E-Khata: ಬೆಂಗಳೂರು ಆಸ್ತಿದಾರರಿಗೆ ಡಿಕೆ ಶಿವಕುಮಾರ್ ಇ-ಖಾತಾ ಗುಡ್‌ನ್ಯೂಸ್: ಸುಳ್ಳು ಎಂದ ನೆಟ್ಟಿಗರು!
E-Khata: ಬೆಂಗಳೂರಿನ ಆಸ್ತಿದಾರರಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಆಸ್ತಿದಾರರು ಇ ಖಾತಾ ಪಡೆದುಕೊಳ್ಳುವುದಕ್ಕೆ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಈ ಆಸ್ತಿದಾರರಿಗೆ ಡಿ.ಕೆ ಶಿವಕುಮಾರ್ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಬೆಂಗಳೂರಿನ ಆಸ್ತಿದಾರರ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್ ಅವರು, ನಮ್ಮ ಬೆಂಗಳೂರು ಈಗ ಮತ್ತಷ್ಟು ಸುಲಭ, ಪಾರದರ್ಶಕವಾದ ಮತ್ತು ನಾಗರಿಕ ಸ್ನೇಹಿ ಆಡಳಿತದತ್ತ ಹೆಜ್ಜೆ ಹಾಕುತ್ತಿದೆ. ಈಗಾಗಲೇ 23 ಲಕ್ಷಕ್ಕೂ ಅಧಿಕ ಇ-ಖಾತಾಗಳನ್ನು ವಿತರಿಸಿ ಐತಿಹಾಸಿಕ ದಾಖಲೆ ಮಾಡಲಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ಸುಲಭ ಮತ್ತು ಪಾರದರ್ಶಕ ಕಂದಾಯ ಸೇವೆಗಳನ್ನು ಒದಗಿಸುವುದೇ ನಮ್ಮ ಉದ್ದೇಶವಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ ಆಸ್ತಿದಾರರು ಇ ಖಾತಾ ವಿಚಾರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ 23 ಲಕ್ಷಕ್ಕೂ ಹೆಚ್ಚು ಇ - ಖಾತಾ ವಿತರಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ 23 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಇ ಖಾತಾ ವಿತರಣೆ ಮಾಡಲಾಗಿದೆ.
ಎಸ್‌ಎಂಎಸ್ ಮತ್ತು ವಾಟ್ಸ್ ಆ್ಯಪ್ ಮೂಲಕ ನೇರವಾಗಿ ನಾಗರಿಕರಿಗೆ ಡಿಜಿಟಲ್ ಪ್ರತಿ ರವಾನೆ ಮಾಡಲಾಗುತ್ತಿದೆ. ಅಲ್ಲದೆ ಒಂದೇ ದಿನದಲ್ಲಿ 13 ಲಕ್ಷ ಇ ಖಾತಾಗಳನ್ನು ವಿತರಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಲಾಗಿದೆ. ಆಸ್ತಿ ದಾಖಲೆಗಳ ಡಿಜಿಟಲ್ ರೂಪಾಂತರಕ್ಕಾಗಿ 2025ರ ರಾಷ್ಟ್ರೀಯ ಆಡಳಿತ ಚಿನ್ನದ ಪ್ರಶಸ್ತಿ ಲಭಿಸಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿಕೊಂಡಿದ್ದಾರೆ.
ಪ್ರತಿಯೊಬ್ಬ ನಾಗರಿಕರ ಆಸ್ತಿ ದಾಖಲೆಗಳು ಸುರಕ್ಷಿತ
ಇನ್ನು ಬೆಂಗಳೂರು ನಗರದ ಪ್ರತಿಯೊಬ್ಬ ಆಸ್ತಿದಾರರ ದಾಖಲೆಗಳು ಸುರಕ್ಷಿತವಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ತಿಳಿಸಿದೆ. ಆಸ್ತಿ ವಹಿವಾಟಿಗೂ ಮುನ್ನ ನಾಗರಿಕರು ಸುರಕ್ಷಿತವಾಗಿ ಪ್ರಮುಖ ವಿವರಗಳನ್ನು ಇ ಖಾತಾದಲ್ಲಿ ಸೇರಿಸಬಹುದು. ದೃಢೀಕರಿಸಿದ ಮಾಲೀಕತ್ವಕ್ಕಾಗಿ ಮಾಲೀಕರ ಆಧಾರ್ ಕಾರ್ಡ್ - ಕಾನೂನು ನಿಖರತೆಗಾಗಿ ನೋಂದಾಯಿತ ಮಾರಾಟ ಪತ್ರ, ಸರಿಯಾದ ಗುರುತಿಸುವಿಕೆಗಾಗಿ ಆಸ್ತಿ ಫೋಟೋ ಮತ್ತು ಜಿಪಿಎಸ್ ಹಾಗೂ ಯಾವುದೇ ಆಡಚಣೆ ಇಲ್ಲದ ದಾಖಲೆ ಜೋಡಣೆಗಾಗಿ ಬೆಸ್ಕಾಂ ಮೀಟರ್ ಐಡಿ.
ನೆಟ್ಟಿಗರು ಹೇಳಿದ್ದೇನು
ಆಸ್ತಿದಾರರಿಗೆ ಇ ಖಾತಾ ವಿಚಾರದಲ್ಲಿ ಗುಡ್‌ನ್ಯೂಸ್ ನೀಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಆದರೆ ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾದಚಾರಿ ಮಾರ್ಗ / ರಸ್ತೆ ಸಮಸ್ಯೆಯನ್ನು ನಿಭಾಯಿಸುವುದಾಗಿ ಭರವಸೆ ನೀಡಲಾದ ಅಪ್ಲಿಕೇಶನ್‌ಗಳು ಏನಾಯಿತು? ಬೆಳ್ಳಂದೂರು ಮುಖ್ಯ ರಸ್ತೆಯ ಪಾದಚಾರಿ ಮಾರ್ಗಗಳನ್ನು ಹಲವು ಸ್ಥಳಗಳಲ್ಲಿ ಅತಿಕ್ರಮಣ ಮಾಡಲಾಗಿದೆ ಮತ್ತು ದೂರು ನೀಡಿದ ನಂತರವೂ ಯಾರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಸುಳ್ಳು - ಸಾಮಾನ್ಯ ನಾಗರಿಕರು ಅನೇಕ ಬಾರಿ ಕಚೇರಿಗಳಿಗೆ ಅಲೆದಾಡಿ, ಪರಿಶೀಲನೆ ಮಾಡಬೇಕಾಗುತ್ತದೆ. ಭ್ರಷ್ಟ ಅಧಿಕಾರಿಗಳು ಮ್ಯಾನಿಪುಲೇಟ್ ಮಾಡಿದ ಕೆಟ್ಟ ಸಾಫ್ಟ್‌ವೇರ್. ಇದು ಕಾಂಗ್ರೆಸ್ ಮತ್ತು ಭ್ರಷ್ಟ ಅಧಿಕಾರಿಗಳಿಗೆ ಪರಿಸ್ಥಿತಿ ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.













Click it and Unblock the Notifications