Drashan News: ದರ್ಶನ್ ಖೈದಿ ನಂಬರ್ ಹಾಕಿಸಿ ಮಗು ಪೊಟೋ ಶೂಟ್‌ ಮಾಡಿದ ಅಭಿಮಾನಿಗೆ ಸಂಕಷ್ಟ!

ಬೆಂಗಳೂರು ಜುಲೈ 3: ನಟ ದರ್ಶನ್ ತೂಗುದೀಪ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಅವರ ಮೇಲೆ ಹಲವಾರು ಆರೋಪಗಳು ಕೇಳಿ ಬಂದಿವೆ. ಹೀಗಿರುವಾಗ ದರ್ಶನ್ ಅಭಿಮಾನಿಯೊಬ್ಬರು ಪುಟ್ಟ ಕಂದಮ್ಮನಿಗೆ ದರ್ಶನ್‌ ಖೈದಿ ನಂಬರ್ ಇರುವ ಬಟ್ಟೆ ಹಾಗೂ ಕೋಳ ಜೊತೆಗಿಟ್ಟು ಫೋಟೋ ಶೂಟ್ ಮಾಡಿಸಿ ಹುಚ್ಚಾಟ ಮೆರೆದಿದ್ದಾರೆ. ಸದ್ಯ ಈ ಹುಚ್ಚಾಟಕ್ಕೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹೌದು... ಸಾಮಾಜಿಕ ಜಾಲತಾಣದಲ್ಲಿ ಹುಚ್ಚಾಟ ಮೆರೆದ ದರ್ಶನ್ ಅಭಿಮಾನಿಯೊಬ್ಬರಿಗೆ ಸದ್ಯ ಸಂಕಷ್ಟ ಎದುರಾಗಿದೆ. ಮಗುವಿಗೆ ಖೈದಿ ನಂಬರ್ ಡ್ರೆಸ್ ಹಾಕಿಸಿ ಫೋಟೋ ಶೂಟ್ ಮಾಡಿಸಿ ಅತಿರೇಖದ ವರ್ತನೆ ತೋರಿದ ಪೋಷಕರಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೊಟೀಸ್ ನೀಡಲು ಮುಂದಾಗಿದೆ.

Drashan News trouble for the parents who shot the childs photo in darshan khaidi no 6106

ಈಗಾಗಲೇ ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಮಗುವಿಗೆ ಖೈದಿ ನಂಬರ್ ಹಾಕಿಸಿ ಫೋಟೋ ಶೂಟ್ ಮಾಡಿದ್ದ ಪೋಷಕರಿಗೆ ನೊಟೀಸ್ ಕೊಡಲು ಮುಂದಾಗಿದೆ.

ಒಂದು ವರ್ಷದ ಮಗುವಿಗೆ ದರ್ಶನ್ ಖೈದಿ ನಂಬರ್ 6106 ಇರುವ ಬಿಳಿ ಬಟ್ಟೆ ಹಾಕಿಸಿ, ಕೈ ಕೋಳ ಮಾದರಿ ಪಕ್ಕದಲ್ಲಿ ಇಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ದರ್ಶನ್‌ ಮೇಲಿನ ಅಭಿಮಾನದಿಂದಾಗಿ ಅವರು ಮಗುವಿಗೆ ಜೈಲು ಬಟ್ಟೆ ಹಾಕಿಸಿ ಜೈ ಡಿ ಬಾಸ್‌ ಎಂದು ಬರೆದು ಫೋಟೋಶೂಟ್ ಮಾಡಿಸಿದ್ದಾರೆ.

ಸದ್ಯ ಈ ಪೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲ ಜನ ದರ್ಶನ್ ಮೇಲಿನ ಅಭಿಮಾನದಿಂದಾಗಿ ಈ ವಿಷಯವನ್ನು ಪ್ರಶಂಸಿಸಿದರೆ, ಇನ್ನೂ ಕೆಲವರು ಇದನ್ನು ಹುಚ್ಚು ಅಭಿಮಾನ ಎಂದು ಕಾಮೆಂಟ್ ಮಾಡಿದ್ದಾರೆ.

Drashan News trouble for the parents who shot the childs photo in darshan khaidi no 6106

ದರ್ಶನ್ ಮೊಬೈಲ್ ಕವರ್

ಈ ಎಲ್ಲ ಬೆಳವಣಿಗೆಗಳ ಮಧ್ಯೆ ದರ್ಶನ್ ಖೈದಿ ನಂಬರ್ ನಲ್ಲಿಯೇ ಮೊಬೈಲ್ ಕವರ್ ಕೂಡಾ ಮರುಕಟ್ಟೆಗೆ ಬಂದಿದೆ. ಕೈದಿ ನಂಬರ್ 6106 ನಂಬರ್ ನ ಮೊಬೈಲ್ ಕವರ್ ಮಾಡ್ಕೊಂಡ ಫ್ಯಾನ್ಸ್ ಅದನ್ನು ವೈರಲ್ ಮಾಡುತ್ತಿದ್ದಾರೆ.

ಕೈದಿ ನಂಬರ್ 6106 ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟ್ರೆಂಡಿಂಗ್ ಆಗುತ್ತಿದ್ದು, ಬೈಕ್, ಆಟೋಗಳ ಹಿಂದೆ ಕೂಡ ಇದೆ ಖೈದಿ ನಂಬರ್ ಸ್ಟಿಕ್ಕರ್ ಹಾಕಿಕೊಂಡರು ದರ್ಶನ್ ಅಭಿಮಾನಿಗಳು ಓಡಾಡುತ್ತಿರುವುದು ಕಂಡು ಬಂದಿದೆ. ಕೈಗೆ ಬೇಡಿ ಹಾಕಿಸಿರುವ ಸ್ಟಿಕ್ಕರ್ ಜೊತೆಗೆ ಕೈದಿ ನಂಬರ್ ಹಾಕಿಸಿ ಟ್ರೆಂಡಿಂಗ್ ಮಾಡಲಾಗುತ್ತಿದೆ. ತಮ್ಮ ವಾಹನಗಳಿಗೆ ಈ ರೀತಿಯ ಸ್ಟಿಕ್ಕರ್ ಹಾಕಿಸಿರುವ ನೂರಾರು ಫ್ಯಾನ್ಸ್ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೋ ಮಾಡುತ್ತಿದ್ದಾರೆ.

ಸದ್ಯ ಈಗ ಕೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಡಿಮ್ಯಾಂಡ್ ಇದೆ ಎನ್ನಲಾಗಿದ್ದು ವಿಭಿನ್ನ ಬಣ್ಣ, ವಿನ್ಯಾಸದಲ್ಲಿ ದರ್ಶನ್ ಫ್ಯಾನ್ಸ್ ಇದನ್ನು ಮಾಡಿಸಿಕೊಂಡು ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+