60 ಸೆಕೆಂಡ್ಸ್ ಅಪ್ಲಿಕೇಷನ್ ಐಒಸ್ ನಲ್ಲೂ ಈಗ ಲಭ್ಯ
ಬೆಂಗಳೂರು, ಜೂ.23: ದಿನಪತ್ರಿಕೆಗಳು, ವೆಬ್ ಸೈಟ್ ಗಳ ಸುದ್ದಿಗಳ ರಾಶಿಯನ್ನು ಒಂದೆಡೆಯಲ್ಲೇ ಓದುವ ಸೌಲಭ್ಯ ಒದಗಿಸಿರುವ ಒನ್ ಇಂಡಿಯಾ ಸಂಸ್ಥೆಯ ಉತ್ಪನ್ನ 60 ಸೆಕೆಂಡ್ಸ್ ಮೊಬೈಲ್ ಅಪ್ಲಿಕೇಷನ್ ಈಗ ಐಒಎಸ್ ಹೊಂದಿರುವ ಸಾಧನಗಳಲ್ಲಿ ಲಭ್ಯವಿದೆ.
ಆಂಡ್ರಾಯ್ಡ್ ಮೊಬೈಲ್ ಫೋನ್ ನಂತರ ಆಪಲ್ ಐಒಎಸ್ ಹೊಂದಿರುವ ಐಪ್ಯಾಡ್, ಐಫೋನ್ 5, ಐಫೋನ್ 6, ಐಫೋನ್ ಟಚ್ ಮುಂತಾದ ಸಾಧನಗಳಲ್ಲಿ ನಿಮ್ಮ ನೆಚ್ಚಿನ ವೆಬ್ ಸೈಟ್ ಗಳಲ್ಲಿನ ಇತ್ತೀಚಿನ ಸುದ್ದಿಗಳನ್ನು ಓದಬಹುದು. [60 Seconds Now ಅಪ್ಲಿಕೇಷನ್ ಐಒಎಸ್ ಸಾಧನಕ್ಕೆ ಡೌನ್ ಲೋಡ್ ಮಾಡಿಕೊಳ್ಳಿ]
60ಸೆಕೆಂಡ್ಸ್ ಅಪ್ಲಿಕೇಷನ್ ನ ಸೌಲಭ್ಯಗಳು:
* ರಾಜ್ಯ, ನಗರ, ಅಂತಾರಾಷ್ಟ್ರೀಯ, ಚಲನಚಿತ್ರ, ಕ್ರೀಡೆ, ವಾಣಿಜ್ಯ ಹೀಗೆ ಆಯಾ ವಿಭಾಗದಲ್ಲಿ ವಿವಿಧ ವೆಬ್ ಸೈಟ್ ಗಳಿಂದ ಸಿಗುವ ಆ ಕ್ಷಣದ ಸುದ್ದಿ ನೀವು ಓದಬಹುದು.
* ಕನ್ನಡ ಪ್ರಭ, ವಿಜಯಕರ್ನಾಟಕ, ವಿಜಯವಾಣಿ, ಅವಧಿ, ಉದಯವಾಣಿ, ಈ ಸಂಜೆ ಅಲ್ಲದೆ ಯೂನಿಕೋಡ್ ಬಳಕೆ ಮಾಡುವ ಯಾವುದೇ ವೆಬ್ ಸೈಟ್ ನ ಸುದ್ದಿಯನ್ನು ಇಲ್ಲೇ ಕಾಣಬಹುದು.
* ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಬೆಂಗಾಳಿ, ಮರಾಠಿ, ಗುಜರಾತಿ, ಮಲಯಾಳಂನಲ್ಲಿ ಸದ್ಯಕ್ಕೆ ಅಪ್ಲಿಕೇಷನ್ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳನ್ನು ಅಳವಡಿಸಲಾಗುತ್ತಿದೆ.
* ಸುಮಾರು 13 ಎಂಬಿ ತೂಗುವ ಈ ಅಪ್ಲಿಕೇಷನ್ ಅಳವಡಿಸಲು ಐಒಎಸ್ 6.0 ಅಥವಾ ಅದಕ್ಕಿಂತ ಸುಧಾರಿತ ಆಪರೇಟಿಂಗ್ ಸಿಸ್ಟಮ್ ನಿಮ್ಮ ಸಾಧನದಲ್ಲಿರಬೇಕು.
* ಈ ಅಪ್ಲಿಕೇಷನ್ ನಲ್ಲಿ ಓದಿದ ಸುದ್ದಿಯನ್ನು ಎಸ್ ಎಂಎಸ್, ವಾಟ್ಸಪ್, ಇಮೇಲ್, ಫೇಸ್ ಬುಕ್ ಅಥವಾ ಇನ್ನಿತರ ಜಾಲ ತಾಣಗಳಿಗೆ ಸುಲಭವಾಗಿ ಹಂಚಬಹುದು.
ಗೂಗಲ್ ಪ್ಲೇ ಸ್ಟೋರ್ ನಲ್ಲಿ ನ್ಯೂಸ್ ಅಂಡ್ ಮ್ಯಾಗಜೀನ್ ವಿಭಾಗದಲ್ಲಿ 60 Seconds Now ಅಪ್ಲಿಕೇಷನ್ ಇದೆ. ಸರ್ಚ್ ಬಾಕ್ಸ್ ನಲ್ಲಿ 60 Seconds Now ಅಥವಾ Oneindia ಎಂದು ಹಾಕಿ ಪಡೆದುಕೊಳ್ಳಬಹುದು. [ಈ ಅಪ್ಲಿಕೇಷನ್ ಆಂಡ್ರಾಯ್ಡ್ ಫೋನಿನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ](ಒನ್ ಇಂಡಿಯಾ ಸುದ್ದಿ)













Click it and Unblock the Notifications