• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತವನ್ನು ಕಾಡುತ್ತಿರುವ ಎರಡು ರೂಪಾಂತರಿ ಕೊರೊನಾ ವೈರಸ್ ಯಾವುದು ಗೊತ್ತಾ ?

|

ಬೆಂಗಳೂರು, ಮೇ. 08: ಭಾರತದಲ್ಲಿ ಎರಡು ಮಾದರಿಯ ರೂಪಾಂತರಿ ಕೋವಿಡ್ 19 ವೈರಸ್ ಗಳು ಪತ್ತೆಯಾಗಿವೆ. ಜಾಗತಿಕ ಯಾವ ಮೂಲೆಯಲ್ಲಿ ಈ ವೇರಿಯಂಟ್ ಕೋವಿಡ್ ವೈರಸ್ ಕಾಣಿಸಿಕೊಂಡಿಲ್ಲ. ಲಸಿಕೆಯ ರೋಧ ನಿರೋಧಕ ಶಕ್ಷಿಯನ್ನು ಮೀರಿ ಈ ವೈರಸ್ ಹರಡಬಲ್ಲ ಶಕ್ತಿ ಹೊಂದಿವೆ. ಈ ಎರಡು ಮಾದರಿಯ ವೈರಸ್ ನ್ನು ಭಾರತ ಸರ್ಕಾರ ಕಳೆದ ಬುಧವಾರ ಪ್ರಕಟಿಸಿದೆ. ಭಾರತದ ಉದ್ದಗಲಕ್ಕೂ ಜಿನೋಮ್ ಸೀಕ್ವೆನ್ಸಿಂಗ್ ನಡೆಸುವ ಹತ್ತು ಪ್ರಯೋಗಗಳ ಒಕ್ಕೂಟ ಎರಡು ರೂಪಾಂತರಿ ಕರೊನಾ ವೈರಸ್ ಗಳನ್ನು ಗುರುತಿದೆ. ಈ ಎರಡು ವೈರಸ್ ನಿಂದ ಭಾರತಕ್ಕೆ ಎದುರಾಗಲಿರುವ ಸವಾಲುಗಳ ಬಗ್ಗೆ ಎಚ್‌ಸಿಜಿ ಸೆಂಟರ್ ಫಾರ್ ಅಕಾಡೆಮಿಕ್ ಡೀನ್ ಯು. ಎಸ್. ವಿಶಾಲ್ ರಾವ್ ವಿಸ್ಕೃತ ವರದಿಯನ್ನು ಒನ್ ಇಂಡಿಯಾ ಕನ್ನಡಕ್ಕೆ ನೀಡಿದ್ದಾರೆ. ಈ ಕುರಿತ ಸಮಗ್ರ ವಿವರ ಇಲ್ಲಿದೆ ನೋಡಿ.

ಕೋವಿಡ್ 19 ಮರುಕಳಿಸಿದ ಬಗ್ಗೆ ಜಗತ್ತಿನ ಮುಂದೆ ಅತಿ ದೊಡ್ಡ ಸವಾಲಿರುವುದು ರೂಪಾಂತರಿ ವೈರಸ್ ಕುರಿತಾಗಿ. 2020 ಚಳಿಗಾಲದಲ್ಲಿ ಯುನೈಟೆಡ್ ಕಿಂಗ್ ಡಮ್ ನಲ್ಲಿ ಗುರುತಿಸಿಲಾದ B.1.1.7 ಅಥವಾ VOC-20DEC-01 ರೂಪಾಂತರಿ ವೈರಸ್ ಅತಿ ವೇಗವಾಗಿ ಸೋಂಕನ್ನು ಹರಡಿಸಿತು. ವಿಶ್ವದ ನಾನಾ ಮೂಲೆಗಳಲ್ಲಿ ಈ ವೇರಿಯಂಟ್ ವೈರಸ್ ಕಂಡು ಬಂತು. ಬೇರೆ ರೂಪಾಂತರಿ ವೈರಸ್ ಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚು ಸಾವಿನ ಅಪಾಯವನ್ನು ಹೆಚ್ಷಿಸುವ ಸಾಮರ್ಥ ಹೊಂದಿದೆ ಎಂಬುದನ್ನು ತಜ್ಞರು ತಿಳಿಸಿದ್ದರು. 2020 ಅಕ್ಟೋಬರ್ ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗುರುತಿಸಲಾದ , B.1.351 ಅಥವಾVOC-20DEC-02 ರೂಪಾಂತರಿಯು B.1.1.7 ಈ ವೈರಸ್ ನ ಹಲವು ಗುಣಗಳನ್ನು ಹೊಂದಿತ್ತು. 2021 ಜನವರಿ ಅಂತ್ಯದ ವೇಳೆಗೆ ಯುಎಸ್ ನಲ್ಲಿ ರೂಪಾಂತರಿ ವೈರಸ್ ಗಳು ವರದಿಯಾಗುತ್ತವೆ. ಜಪಾನ್ ವಿಮಾನ ನಿಲ್ದಾಣದಲ್ಲಿ P.1 ಅಥವಾ

