ಬೆಂಗಳೂರಿನಲ್ಲಿ ನಿವೇಶನ ಮತ್ತು ಫ್ಲಾಟ್ ಖರೀದಿ ಮಾಡಬೇಕೇ ಇಲ್ಲಿದೆ ಗುಡ್‌ನ್ಯೂಸ್
ಬೆಂಗಳೂರಿನಲ್ಲಿ ನಿವೇಶನ ಖರೀದಿ ಮಾಡಬೇಕು ಎನ್ನುವುದು ಹಲವರು ಕನಸು. ಇದೀಗ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಬೇಕು ಎಂದು ವರ್ಷಗಳಿಂದ ಕನಸು ಕಾಣುತ್ತಿರುವವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ವಿವಿಧ ಕಾರಣಗಳಿಗೆ ಭೂಮಿಯ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲ್ಲೇ ಇದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಭೂಮಿಯ ಬೆಲೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯೂ ಇದೆ. ಇದರ ನಡುವೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿವೇಶನ ಖರೀದಿ ಮಾಡಬೇಕು ಎನ್ನುವವರಿಗೆ ಗುಡ್‌ನ್ಯೂಸ್ ಕೊಟ್ಟಿದೆ.
ಹೌದು ಬೆಂಗಳೂರಿನಲ್ಲಿ ನಿವೇಶನ ಖರೀದಿ ಮಾಡಬೇಕು ಎನ್ನುವವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಇ-ಹರಾಜಿನ ಮೂಲಕ 75 ಅಭಿವೃದ್ಧಿ ಹೊಂದಿದ ನಿವೇಶನಗಳನ್ನು ಮಾರಾಟಕ್ಕೆ ಇರಿಸಿದೆ. 10 ದಿನಗಳ ಹಿಂದೆ ಮಾರಾಟಕ್ಕೆ ಗುರುತಿಲಾಗಿದ್ದ 122 ನಿವೇಶನಗಳೊಂದಿಗೆ ಇದು ಒಟ್ಟು 197 ನಿವೇಶನಗಳಿಗೆ ಸೇರ್ಪಡೆ ಆದಂತೆ ಆಗಿದೆ.

ಕಡಿಮೆ ಬೆಲೆ ಉತ್ತಮ ನಿವೇಶನ: ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನ್ಯಾಯಯುತ ಬೆಲೆಯಲ್ಲಿ ನಿವೇಶಗಳ ಇ ಹರಾಜಿಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಸಣ್ಣದೊಂದು ಸೂರು ಇರಬೇಕು ಹಾಗೂ ನಿವೇಶನ ತೆಗೆದುಕೊಳ್ಳಬೇಕು ಎನ್ನುವವರಿಗೆ ಇದು ಸುವರ್ಣ ಅವಕಾಶವಾಗಿದೆ ಎಂದೇ ಹೇಳಬಹುದು. ಈಗ ನಡೆಯುತ್ತಿರುವ
ಇ-ಹರಾಜಿಗೆ ಅರ್ಜಿ ಸಲ್ಲಿಸುವುದಕ್ಕೆ ಮುಂದಿನ ತಿಂಗಳು (ಸೆಪ್ಟೆಂಬರ್ 6) ಕೊನೆಯ ದಿನವಾಗಿದೆ. ನಿವೇಶನದ ವಿವರಗಳು ಹಾಗೂ ಸ್ಥಳಗಳು ಬಿಡಿಎ ವೆಬ್‌ಸೈಟ್‌ನಲ್ಲಿ ಕೊಡಲಾಗಿದೆ. ಸೆಪ್ಟೆಂಬರ್ 8 ಹಾಗೂ 9 ರಂದು ನೇರ ಬಿಡ್ಡಿಂಗ್ ನಡೆಯಲಿದೆ ಎಂದು ಹೇಳಲಾಗಿದೆ.
