B-Khata: ಇ - ಖಾತಾ & ಬಿ - ಖಾತಾ ಗೊಂದಲ: ಕರ್ನಾಟಕ ವಿಧಾನಸಭೆಯಲ್ಲಿ ಮಹತ್ವದ ಮಾಹಿತಿ, ಸರ್ಕಾರ ಹೇಳಿದ್ದೇನು ?

B-Khata: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಆಸ್ತಿಗಳಿಗೆ ಇ ಖಾತಾವನ್ನು ಪರಿಚಯಿಸಿದೆ. ಇದೇ ಸಂದರ್ಭದಲ್ಲಿ ಬಿ ಖಾತಾ ಆಸ್ತಿಗಳಿಗೆ ಎ - ಖಾತಾ ನೀಡಲಾಗುತ್ತಿದೆ. ವಿವಿಧ ಆಸ್ತಿದಾರರು ಕರ್ನಾಟಕದಲ್ಲಿ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಕರ್ನಾಟಕ ವಿಧಾನಸಭೆಯಲ್ಲಿ ಗಂಭೀರವಾದ ಚರ್ಚೆಯನ್ನು ಮಾಡಲಾಗಿದೆ. ವಿಧಾನಸಭೆಯಲ್ಲಿ ಇ ಖಾತಾ ಹಾಗೂ ಬಿ ಖಾತಾ ಗೊಂದಲಗಳ ಬಗ್ಗೆ ಚರ್ಚೆ ಆಗಿರುವುದೇನು ಹಾಗೂ ಈ ಸಂಬಂಧ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಎಲ್ಲಾ ಆಸ್ತಿದಾರರಿಗೂ ಇ ಖಾತಾ ಕಡ್ಡಾಯ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಬಿ ಖಾತಾ ಆಸ್ತಿದಾರರಿಗಂತೂ ನಿತ್ಯವೂ ನರಕ ಸದೃಶ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕೊನೆಗೂ ಈ ವಿಚಾರವಾಗಿ ಕರ್ನಾಟಕದ ವಿಧಾನಸಭೆಯಲ್ಲಿ ಗಂಭೀರವಾದ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಒಸಿ ಮತ್ತು ಸಿಸಿ ಪ್ರಮಾಣ ಪತ್ರಗಳಲ್ಲಿದೆ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡಗಳಿಗೆ ನೀರು ಮತ್ತು ವಿದ್ಯುತ್ ಪೂರೈಕೆ ಮಾಡುವುದನ್ನು ನಿಲ್ಲಿಸಿರುವ ಅಥವಾ ಒದಗಿಸಲಾಗದೆ ಇರುವ ಬಗ್ಗೆ ಬಿಜೆಪಿ ಶಾಸಕರು ಧ್ವನಿ ಎತ್ತಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ತಿದ್ದುಪಡಿ ತರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ. ಇದೀಗ ಇ ಖಾತಾ ಹಾಗೂ ಬಿ ಖಾತಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.

E-Khata and B-Khata Confusion Important information in Karnataka Assembly what did Karnataka govt say

ಇದೇ ಸಂದರ್ಭದಲ್ಲಿ ಬಿ - ಖಾತಾ ಹಾಗೂ ಇ - ಖಾತಾದ ಬಗ್ಗೆ ಮತ್ತು 30*40 ಸೈಟ್‌ಗಳಲ್ಲಿ ಕಟ್ಟಡ ನಿರ್ಮಾಣ ಮಾಡುವಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆದಿದೆ. ಇ ಖಾತಾ ವಿಚಾರದಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದೆ ಎಂದು ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಒಸಿ ಮತ್ತು ಸಿಸಿ ಇಲ್ಲದೆ ಕಟ್ಟಡ ನಿರ್ಮಾಣ ಸಾಧ್ಯವಿಲ್ಲ ಎಂದು ಕಾಯ್ದೆ ರೂಪಿಸಿರುವುದು ಸ್ವಾಗತಾರ್ಹ. ಆದರೆ, ರಾಜ್ಯದಲ್ಲಿ ಒಸಿ ಮತ್ತು ಸಿಸಿ ಇಲ್ಲದೆ ಅಂದಾಜು ನಾಲ್ಕು ಲಕ್ಷಕ್ಕೂ ಹೆಚ್ಚು ಆಸ್ತಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಬ್ಯಾಂಕ್ ಲೋನ್‌ಗಳನ್ನು ಪಾವತಿ ಮಾಡುವುದಕ್ಕೆ ಸಾಧ್ಯವಿಲ್ಲದೆ ಆಸ್ತಿಗಳು ಹರಾಜು ಪ್ರಕ್ರಿಯೆಗೆ ಬರುತ್ತಿವೆ ಎಂದು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಸಹ ಈ ಪ್ಲ್ಯಾನ್‌ ಸೆಕ್ಷನ್‌ನಲ್ಲಿ ಪಾಲಾಗಿದ್ದಾರೆ. ಈಗ ನಂಬಿಕೆ ನಕ್ಷೆ ಯೋಜನೆಯನ್ನು ರೂಪಿಸಿದ್ದಾರೆ ಕೆಲವೊಂದು ನಿರ್ದಿಷ್ಟ ತಿದ್ದುಪದಿಗಳನ್ನು ತನ್ನಿ ಎಂದು ಮುನಿರತ್ನ ಅವರು ಒತ್ತಾಯಿಸಿದ್ದಾರೆ. ಹಲವು ಬಿಜೆಪಿ ನಾಯಕರು ಈ ವಿಚಾರವಾಗಿ ಆಗ್ರಹಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಈ ವಿಚಾರದಲ್ಲಿ ಪರಿಹಾರಬೇಕಿದೆ. ಸಾಧ್ಯವಾದಷ್ಟು ಬೇಗ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ಅವರು ಹೇಳಿದ್ದಾರೆ. ಈ ವಿಚಾರವಾಗಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್ ಅವರು, ನಾವು ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘನೆ ಮಾಡಲು ಸಾಧ್ಯವಿಲ್ಲ. ಈ ರೀತಿ ಮಾಡಿದರೆ ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಹೇಳಿದರು.

ಮುಂದುವರಿದು ಕೆಎಂಸಿ ಆಕ್ಟ್‌ನ ಅನುಸಾರ ಒಸಿ ಮತ್ತು ಸಿಸಿ ಪಡೆಯುವುದು ಕಡ್ಡಾಯವಾಗಿದೆ. ಇದರಲ್ಲಿ ಯಾವುದೇ ಸಡಿಲಿಕೆ ಕಷ್ಟ ಎಂದು ಹೇಳಿದ್ದಾರೆ. ಬಿಲ್ಡಿಂಗ್‌ ನಿರ್ಮಾಣ ಉಲ್ಲಂಘನೆ ಇದೀಗ 5% ಇದೆ ಅದನ್ನು ಇನ್ಮುಂದೆ 15% ಹೆಚ್ಚಳ ಮಾಡುವುದಾಗಿ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+