ಬೆಂಗಳೂರು ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಬೆಂಗಳೂರು, ಡಿ. 22 : ಬೆಂಗಳೂರು ನಗರದಲ್ಲಿ ಪ್ರಯಾಣಿಕರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದ, ಅಗತ್ಯ ದಾಖಲೆಗಳನ್ನು ಹೊಂದಿರದ ಆಟೋ ಚಾಲಕರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಭಾನುವಾರ ರಾತ್ರಿ, ಸೋಮವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ 2,500ಕ್ಕೂ ಹೆಚ್ಚು ಆಟೋಗಳನ್ನು ಜಪ್ತಿ ಮಾಡಲಾಗಿದೆ.

ರಾತ್ರಿ ಸಮಯದಲ್ಲಿ ಮತ್ತು ಬೆಳಗಿನ ಜಾವದಲ್ಲಿ ಆಟೋ ಚಾಲಕರು ಹೆಚ್ಚು ಹಣ ಸುಲಿಗೆ ಮಾಡುತ್ತಾರೆ, ಕರೆದ ಕಡೆ ಬರುವುದಿಲ್ಲ ಎಂಬ ದೂರಿನ ಅನ್ವಯ ಮಾರುವೇಷದಲ್ಲಿ ಸಂಚಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುವುದು, ಹೆಚ್ಚು ಹಣ ಕೇಳುವುದು ಮುಂತಾದ ಚಾಲಕರ ವರ್ತನೆಗಳು ಬೆಳಕಿಗೆ ಬಂದಿವೆ. [ಬೆಂಗಳೂರಿನ ಜನತೆಗೆ ವರವಾಗಿ ಬಂದಿದೆ ನ್ಯಾನೋ ಟ್ಯಾಕ್ಸಿ]

auto

ಭಾನುವಾರ ರಾತ್ರಿ ಮತ್ತು ಸೋಮವಾರ ಮುಂಜಾನೆ ಸಮಯದಲ್ಲಿ ಪೊಲೀಸರು ನಡೆಸಿದ ಈ ಕಾರ್ಯಾಚರಣೆಯಲ್ಲಿ 2,500 ಕ್ಕೂ ಹೆಚ್ಚು ಆಟೋಗಳನ್ನು ಜಪ್ತಿಗೊಳಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. [ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಕಡಿಮೆ?]

ದಾಳಿಯ ಸಂದರ್ಭದಲ್ಲಿ ಸರಿಯಾದ ದಾಖಲೆ ಪತ್ರಗಳನ್ನು ಇಟ್ಟುಕೊಳ್ಳದ, ಸಮವಸ್ತ್ರ ಧರಿಸದಿದ್ದ ಆಟೋಗಳನ್ನು ಕೂಡಾ ಜಪ್ತಿ ಮಾಡಲಾಯಿತು. ನಗರದ ಎಲ್ಲಾ ಸಂಚಾರಿ ಠಾಣೆಗಳ ವ್ಯಾಪ್ತಿಯಲ್ಲಿ ಈ ದಾಳಿ ಏಕಕಾಲದಲ್ಲಿ ನಡೆಸಲಾಗಿದ್ದು, ಜಪ್ತಿ ಮಾಡಿದ ಆಟೋಗಳ ಚಾಲಕರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಲಾಗಿದೆ. [ಆಟೋ ದರದ ಮಾಹಿತಿ ಬೇಕೆ ಮೆಸೇಜ್ ಮಾಡಿ]

Traffic Police

ಚಾಲಕರ ಪ್ರತಿಭಟನೆ : ಆಟೋ ಜಪ್ತಿ ಮಾಡಿದ ಪೊಲೀಸರ ವಿರುದ್ಧ ಆಟೋ ಚಾಲಕರು ಪ್ರತಿಭಟನೆ ನಡೆಸಿದರು. ಯಾವುದೇ ಸೂಚನೆ ನೀಡದೆ ಏಕಾಏಕಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಆಟೋ ಚಾಲಕರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+