ಮನೆ- ಮನೆಗೆ ಹೋಗಿ ವ್ಯಾಕ್ಸಿನ್ ಡ್ರೈವ್ ಮಾಡಿದರೆ ಮಾತ್ರ ಕರ್ನಾಟಕಕ್ಕೆ ಉಳಿಗಾಲ!ಮನೆ- ಮನೆಗೆ ಹೋಗಿ ವ್ಯಾಕ್ಸಿನ್ ಡ್ರೈವ್ ಮಾಡಿದರೆ ಮಾತ್ರ ಕರ್ನಾಟಕಕ್ಕೆ ಉಳಿಗಾಲ!

VUI-21JAN-01 ಎಂದು ಕರೆಯುವ ಬ್ರೆಜಿಲ್ ರೂಪಾಂತರಿಯನ್ನು ಗುರುತಿಸಲಾಯಿತು. ಇದು ನೈಸರ್ಗಿಕ ಪ್ರತಿಕಾಯ ತಪ್ಪಿಸಿಕೊಳ್ಳುವ ಶಕ್ತಿ ಹೊಂದಿರುವುದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿತ್ತು. ಹೀಗಾಗಿ ಬ್ರೆಜಿಲ್ ನಲ್ಲಿ ಕೋವಿಡ್ ಸಾವುಗಳು ಗಣನೀಯವಾಗಿ ಹೆಚ್ಚಾಗುತ್ತಲೇ ಇವೆ.

ಭಾರತದಲ್ಲಿ ಎರಡು ರೂಪಾಂತರಿ ವೈರಸ್ :

ಭಾರತದಲ್ಲಿ ಸ್ಥಳೀಯ ಎರಡು ರೂಪಾಂತರಿ ಕೊರೊನಾ ವೈರಸ್ ಇರುವುದನ್ನು ಕೇಂದ್ರ ಸರ್ಕಾರ ಬುಧವಾರ ದೃಢಪಡಿಸಿದೆ. ಇದು ಅತ್ಯಂತ ವಿರಳವಾದ ರೂಪಾಂತರಿ ವೈರಸ್. ಪ್ರಪಂಚದ ಯಾವ ಮೂಲೆಯಲ್ಲಿ ಈ ರೀತಿಯ ವೈರಸ್ ಇನ್ನೂ ಪತ್ತೆಯಾಗಿಲ್ಲ. ಇದು ಕೊರೊನಾ ಸಾಂಕ್ರಾಮಿಕತೆ ಮತ್ತು ಸಾವಿನ ತೀವ್ರತೆಯನ್ನು ಹೆಚ್ಚಿಸುವ ಬಗ್ಗೆ ಇನ್ನೂ ನಿರೂಪಿಸಲ್ಪಟ್ಟಿಲ್ಲ. ಭಾರತದ ಉದ್ದಗಲಕ್ಕೂ ಜೊನೋಮ್ ಸೀಕ್ವೆನ್ಸಿಂಗ್ ನಡೆಸುವ ಹತ್ತು ಪ್ರಯೋಗಗಳ ಒಕ್ಕೂಟ ಈ ಎರಡು ರೂಪಾಂತರಿ ವೈರಸ್ ಗಳನ್ನು ಗುರುತಿಸಿದೆ. E484Q ಮತ್ತು L452 ಹೆಸರಿನ ಎರಡು ಮಾದರಿ ರೂಪಾಂತರಿ ವೈರಸ್ ಪತ್ತೆ ಮಾಡಲು ದೆಹಲಿ, ಗುಜರಾತ್, ಪಂಜಾಬ್ ಮಾದರಿಗಳನ್ನು ಪ್ರಯೋಗಾಲಯಕ್ಕೆ ಬಳಸಿಕೊಳ್ಳಲಾಗಿದೆ.

