Duniya Vijay Son: ಯುವಕನ ಮೇಲೆ ಹಲ್ಲೆ ಆರೋಪ; ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ದೂರು, ಏನಿದು ಪ್ರಕರಣ

Duniya Vijay Son: ಕನ್ನಡ ಚಿತ್ರರಂಗದ ಪ್ರಮುಖ ನಟ ದುನಿಯಾ ವಿಜಯ್ ಅವರ ಮಗನ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ದುನಿಯಾ ವಿಜಯ್ ಅವರ ಮಗ ಸಾಮ್ರಾಟ್ ವಿಜಯ್ ಅವರು ಮನೀಶ್ ಎಂಬ ಹುಡುಗನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ದೂರು ಸಹ ದಾಖಲಿಸಿಕೊಂಡಿದ್ದಾರೆ. ಏನಿದು ಪ್ರಕರಣ, ದುನಿಯಾ ವಿಜಯ್ ಅವರ ಮಗ, ಯುವಕನ ಮೇಲೆ ಹಲ್ಲೆ ಮಾಡಿದ್ದಾದರೂ ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ನಟ ದುನಿಯಾ ವಿಜಯ್ ಅವರ ಮಗ ಸಾಮ್ರಾಟ್ ವಿಜಯ್ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮನೀಶ್ ಎನ್ನುವ ಯುವಕ ದೂರು ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಲಿಖಿತವಾಗಿ ದೂರು ಸಹ ನೀಡಿದ್ದಾರೆ. ಹಲ್ಲೆಗೊಳಗಾಗಿದ್ದಾರೆ ಎಂದು ಹೇಳಲಾಗಿರುವ ಮನೀಶ್ ಮತ್ತು ಸಾಮ್ರಾಟ್ ವಿಜಯ್ ಇಬ್ಬರು ಸಹ ಮೈಸೂರು ರಸ್ತೆಯ ಆರ್‌ವಿ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಮ್ರಾಟ್ ವಿಜಯ್ ಅವರು ಕಾನೂನು / ಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Duniya Vijay Son Assault Allegation Against Samrat Vijay Complaint Filed What Is the Case

Duniya Vijay Son: ಪ್ರಕರಣದ ಹಿನ್ನೆಲೆ ಏನು ?

ಸಾಮ್ರಾಟ್ ವಿಜಯ್ ಹಾಗೂ ಮನೀಶ್ ನಡುವೆ ಕಾರು ಓವರ್ ಟೇಕ್ ಮಾಡಿದ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗಿದೆ. ಮನೀಶ್ ಅವರು ಮೊದಲ ವರ್ಷದ ಬಿಬಿಎ ಓದುತ್ತಿದ್ದಾರೆ. ಆಗಸ್ಟ್‌ 31ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ / ಆರ್‌ಆರ್ ನಗರದಲ್ಲಿ ಆರ್‌ಆರ್(ರಾಜರಾಜೇಶ್ವರಿ) ನಗರದ 80ಫೀಟ್ ರೋಡ್‌ನಲ್ಲಿ i20 ಕಾರ್‌ನಲ್ಲಿ ತಮ್ಮ ಸ್ನೇಹಿತರೊಂದಿಗೆ ಮನೀಶ್ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮನೀಶ್‌ ಅವರ ಕಾರ್‌ನ ಮುಂಭಾಗದಲ್ಲಿ ಸಾಮ್ರಾಟ್ ಮತ್ತು ಸಾಮ್ರಾಟ್‌ನ ಸ್ನೇಹಿತರು ಮತ್ತೊಂದು ಕಾರ್‌ನಲ್ಲಿ ಹೋಗುತ್ತಿದ್ದರು. ಆದರೆ ಮನೀಶ್ ಮತ್ತು ಆತನ ಸ್ನೇಹಿತರು i20 ಕಾರ್‌ನಲ್ಲಿ ಸಾಮ್ರಾಟ್‌ನ ಕಾರ್‌ನ ಓವರ್‌ಟೇಕ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗಿದೆ.

ಕಾರು ಓವರ್ ಟೇಕ್ ಮಾಡಿದ್ದನ್ನು ನೋಡಿ ಕೋಪಗೊಂಡಂತಹ ಸಾಮ್ರಾಟ್ ವಿಜಯ್ ಮತ್ತು ಆತನ ಸ್ನೇಹಿತರು ಕಾಲೇಜಿನ ಪಾರ್ಕಿಂಗ್‌ ಜಾಗದಲ್ಲಿ ಅಡ್ಡಗಟ್ಟಿ, "ನಿನ್ನೆ ನಮ್ಮ ಕಾರನ್ನೇ ಓವರ್‌ಟೇಕ್ ಮಾಡ್ತೀಯಾ"? ಅಂತ ಕೇಳಿದ್ರು. ಅಲ್ಲದೆ ಸೆಪ್ಟಂಬರ್‌ 1ರಂದು ಮಧ್ಯಾಹ್ನ 12ಗಂಟೆಯ ಸುಮಾರಿಗೆ ಮನೀಶ್‌ನ ಮೇಲೆ ಏಕಾಏಕಿ ಹಲ್ಲೆ ಸಹ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ 6 ಜನ ಸ್ನೇಹಿತರು ಅವರ ವೈಟ್ ಫೆರಾರಿ ಕಾರ್‌ನಲ್ಲಿ ಮನೀಶ್ ಅವರನ್ನು ಕೂರಿಸಿಕೊಂಡು ಆರ್‌ವಿ ಯೂನಿವರ್ಸಿಟಿ ಕಾಲೇಜಿನ ಹೊರಗಡೆ ಭಾಗ ಪಟ್ಟಣಗೆರೆ ಮುಖ್ಯ ರಸ್ತೆಗೆ ಕರೆದುಕೊಂಡು ಹೋಗಿದ್ದು ಹಲ್ಲೆ ಮಾಡಿದ್ದಾರೆ. ತಲೆಭಾಗಕ್ಕೆ, ಎದೆಭಾಗಕ್ಕೆ ಮತ್ತು ದೇಹದ ಹಲವು ಕಡೆಗಳಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ನಾನು ಕಾಲೇಜಿಗೆ ಬಂದು ಸ್ನೇಹಿತರ ಸಹಾಯದಿಂದ ರಾಷ್ಟ್ರೋತ್ಥಾನ ಆಸ್ಪತ್ರೆಗೆ ದಾಖಲಾಗಿದ್ದು, ಇವತ್ತು ವಕೀಲರ ಮೂಲಕ ಕೆಂಗೇರಿ ಪೊಲೀಸ್ ಠಾಣೆಗೆ ದೂರನ್ನು ಕೊಡ್ತಿದ್ದೇನೆ ಎಂದು ಗಾಯಾಳು ಮನೀಶ್ ಅವರು ಹೇಳಿದ್ದಾರೆ. ಇದೀಗ ದುನಿಯಾ ವಿಜಯ್‌ ಪುತ್ರ ಸಾಮ್ರಾಟ್‌ ವಿರುದ್ಧ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಗೆ ಮನೀಶ್ ದೂರ ನೀಡಿದ್ದಾರೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+