ಇ - ಹರಾಜಿನಲ್ಲಿ ನಿವೇಶನ ಸಿಗುವ ಪ್ರದೇಶಗಳು: ಇನ್ನು ಬಿಡಿಎ ಇ - ಹರಾಜಿನಲ್ಲಿ ಸಿಗುವ ನಿವೇಶನಗಳ ವಿವರ ಇಲ್ಲಿದೆ. ಎಚ್‌ಎಸ್‌ಆರ್ ಲೇಔಟ್ 4 ನೇ ಹಂತ, ಎಚ್‌ಎಎಲ್ 2 ನೇ ಹಂತ, ಅರ್ಕಾವತಿ 7 ನೇ ಬ್ಲಾಕ್, ಅಂಜನಾಪುರ 10ನೇ ಬ್ಲಾಕ್, ಹೆಮ್ಮಿಗೆಪುರ, ಯುಎಂ ಕಾವಲ್, ಥಣಿಸಂದ್ರ, ರಾಚೇನಹಳ್ಳಿ ಹಾಗೂ ಬನಶಂಕರಿ 5ನೇ ಹಂತದಲ್ಲಿ ಇದೆ ಬಿಡಿಎ ಹೇಳಿದೆ.
ಫ್ಲಾಟ್ ಮೇಳ ಗುಡ್‌ನ್ಯೂಸ್: ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿವೇಶನಗಳ ಇ - ಹರಾಜಿನ ಸಂದರ್ಭದಲ್ಲಿಯೇ ಫ್ಲಾಟ್ ಮೇಳವನ್ನೂ ಸಹ ಘೋಷಿಸಿದೆ.
ನಮ್ಮ ಬೆಂಗಳೂರು ನಗರದಲ್ಲಿ ಸ್ವಂತ ಮನೆ ಹೊಂದುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಇದೊಂದು ಸುವರ್ಣಾವಕಾಶ. ಬಿಡಿಎ (BDA) ವತಿಯಿಂದ ಇದೇ ಆಗಸ್ಟ್ 30 ರಂದು, ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ, ಕಣಿಮಿಣಿಕೆ ವಸತಿ ಸಮುಚ್ಚಯದ ಬಳಿ "ಫ್ಲಾಟ್ ಮೇಳ"ವನ್ನು ಆಯೋಜಿಸಲಾಗಿದೆ ಎಂದು ಬಿಡಿಎ ತಿಳಿಸಿದೆ.
ಆಧುನಿಕ ತಂತ್ರಜ್ಞಾನದಿಂದ ನಿರ್ಮಿತವಾಗಿದ್ದು, ಹಸಿರು ಪರಿಸರ, ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಸಂಪರ್ಕ ಮತ್ತು ಇತರ ಹಲವು ಸೌಕರ್ಯಗಳನ್ನು ಒಳಗೊಂಡಿರುವ ಈ ಕೆಳಗಿನ ವಸತಿ ಸಮುಚ್ಚಯಗಳು ಮಾರಾಟಕ್ಕೆ ಲಭ್ಯವಿದೆ.
1. ಕೊಮ್ಮಘಟ್ಟ (ಎನ್.ಪಿ.ಕೆ.ಎಲ್) ಹಂತ-1 (3 BHK),
2. ಕೊಮ್ಮಘಟ್ಟ (ಎನ್.ಪಿ.ಕೆ.ಎಲ್) ಹಂತ-2 (2 BHK),
3. ಹುಣ್ಣಿಗೆರೆ ವಿಲ್ಲಾ (3&4 BHK),
4. ಆಲೂರು ಹಂತ-1 (1 BHK),
5. ಗುಂಜೂರು ಹಂತ-1 (1 BHK),
6. ಕಣಿಮಿಣಿಕೆ ಹಂತ-2 (2 BHK),
7. ಕಣಿಮಿಣಿಕೆ ಹಂತ-5 (3 BHK).
ನಿಮ್ಮ ನೆಚ್ಚಿನ ಫ್ಲಾಟ್ ಅನ್ನು ಬುಕ್ ಮಾಡಲು ಅಥವಾ ಖರೀದಿಸಲು ಈ ಮೇಳದಲ್ಲಿ ತಪ್ಪದೇ ಭಾಗವಹಿಸಿ. ಹೆಚ್ಚಿನ ಮಾಹಿತಿಗಾಗಿ ಬಿಡಿಎ (BDA) ವೆಬ್‌ಸೈಟ್ https://housing.bdabangalore.org ಗೆ ಭೇಟಿ ನೀಡಿ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.












Click it and Unblock the Notifications