ಭಾರತ ರೂಪಾಂತರಿಗಳ ಪ್ರಭಾವ :

ವೈರಾಣುಗಳಲ್ಲಿ ರೂಪಾಂತರಿ ಎನ್ನುವುದು ಆಶ್ಚರ್ಯ ವಿಚಾರವಲ್ಲ. ಆದರೆ ಶಕ್ತಿ ಶಾಲಿ ಲಸಿಕೆ ಪ್ರಯೋಗವನ್ನು ಮೀರಿ ಬೆಳೆಯವ ಶಕ್ತಿ ಪಡೆದುಕೊಂಡಿರುವುದು ನಿರೂಪಿತವಾದರೆ ಭಾರತಕ್ಕೆ ಕಷ್ಟ. ರೋಗನಿರೋಧಕ ಶಕ್ತಿಯನ್ನು ವಿರೋಧಿಸಿ ಅದರ ಜತೆಗೆ ಬೆಳೆಯುವ ಅಥವಾ ರೋಗದ ತೀವ್ರತೆಯಿಂದಾಗಿ ಸೋಂಕು ವೇಗವಾಗಿ ಹರಡುವುದಕ್ಕೆ ಕಾರಣವಾದರೆ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ವಿಶ್ವದಾದ್ಯಂತ ಕಂಡು ಬಂದಿರುವ SARS-CoV- 2 ಅನೇಕ ರೂಪಂತರಿಗಳಲಿಿ ಈ ಎರಡು ಬಗೆಯ ರೂಪಾಂತರಿ ಇರುವುದು ಕಂಡು ಬಂದಿದೆ. ಈ ವೈರಸ್ ಲಸಿಕೆ ಪ್ರಭಾವ ಕಡಿಮೆ ಮಾಡುತ್ತದೆ ಎಂದೇ ಹೇಳಲಾಗಿದೆ. ರೂಪಾಂತರಿ ವೈರಸ್ ಗಳ ಒಟ್ಟು ಪರಿಣಾಮದ ಬಗ್ಗೆ ಸಂಪೂರ್ಣವಾಗಿ ಗ್ರಹಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ, INSA-COG ಇದರ ವಿವರಗಳನ್ನು ವಿವರಗಳನ್ನ GISAID ಎನ್ನವ ಜಾಗತಿಕ ರೆಪಾಸಿಟರಿಗೆ ಒಪ್ಪಿಸಿ ಇದನ್ನು "ವೇರಿಯಂಟ್ ಆಫ್ ಕನ್ಸರ್ನ್ ಎಂದರೆ, ಆತಂಕ ಪಡಬೇಕಾಗುತ್ತದೆ.

ಡಬಲ್ ಮ್ಯೂಟೆಂಟ್ ರೂಪಾಂತರಿಯ ತೀಕ್ಷ್ಣವಾದ ಎರಡನೇ ಅಲೆಯನ್ನು ಪ್ರಚೋದಿಸುವ ಸಾಧ್ಯತೆ ಇರುವುದನ್ನು ನಾವು ಗಮನಿಸಬೇಕಿದೆ. ಈ ವೈರಾಣು ಶೇ. 50 ರಷ್ಟು ಹೆಚ್ಚು ಹರಡಬಲ್ಲ, ಮತ್ತು ಶೇ 60 ರಷ್ಟು ಮಾರಕವಾಗಿರಬಹುದು ಎಂದೇ ಅಂದಾಜಿಸಲಾಗಿದೆ. ಹಿಂದಿನ ವೈರಸ್ ಉಂಟು ಮಾಡುತ್ತಿದ್ದ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ಇದು, 1.6 ರಷ್ಟು ಸಾವಿನ ಪ್ರಮಾಣ ಹೆಚ್ಚಿಸುವ ಪ್ರಮಾದ ಎದುರಾಗಲಿದೆ.

