ಡಬ್ಬಿಂಗ್ ಬೇಕಾ? ಬೇಡ್ವಾ? ಮುಗಿಯದ ರಗಳೆಗೆ ಪರಿಹಾರ ಇಲ್ಲಿದೆ
ಡಬ್ಬಿಂಗ್ ಬೇಕಾ? ಬೇಡ್ವಾ? ಪ್ರತಿ ವರ್ಷ ನಡೆಯುವ ಜಟಾಪಟಿ ಮತ್ತೆ ಕಾವೇರುತ್ತಿದೆ. ಸೆಲೆಬ್ರಿಟಿಗಳು, ಬಿಟ್ಟಿ ಪ್ರಚಾರ ಪ್ರಿಯರು, ಟೆಕ್ಕಿಗಳು, ಅಪ್ಪಟ ಸಿನಿಪ್ರೇಮಿಗಳು, ಸಿನಿಮಾ ಅಧ್ಯಯನಶೀಲರಿಗೆ ಸಾಮಾಜಿಕ ಜಾಲ ತಾಣಗಳು ಚರ್ಚೆಯ ವೇದಿಕೆ ಒದಗಿಸಿವೆ.
ಆದರೆ, ಇದು ಮುಗಿಯದ ರಗಳೆಯಾಗುತ್ತಿದೆ. ಪ್ರತಿಷ್ಠೆಯ ಜಗಳ, ವೈಯಕ್ತಿಕ ನಿಂದನೆ ಮೂಲಕ ಮನರಂಜನಾ ಮಾಧ್ಯಮದ ಸುಧಾರಣೆಗಾಗಿ ಕೀಳುಮಟ್ಟಕ್ಕೆ ನಮ್ಮವರೇ ಇಳಿಯುತ್ತಿರುವುದು ದುರಂತದ ಸಂಗತಿ.[ಡಬ್ಬಿಂಗ್ ವಿರೋಧಿಗಳಿಗೆ ಸಾಮಾನ್ಯ ಪ್ರೇಕ್ಷಕನ ಪ್ರಶ್ನೆ]
ನಮಗೆ ಬೇಕಾಗಿರುವುದು ಅಪ್ಪಟ ಸದಭಿರುಚಿಯ ಚಿತ್ರ ಮಾತ್ರ. ಡಬ್ಬಿಂಗ್, ರಿಮೇಕ್, ಸ್ವಮೇಕ್, ರೀಮಿಕ್ಸ್, ಸ್ಪೂರ್ತಿ ಪಡೆದ ಚಿತ್ರಗಳು ಹೀಗೆ ಏನೇ ಬರಲಿ ಚಿತ್ರದಲ್ಲಿ ಗಟ್ಟಿತನ ಇದ್ದರೆ ಮಾತ್ರ ಉಳಿಯುತ್ತದೆ. ಜೊಳ್ಳು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತದೆ.
ಸಿಸಿಐ ಕೊಟ್ಟ ನಿರ್ಣಯದ ಬಗ್ಗೆ ಇಲ್ಲಿ ಓದಿರುತ್ತೀರಿ. ಮುಂದೇನು? ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ?
'ಡಬ್ಬಿಂಗ್ ಬಂದರೆ ಕಾರ್ಮಿಕರಿಗೆ ತೊಂದರೆ, ಸಂಸ್ಕೃತಿಗೆ ತೊಂದರೆ, ನಮ್ಮತನ ಕಳೆದುಕೊಳ್ಳುತ್ತೇವೆ' ಎಂಬ ಮಾತುಗಳು ಸಿನಿಕರ್ಮಿಗಳಿಂದ ಕೇಳಿ ಬಂದಿದೆ.[ಈ ಬಗ್ಗೆ ಇಲ್ಲಿ ಓದಿ]
ಡಬ್ಬಿಂಗ್ ಬೇಕಾ? ಬೇಡ್ವಾ? ಪ್ರಶ್ನೆಗೆ ಸಾಹಿತ್ಯವಲಯ ಏನು ಹೇಳಿದೆ ಇಲ್ಲಿ ಓದಿ.

ಕನ್ನಡಕ್ಕೆ ಪೂರಕವೇ ಹೊರತು ಮಾರಕವಲ್ಲ
'ಡಬ್ಬಿಂಗ್ ಕನ್ನಡಕ್ಕೆ ಪೂರಕವೇ ಹೊರತು ಮಾರಕವಲ್ಲ. ತನ್ನ ನಾಡಿನಲ್ಲಿ ತನ್ನ ನುಡಿಯಲ್ಲಿ ಮನರಂಜನೆಯನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬನ ಹಕ್ಕು. ಡಬ್ಬಿಂಗ್ ನಿಷೇಧ ಎಂಬ ಗುಮ್ಮ ಕನ್ನಡಿಗರಿಗೆ ಮನರಂಜನೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವ ಈ ಹಕ್ಕನ್ನು ಕಸಿದುಕೊಳ್ಳುತ್ತಲಿದೆ' ಎಂದು ಡಬ್ಬಿಂಗ್ ಪರ ಇರುವವರು ಹೇಳುತ್ತಿದ್ದಾರೆ.

