E-Khata: ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ನಿರೀಕ್ಷಿತ ಈ ಭಾಗದ ಜನರಿಗೆ ಭರ್ಜರಿ ಗುಡ್‌ ನ್ಯೂಸ್

E-Khata: ಬೆಂಗಳೂರಿನಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಎರಡು ಟರ್ಮಿನಲ್‌ಗಳನ್ನು ಒಳಗೊಂಡಿದ್ದರೂ ಸಹ ಪ್ರಯಾಣಿಕರ ದಟ್ಟಣೆ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆ ನಗರದ ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಸ್ಥಳಗಳನ್ನು ಸಹ ಗುರುತಿಸಿದೆ. ಈ ಪೈಕಿ ಬಿಡದಿ ಕೂಡ ಒಂದಾಗಿದೆ. ಇದೀಗ ಈ ಭಾಗದ ಜನರಿಗೆ ಇ-ಖಾತಾ ವಿಚಾರವಾಗಿ ಗುಡ್‌ ನ್ಯೂಸ್‌ ಸಿಕ್ಕಿದೆ.

ಬಿಡದಿ ಪುರಸಭೆ ಹಮ್ಮಿಕೊಂಡಿದ್ದ ಇ-ಖಾತೆ ಆಂದೋಲನ ಸಂಪೂರ್ಣ ಯಶಸ್ವಿ ಆಗಿದೆ. ಸುಮಾರು 500ಕ್ಕೂ ಹೆಚ್ಚು ಇ-ಖಾತೆ ನಮೂನೆಗಳನ್ನು ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸುವ ಮಾದರಿ ಕಾರ್ಯಕ್ಕೆ ಪುರಸಭೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಧರಿಸಿದ್ದಾರೆ.

E-Khata Big Good News for Bidadi Parts Residents

ಬೆಂಗಳೂರಿನ ಅಕ್ಕಪಕ್ಕದಲ್ಲೇ ಇರುವ ಮೆಟ್ರೋ, 2ನೇ ಅಂತಾರಾಷ್ಟ್ರೀಯ ವಿಮಾನಾ ನಿಲ್ದಾಣ‌, ಟೌನ್‌ಶಿಪ್‌ ನಿರ್ಮಾಣ ನಿರೀಕ್ಷೆಯಲ್ಲಿರುವ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ನಿವೇಶನ ಖರೀದಿಸುವುದು ಅಷ್ಟು ಸುಲಭದ ಮಾತಲ್ಲ. ಇ-ಖಾತೆ ಪಡೆದುಕೊಳ್ಳುವುದು ಅಷ್ಟೇ ಕಷ್ಟ ಆಗಿತ್ತು. ಆದರೆ, ಇದೀಗ ಇ-ಖಾತೆ ಆಂದೋಲನವು ಖಾತೆ ಸಮಸ್ಯೆಗೆ ನಾಂದಿಯಾಡಲು ಪ್ರಮುಖ ಕಾರಣವಾಗಿದೆ. ಇದರಿಂದ ಅನಗತ್ಯ ವಿಳಂಬ, ಕಚೇರಿಗೆ ಅಲೆದಾಟ, ಯಾವುದೇ ಕಿರಿಕಿರಿ ಇಲ್ಲದೆ ಖಾತೆ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.

ಬಿಡದಿ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿಇತ್ತೀಚೆಗೆ ನಡೆದ ಇ-ಖಾತಾ ಆಂದೋಲನದಲ್ಲಿಸಲ್ಲಿಕೆ ಆದ ಅರ್ಜಿಗಳ ಪೈಕಿ ಸುಮಾರು 500ಕ್ಕೂ ಹೆಚ್ಚು ಇ-ಖಾತಾ ನಮೂನೆಗಳನ್ನು ಅರ್ಜಿದಾರರ ಮನೆಬಾಗಿಲಿಗೆ ತಲುಪಿಸಲು ಪುರಸಭೆ ಅಧ್ಯಕ್ಷ ಎಂ.ಎನ್‌.ಅಧ್ಯಕ್ಷ ಹರಿಪ್ರಸಾದ್‌ ಮುಂದಾಗುದ್ದಾರೆ. ಈ ಮೂಲಕ ಪುರಸಭೆ ಸಭಾಂಗಣದಲ್ಲಿ ಕೆಲ ಆಸ್ತಿ ಮಾಲೀಕರಿಗೆ ಇ-ಸ್ವತ್ತು ಪತ್ರಗಳನ್ನು ಸಾಂಕೇತಿಕ ವಿತರಣೆಗೆ ಚಾಲನೆ ನೀಡಿದರು.

ಮನೆ ನಿರ್ಮಾಣ, ಬ್ಯಾಂಕ್‌ ಸಾಲ ಪಡೆಯಲು ಮತ್ತಿತರ ವಹಿವಾಟು ನಡೆಸಲು ಮಾಲೀಕರು ತಮ್ಮ ಸ್ವತ್ತುಗಳಿಗೆ ಇ-ಸ್ವತ್ತು ಪಡೆಯುವುದು ಅತ್ಯವಶ್ಯಕ. ಪ್ರಾಮುಖ್ಯತೆ ಇರುವ ಇ-ಸ್ವತ್ತು ಎಲ್ಲರಿಗೂ ನೀಡಬೇಕು ಎಂಬುದು ನಮ್ಮ ಗಿರಿಯಾಗಿದೆ ಎಂದು ಹೇಳಿದರು.

ಡಿಸೆಂಬರ್‌ 9, 2024ರಿಂದ ಜನವರಿ 2, 2025ರವರೆಗೆ ನಡೆದ ಆಂದೋಲನದಲ್ಲಿ ಪ್ರತಿ ವಾರ್ಡ್‌ಗೆ ತೆರಳಿ ಇ-ಖಾತೆ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 500ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿ ಕೇವಲ ಒಂದು ತಿಂಗಳೊಳಗೆ ಇ-ಖಾತೆಗಳನ್ನು ಸೃಜಿಸಲಾಗಿದೆ.

ನಮ್ಮ ಎಲ್ಲಾ ಸದಸ್ಯರು, ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರದಿಂದ ಇದು ಸಾಧ್ಯ ಆಗಿದೆ. ಮಾಲೀಕರ ಮನೆ ಬಾಗಿಲಿಗೆ ಹೋಗಿ ಆ ವಾರ್ಡ್‌ನ ಸದಸ್ಯರ ಸಮ್ಮುಖದಲ್ಲಿಇ-ಖಾತೆ ವಿತರಣಾ ಮಾಡಲಾಗುವುದು. ಇದರಿಂದ ಪುರಸಭೆ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವುದರ ಜೊತೆಗೆ ಪುರಸಭೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಲಿದೆ ಎಂದು ಹೇಳಿದ್ದರು.

ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಜಿ.ಲೋಹೀತ್‌ಕುಮಾರ್‌ ಮಾತನಾಡಿ, ಪುರಸಭೆಯಲ್ಲಿಹಲವು ದಿನಗಳಿಂದ ಇ-ಸ್ವತ್ತು ಪಡೆಯಲು ಸಾರ್ವಜನಿಕರು ಅಲೆದಾಡುವಂತಾಗಿತ್ತು. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಪ್ರತಿ ವಾರ್ಡ್‌ಗಳಲ್ಲಿಇ-ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಆಂದೋಲನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬಂದಿತ್ತು. ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ಮೊದಲ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+