ಕುಡಿದ ನಶೆಯಲ್ಲಿ ಮಹಡಿಯಿಂದ ಹಾರಿ ಯುವಕ ಸಾವು

ಬೆಂಗಳೂರು, ಏ.11: ಕುಡಿದ ಮತ್ತಿನಲ್ಲಿ ಮಹಡಿಯಿಂದ ಹಾರಿ ಯುವಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರಿನ ಗಾಯತ್ರಿನಗರದಲ್ಲಿ ಈ ಘಟನೆ ನಡೆದಿದೆ, ಯುವಕನೊಬ್ಬ 2ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಶ್ರೀರಾಮಪುರದ ದೇವಯ್ಯ ಪಾರ್ಕ್ ನಿವಾಸಿ ವಿಜಯ್ ಜೈನ್ (24)ಮೃತರು.

ಗಾಯತ್ರಿನಗರ ಅಪಾರ್ಟ್‌ಮೆಂಟ್‌ಗೆ ರಾತ್ರಿ ಕುಡಿದ ಮತ್ತಿನಲ್ಲಿ ಅತಿಕ್ರಮವಾಗಿ ಪ್ರವೇಶಿಸಿದ್ದ ವಿಜಯ್, ಗ್ರಿಲ್ ಹಿಡಿದು ಮಹಡಿ ಹತ್ತಲು ಯತ್ನಿಸಿದ್ದ ಆಗ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Drunk man dies while climbing apartment

ಔಷಧ ವ್ಯಾಪಾರಿ ಉಮೇಶ್ ಎಂಬುವರ ಪುತ್ರ ವಿಜಯ್ ತನ್ನ ಪೋಷಕರ ಜೊತೆ ದೇವಯ್ಯ ಪಾರ್ಕ್ ಬಳಿ ನೆಲೆಸಿದ್ದ, ಉದ್ಯೋಗವಿಲ್ಲದೆ ಅಲೆಯುತ್ತಿದ್ದ ಮಗನಿಗೆ ಉಮೇಶ್ ಇತ್ತೀಚೆಗೆ ಮತ್ತಿಕೆರೆಯಲ್ಲಿ ತಮ್ಮ ಔಷಧ ಮಾರಾಟ ಮಳಿಗೆಯ ನಿರ್ವಹಣೆ ಜವಾಬ್ದಾರಿಯನ್ನು ನೀಡಿದ್ದರು. ಆದರೆ ವಿಪರೀತ ಮದ್ಯ ಮತ್ತು ಗಾಂಜಾ ವ್ಯಸನಿಯಾಗಿದ್ದ ವಿಜಯ್, ವ್ಯವಹಾರದ ಕಡೆ ಅಷ್ಟು ಗಮನ ಕೊಡುತ್ತಿರಲಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+