ಕಾನೂನು ಪಾಲಿಸಿದರೆ ಏನಾಗಲಿದೆ
ಕನ್ನಡ ಭಾಷೆ ಆಧಾರಿತ ಕಾರ್ಯಕ್ರಮ ಇರಬೇಕು ಎನ್ನುವ ಹಕ್ಕು ಮಾಯವಾಗಲಿದೆ.ಬೇರೆ ಭಾಷೆ ಕಾರ್ಯಕ್ರಮ ಪ್ರಸಾರವನ್ನು ತಡೆಯಂತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಷ್ಟೇ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ಅಥವಾ ಪರಭಾಷೆ ಸಿನಿಮಾ ಪ್ರದರ್ಶನವಾಗಲಿ ಎಂದು ಕೇಳುವ ಹಕ್ಕು ಇರುವುದಿಲ್ಲ. ಡಬ್ಬಿಂಗ್ ಮಾಡುವವರಿಗೆ ರಹದಾರಿ ಸಿಗಲಿದೆ. ಇದರ ಪರಿಣಾಮವೇ ಸತ್ಯದೇವ್ ಐಪಿಎಸ್ ಎಂಬ ಚಿತ್ರ ತೆರೆಗೆ ಬರಲು ಸಾಧ್ಯವಾಗಿದೆ.

ಆಯ್ಕೆ ಮಾಡಿ ಡಬ್ಬಿಂಗ್
* ಭಾರಿ ಬಜೆಟ್ ಚಿತ್ರ ಉದಾ: ಬಾಹುಬಲಿ ಅಥವಾ ಕನ್ನಡ ಚಿತ್ರರಂಗದಿಂದ ಮಾಡಲು ಸಾಧ್ಯವೇ ಇಲ್ಲ ಎಂಬಂಥ ಚಿತ್ರಕ್ಕೆ ಡಬ್ಬಿಂಗ್ ಅವಕಾಶ ನೀಡಲಿ. ಗುಣಮಟ್ಟ ಸರಿ ಇಲ್ಲದಿದ್ದರೆ ಜನರೇ ತಿರಸ್ಕರಿಸುತ್ತಾರೆ. ಇಲ್ಲದಿದ್ದರೆ ಗಾಡ್ ಚಾನೆಲ್ ನಲ್ಲಿ ಬರುವ ಲೈವ್ ಟ್ರಾನ್ಸ್ ಲೇಷನ್ ರೀತಿ ಕಾಮಿಡಿಯಾಗುತ್ತದೆ ಅಷ್ಟೇ.
* ಶೈಕ್ಷಣಿಕ ಕಾರ್ಯಕ್ರಮ, ಡಿಸ್ಕವರಿ, ಎನ್ ಜಿಸಿ ಚಾನೆಲ್ ಪೋಗ್ರಾಂಗೆ ಅಡ್ಡಿ ಬೇಡ.
* ಪೋಗೋ, ಚಿಂಟು ಈಗಾಗಲೇ ಓಡುತ್ತಿವೆ.

ಧಾರಾವಾಹಿಗಳ ಡಬ್ಬಿಂಗ್
* ಧಾರಾವಾಹಿಗಳ ಡಬ್ಬಿಂಗ್ ಗೆ ಅವಕಾಶ ನಿಜಕ್ಕೂ ಪ್ರಶ್ನಾರ್ಹ.
* ಟಿಪ್ಪು ಸುಲ್ತಾನ್, ರಾಮಾಯಣಕ್ಕೆ ಅವಕಾಶ ಸಿಗದಿದ್ದ ಮೇಲೆ ಮಿಕ್ಕ ಧಾರಾವಾಹಿಗಳು ಬೇಡವೆ ಬೇಡ.
* ಇದೇ ಮಾತು ರಿಯಾಲಿಟಿ ಶೋಗೂ ಅನ್ವಯ.
* ಎಲ್ಲಾ ಚಿತ್ರಗಳನ್ನು ಡಬ್ ಮಾಡುವುದು ಬೇಡ.
* ಭಾರಿ ಬಜೆಟ್ ಚಿತ್ರಗಳಂತೆ ಭಾರಿ ಬಜೆಟ್ ಸೀರಿಯಲ್, ರಿಯಾಲಿಟಿ ಶೋಗಳನ್ನು ಡಬ್ ಮಾಡುತ್ತಾ ಹೋದರೆ ಕಷ್ಟ. ಇದನ್ನು ನಿರ್ಣಯಿಸಲು ಸಮಿತಿ ಬೇಕು.

ಸಮಿತಿ ನಿರ್ಧರಿಸಲಿ
ಡಬ್ ಮಾಡಲು ಯಾವ ಚಿತ್ರ ಯೋಗ್ಯ ಎಂಬುದನ್ನು ನಿರ್ಣಯಿಸಲು ಸಾಹಿತಿಗಳು, ಸಾಮಾನ್ಯ ಪ್ರೇಕ್ಷಕ ಸೇರಿದಂತೆ ಪರ-ವಿರೋಧಿಗಳ ಸಮಿತಿ ಅಗತ್ಯವಿದೆ. ತಮ್ಮ ಇಷ್ಟಕ್ಕೆ ರಿಮೇಕ್ ಮಾಡುತ್ತಾರೆ. ಡಬ್ ಏಕೆ ಮಾಡಬಾರದು ಎಂದು ವಾದಕ್ಕೆ ಇಳಿದರೆ, ಮತ್ತೆ ವಾದದ ಸರಣಿ ಮುಂದುವರೆಯಲಿದೆ.
* ರಿಮೇಕ್ ಚಿತ್ರಗಳ ಸಂಖ್ಯೆ ಗಣನೀಯವಾಗಿ ತಗ್ಗಿಸಿ.
* ಸ್ವಮೇಕ್ ಚಿತ್ರಗಳನ್ನು ಮಾಡಲು ಮನಸ್ಸು ಮಾಡಿ.
ಸದಭಿರುಚಿ ಚಿತ್ರ ನೀಡಿ, ಕನ್ನಡ ಚಿತ್ರರಂಗಕ್ಕೆ ಎಂದೂ ಸೋಲಿಲ್ಲ.