• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಧ್ಯಮಗಳೆದುರು ಕೈಮುಗಿದ ದುನಿಯಾ ವಿಜಯ್‌

|

ಬೆಂಗಳೂರು, ನವೆಂಬರ್ 07: ದಕ್ಷಿಣ ವಲಯದ ಡಿಸಿಪಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದ ನಟ ದುನಿಯಾ ವಿಜಯ್ ಮಾಧ್ಯಮಗಳೆದುರು ಕೈಮುಗಿದು ಇನ್ನು ಮುಂದೆ ಸರಿಯಾಗಿ ಇರುತ್ತೇನೆ ಎಂದು ಕೇಳಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ವಲಯದ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರ ಕಚೇರಿಗೆ ಕುಟುಂಬ ಸಮೇತ ಬಂದಿದ್ದ ದುನಿಯಾ ವಿಜಯ್ ಪೊಲೀಸರ ಅಣತಿಯಂತೆ ಬಾಂಡ್‌ ನೀಡಿ ಮುಚ್ಚಳಿಕೆ ಬರೆದುಕೊಟ್ಟು ಕ್ಷಮಾಪಣೆ ಕೇಳಿದ್ದಾರೆ.

ತಲೆಮರೆಸಿಕೊಂಡಿದ್ದ ದುನಿಯಾ ವಿಜಯ್ ಪತ್ನಿಗೆ ನಿರೀಕ್ಷಣಾ ಜಾಮೀನು

ಶಿಸ್ತು ಪಾಲಿಸಬೇಕು, ಕರೆದಾಗ ವಿಚಾರಣೆಗೆ ಬರಬೇಕು, ಕಾನೂನು ಮುರಿಯುವ ಕಾರ್ಯಕ್ಕೆ ಕೈ ಹಾಕಬಾರದು ಎಂಬಿತ್ಯಾದಿ ಸೂಚನೆಗಳನ್ನು ಪೊಲೀಸರು ದುನಿಯಾ ವಿಜಯ್‌ಗೆ ನೀಡಿದ್ದಾರೆ. ಎಲ್ಲ ನಿಯಮಗಳಿಗೂ ಬದ್ಧನಾಗಿರುತ್ತೇನೆಂದು ದುನಿಯಾ ವಿಜಯ್‌ ಒಪ್ಪಿಕೊಂಡಿದ್ದಾರೆ.

ವಿಚಾರಣೆಗೆ ಬರುವಂತೆ ದುನಿಯಾ ವಿಜಯ್‌ಗೆ ಅಣ್ಣಾಮಲೈ ಬುಲಾವ್‌

ಠಾಣೆಯಿಂದ ಹೊರ ಬಂದ ದುನಿಯಾ ವಿಜಯ್ ಮಾಧ್ಯಮಗಳೊಂದಿಗೆ ಮಾತನಾಡಿ 'ಇನ್ನು ಮುಂದೆ ಕಾನೂನು ಧಕ್ಕೆ ಆಗುವಂತಹಾ ಕೆಲಸ ಮಾಡುವುದಿಲ್ಲ' ಎಂದು ಹೇಳಿ ಕೈಮುಗಿದರು.

ಮಾಸ್ತಿಗುಡಿ ದುರಂತ: ನಟ ದುನಿಯಾ ವಿಜಯ್ ವಿರುದ್ಧ ಚಾರ್ಜ್ ಶೀಟ್

ದುನಿಯಾ ವಿಜಿ, ಎರಡನೇ ಪತ್ನಿ ಕೀರ್ತಿಗೌಡ ಹಾಗೂ ಪುತ್ರ ಸಾಮ್ರಾಟ್ ವಿಚಾರಣೆಗೆ ಹಾಜರಾಗಿದ್ರು. ವಿಜಿ ತಂದೆ-ತಾಯಿ ಕೂಡಾ ಡಿಸಿಪಿ ಕಚೇರಿಗೆ ಬಂದಿದ್ದರು.

English summary
Duniya Vijay and his family today attended to south police DCP office for inquiry. He told to media that he did not break law in future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X