ಬೆಂಗಳೂರು: ರಂಜಾನ್ ಪ್ರಯುಕ್ತ ಸಂಚಾರ ಮಾರ್ಗ ಬದಲಾವಣೆ
ಬೆಂಗಳೂರು, ಜೂನ್ 04: ನಾಳೆ (ಜೂನ್ 05) ರಂದು ರಂಜಾನ್ ಪ್ರಯುಕ್ತ ನಗರದ ಹಲವೆಡೆ ಸಾಮೂಹಿಕ ಪ್ರಾರ್ಥನೆಗಳು ನಡೆಯುವ ಕಾರಣ ನಗರದ ಹಲವೆಡೆ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.
ಈ ಬಗ್ಗೆ ನಗರ ಪೊಲೀಸ್ ಇಲಾಖೆಯು ಮಾಹಿತಿ ನೀಡಿದ್ದು, ಪ್ರಾರ್ಥನೆ ಕೂಟಗಳಿಗೆ ಬಮದೋಬಸ್ತ್ ಮತ್ತು ಸಾರ್ವಜನಿಕರಿಗೆ ಇದರಿಂದ ಆಗುವ ತೊಂದರೆ ತಪ್ಪಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಟ್ಯಾನರಿ ರಸ್ತೆಯ ಈದ್ಗಾ ಮೈದಾನದಲ್ಲಿ ಪ್ರಾರ್ಥನಾ ಕೂಟ ನಡೆಯುವುದರಿಂದ ಎಂಜಿ ರಸ್ತೆ ಕಡೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಮಾಸ್ಕ್ ರಸ್ತೆ ಮುಖಾಂತರ ಡೇವೀಸ್ ರಸ್ತೆ, ಲಿಂಗರಾಜಪುರ, ಹೆಣ್ಣೂರು ಮುಖ್ಯರಸ್ತೆಗೆ ತೆರಳಬಹುದಾಗಿದೆ.

ನರೇಂದ್ರ ಟೆಂಟ್ ಪೆರಿಯಾರ್ ನಗರದ
ನಾಗವಾರದಿಂದ ನರೇಂದ್ರ ಟೆಂಟ್ ಪೆರಿಯಾರ್ ನಗರದ ಕಡೆಗೆ ಬರುವ ವಾಹನಗಳನ್ನು ಹೊರ ರಿಂಗ್ ರಸ್ತೆಯಲ್ಲೇ ತಡೆದು ಹೆಣ್ಣೂರು ಜಂಕ್ಷನ್ ಕಡೆಗೆ ಮಾರ್ಗ ಬದಲಾವಣೆ ಮಾಡಿ ಲಿಂಗರಾಜಪುರ ಆಯಿಲ್ ಮಿಲ್ ಮುಖಾಂತರ ಮುಂದೆ ಸಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಪುಲಕೇಶಿ ನಗರ ಸಂಚಾರ ವ್ಯಾಪ್ತಿಯಲ್ಲಿ ಬದಲಾವಣೆ
ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಿಲ್ಲರ್ ರಸ್ತೆಯ ಈದ್ಗಾ ಮೈದಾನದ ಬಳಿ ವಾಹನಗಳನ್ನು ನಿರ್ಬಂಧಿಸಿ ಸುಲ್ತಾನಾ ಜಿ.ಗುಂಟಾ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಕಂಟೋನ್ಮೆಂಟ್ ಬಳಿ ಮಾರ್ಗ ಬದಲಾವಣೆ
ಜಯಮಹಲ್ ಕಡೆಯಿಂದ ಹಜ್ ಕ್ಯಾಂಪ್ ಕಡೆಗೆ ಬರುವ ವಾಹನಗಳನ್ನು ಕಂಟೋನ್ಮೆಂಟ್ ಕೆಳಸೇತುವೆ ಬಳಿ ಮಾರ್ಗ ಬದಲಾವಣೆ ಮಾಡಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಮೂಲಕ ತೆರಳಬಹುದಾಗಿದೆ.

ನಂದಿದುರ್ಗ ರಸ್ತೆಯಲ್ಲಿ ಮಾರ್ಗ ಬದಲಾವಣೆ
ನಂದಿದುರ್ಗ ರಸ್ತೆಯಲ್ಲಿ ಹಜ್ ಕ್ಯಾಂಪ್ ಕಡೆಗೆ ಬರುವ ವಾಹನಗಳನ್ನು ಬೆಂಸನ್‍ಟನ್ ಟೌನ್ ಬಳಿ ನಿರ್ಬಂಧಿಸಿ ಟ್ಯಾನರಿ ರಸ್ತೆ ಸೇರಿ ಮುಂದೆ ಸಾಗಬಹುದಾಗಿದೆ.











Click it and Unblock the Notifications