   ಬೆಡ್ ಬ್ಲಾಕಿಂಗ್ ಒಂದೇ ಅಲ್ಲ ಇನ್ನೂ ಇವೆ ಹಲವಾರು ದಂಧೆಗಳು | Oneindia Kannada

   ಕೋವಿಡ್ ಗಾಗಿ ನೈಜ ಸಮಯದ ಕಣ್ಗಾವಲು : ಭಾರತದಲ್ಲಿ ಅನುವಂಶಿಕ ಕಣ್ಗಾವಲಿನ ವ್ಯವಸ್ಥೆ ಬಳಕೆಯಿಲ್ಲ. ಆದರೆ ಇದು ಇವತ್ತಿಗೆ ಖಂಡಿತಾ ಅಗತ್ಯವಿದೆ. ಇಡೀ ವೈರಾಣು ಜೀನೋಮ್ ಸೀಕ್ವೆನ್ಸಿಂಗ್ ಮಡುವುದರಿಂದ ವೈರಸ್ ಹರಡುವಿಕೆ ಮತ್ತು ಅದೇನಾದರೂ ರೂಪಾಂತರ ಹೊಂದಿ ದೊಡ್ಡ ಅಪಾಯ ತಂದೊಡ್ಡಲಿದೆಯಾ ? ಎಂಬುದರ ಬಗ್ಗೆ ತಿಳುವಳಿಕೆ ಪಡೆಯಲು ಅನುವಂಶಿಕ ಕಣ್ಗಾವಲು ವ್ಯವಸ್ಥೆ ನೆರವಾಗಲಿದೆ. ಹೆಚ್ಚಿನ ಅಪಾಯದಲ್ಲಿರುವರಿಗೆ ಉತ್ತಮ ಚಿಕಿತ್ಸೆ ಕೊಡಲು ಇದು ಸಹಾಯವಾಗುತ್ತದೆ. ಜಿನೋಮಿಕ್ಸ್ ಬಸಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಹೊಸ ಬೆಳವಣಿಗೆ ಬಗ್ಗೆ ಸಮರ್ಪಕವಾಗಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ COG - UK ಮತ್ತು ಸಂಗರ್ ಇನ್‌ಸ್ಟಿಟ್ಯೂಟ್ ಜಂಟಿಯಾಗಿ 12. 2 ಮಿಲಿಯನ್ ಪೌಂಡ್ ಹಣವನ್ನು ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಟೆಸ್ಟಿಂಗ್ ಇನೋವೇಷನ್ ಫಂಡ್ ನಿಂದ ಪಡೆದು ಭವಿಷ್ಯದಲ್ಲಿ ಬರಬಹುದಾದ ಹೊಸ ಸ್ಪೋಟಗಳ ಬಗ್ಗೆ ಕಣ್ಗಾವಲು ಇರುಸುವ ವ್ಯವಸ್ಥೆ ರಚಿಸಲು ನಿರ್ಧರಿಸಿದೆ. ಸಂಗರ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸಲಿರುವ ಈ ತಂತ್ರಜ್ಞಾನಕ್ಕೆ ಎಲ್ಲಾ ಸಂಶೋಧಕರು ಬೆಂಬಲ ಸೂಚಿಸಿದ್ದಾರೆ. ಭಾರತದಲ್ಲು ಕೂಡ ಡಬಲ್ ಮ್ಯೂಟೆಂಟ್ ರೂಪಾಂತರಿ, ಬೇರೆ ಯಾವುದೇ ರೀತಿಯ ರೂಪಾಂತರಿಗಳನ್ನು ಗುರುತಿಸಿ ಸೋಂಕಿನ ತೀವ್ರತೆ , ಸಾವಿನ ಅಪಾಯ ಅರಿಯಲು ಜೆಟಿಕ್ ಕಣ್ಗಾವಲು ವ್ಯವಸ್ಥೆ ಸ್ಥಾಪಿಸುವ ಅಗತ್ಯವಿದೆ.

   English summary
   HCG Center for Academic dean Dr. U.S. Vishal rao explained about Indian born mutant Covid -19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X