ ಆಸ್ತಿ ತೆರಿಗೆ ಕಟ್ಟದೆ ಮೋಸ ಮಾಡುತ್ತಿರುವವರನ್ನೂ ಆಸ್ತಿ ತೆರಿಗೆ ವ್ಯಾಪ್ತಿಗೆ ತರವುದು ಸೇರಿದೆ.

ಇ - ಖಾತಾಗೆ ಬೇಕಾಗುವ ಪ್ರಮುಖ ದಾಖಲೆಗಳು

* ನಿಮ್ಮ ಕರಡು ಇ-ಖಾತಾವನ್ನು ವಾರ್ಡ್‌ ವಾರು ಪಟ್ಟಿಯಲ್ಲಿ ಹುಡುಕಬಹುದು. (ನಿಮ್ಮ ವಾರ್ಡ್ ಮತ್ತು ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ತಿಳಿದುಕೊಳ್ಳಿ)

* ಈ ಕೆಳಗಿನ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಿ, ನಿಮ್ಮ ಅಂತಿಮ ಇ-ಖಾತಾವನ್ನು ಪಡೆದುಕೊಳ್ಳಬಹುದು.

ಅ. ಆಧಾರ್ ಕಾರ್ಡ್‌

ಆ. ಆಸ್ತಿ ತೆರಿಗೆ ID

ಇ. ಕ್ರಯ/ನೊಂದಾಯಿತ ಪತ್ರ ಸಂಖ್ಯೆ

ಈ. ಬೆಸ್ಕಾಂ ID (ಖಾಲಿ ನಿವೇಶನ ಆಯ್ಕೆ) ಈ ದಾಖಲೆಗಳು ಬೇಕಾಗುತ್ತವೆ.

3. ಅಪೂರ್ಣ ಮಾಹಿತಿ ಅಥವಾ ಬಿಬಿಎಂಪಿ ದಾಖಲೆಗಳೊಂದಿಗೆ ಹೊಂದಾಣಿಕೆಯಾಗದಿದ್ದರೆ ಮಾತ್ರ ಪ್ರಕರಣಗಳು ನಿರ್ಧಾರಕ್ಕಾಗಿ ಎಆರ್‌ಒಗಳಿಗೆ ಕಳುಹಿಸಲಾಗುತ್ತದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಯಾವುದಾದರೂ ಗೊಂದಲಗಳಿದ್ದರೆ, ಇ-ಖಾತಾ ಸಹಾಯ ವಾಣಿ ಸಂಖ್ಯೆ: 94806 83695 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಕಸ ವಿಲೇವಾರಿ ಬಗ್ಗೆ ಹೇಳಿದ್ದೇನು: ಕಸ ವಿಲೇವಾರಿ ಕುರಿತ ಗುತ್ತಿಗೆಗೆ 15 ದಿನದಲ್ಲಿ ಟೆಂಡ‌ರ್ ಕರೆಯಲಾಗುವುದು. ಬೆಂಗಳೂರಿನ ಕಸ ವಿಲೇವಾರಿ ವಿಚಾರವಾಗಿ ದೊಡ್ಡ ಕ್ಷೇತ್ರಗಳಲ್ಲಿ ಎರಡರಂತೆ ಪ್ರತಿಯೊಂದು ಕ್ಷೇತ್ರಕ್ಕೆ ಒಂದೊಂದರಂತೆ ಒಟ್ಟು 33 ಪ್ಯಾಕೇಜ್ ಕರೆಯಲು ತೀರ್ಮಾನಿಸಿದ್ದೇವೆ.
ಸ್ವಚ್ಛ ಬೆಂಗಳೂರು ಕಾರ್ಯಕ್ರಮದ ಮೂಲಕ ಬೆಂಗಳೂರಿನ ಎಲ್ಲಾ ಭಾಗಗಳಲ್ಲಿ ಇರುವ ಕಟ್ಟಡ ತ್ಯಾಜ್ಯ ಹಾಗೂ ಇತರೆ ಕಸವನ್ನು ಒಮ್ಮೆಲೇ ಸ್ವಚ್ಛ ಮಾಡಲು ತೀರ್ಮಾನಿಸಲಾಗಿದೆ ಎಂದು ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಸಾರ್ವಜನಿಕರು ಸಹ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿ, ಎಲ್ಲೆಲ್ಲಿ ಕಸ ಇದೆ ಎಂದು ಜಿಬಿಎ ಅಧಿಕಾರಿಗಳಿಗೆ ಆ್ಯಪ್ ಅಥವಾ ನೀಡಲಾಗುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ. ತನ್ಮೂಲಕ ಅಲ್ಲಿರುವ ಕಸ ತೆಗೆಯಲು ಅಧಿಕಾರಿ, ಮಾರ್ಷಲ್‌ಗೆ ನೆರವು ನೀಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+