ಬೆಂಗಳೂರಿನ ವಸಂತನಗರದಲ್ಲಿ ಅತ್ತೆ-ಸೊಸೆ ಡಬಲ್ ಮರ್ಡರ್

ಬೆಂಗಳೂರು, ಸೆಪ್ಟೆಂಬರ್ 26: ಬೆಂಗಳೂರಿನ ವಸಂತನಗರ ಕಂಟೋನ್ಮೆಂಟ್ ನ ಮನೆಯೊಂದರಲ್ಲಿ ಸೋಮವಾರ ಹಾಡಹಗಲೇ ಅತ್ತೆ-ಸೊಸೆಯ ಡಬಲ್ ಮರ್ಡರ್ ಆಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಂತೋಷಿ ಬಾಯಿ (60) ಹಾಗೂ ಅವರ ಸೊಸೆ ಲತಾ ಕೊಲೆಯಾದವರು. ಬೆಳಗ್ಗೆ 10ರಿಂದ 11 ಗಂಟೆ ಮಧ್ಯೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಶಾಲೆಯಿಂದ ವಾಪಸಾದ ಲತಾ ಅವರ ಮಗಳು ಮೊದಲಿಗೆ ಮೃತದೇಹಗಳನ್ನು ನೋಡಿದ್ದಾಳೆ. ಈ ವಿಚಾರವನ್ನು ನೆರೆಮನೆಯವರಿಗೆ ತಿಳಿಸಿದ್ದಾಳೆ. ಯಾವುದೇ ವಸ್ತುಗಳು ಕಳವಾಗಿಲ್ಲ, ಕೊಲೆಗಾರರು ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿಲ್ಲ, ಕಳವು ಮಾಡುವ ಉದ್ದೇಶಕ್ಕೆ ಆದ ಕೊಲೆಗಳಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.[ಬೆಂಗಳೂರಿನ ಗಿರಿನಗರದ ಭರತ್ ನೇತ್ರಾವತಿ ಪಾಲು]

Double murder in Bangalore Vasanth nagar

ಲತಾ ಅವರ ಪತಿ ಮನೆಯಿಂದ ಹೊರಟ ನಂತರ ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ ಬೆಳಗ್ಗೆ ಹತ್ತು ಗಂಟೆಗೆ ಮನೆಯಿಂದ ಹೊರಟಿದ್ದರು. ಅವರ ತಂದೆ ವ್ಯಾಪಾರಸ್ಥರು. ಆ ವೇಳೆ ಅವರು ಕೂಡ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳವನ್ನು ಕರೆತಂದು ಪರಿಶೀಲಿಸಲಾಗಿದೆ.[ರಂಜಾನ್ ಕೂಪನ್ ಪಡೆಯಲು ಹೋಗಿದ್ದ ಮಹಿಳೆ ಕಾಲ್ತುಳಿತಕ್ಕೆ ಸಾವು]

ಹಲವು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+