• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸ್ ಠಾಣೆಯಲ್ಲಿ ಸ್ಲೇಟ್ ಹಿಡಿಸಿ ಮಹಿಳೆಯ ಫೋಟೊ ತೆಗೆಯೋಹಾಗಿಲ್ಲ

|

ಬೆಂಗಳೂರು, ಜುಲೈ 30: ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿರುವ ಮಹಿಳೆಯರ ಬಳಿ ಸ್ಲೇಟ್ ಹಿಡಿಸಿ ಫೋಟೊ ತೆಗೆಸಬೇಡಿ ಎಂದು ಹೈಕೋರ್ಟ್ ಸೂಚನೆ ನೀಡಿದೆ.

ಅಪರಾಧ ಪ್ರಕರಣವೊಂದರ ಸಂಬಂಧ ಸ್ಲೇಟ್ ಹಿಡಿದು ಫೋಟೊ ತೆಗೆಸಲು ಒತ್ತಾಯಪಡಿಸಿದ ಪೊಲೀಸರ ಕ್ರಮದ ವಿರುದ್ಧ ಮಹಿಳೆಯೊಬ್ಬರು ಕಾನೂನು ಸಮಯ ನಡೆಸಿ ಜಯ ಸಾಧಿಸಿದ್ದಾರೆ.

ಕಾರು ಚಾಲಕರೇ ಎಚ್ಚರ, ಎಂತೆಂಥಾ ಕಳ್ಳರಿರ್ತಾರೆ ನೋಡಿಕಾರು ಚಾಲಕರೇ ಎಚ್ಚರ, ಎಂತೆಂಥಾ ಕಳ್ಳರಿರ್ತಾರೆ ನೋಡಿ

ಸ್ಲೇಟ್ ಹಿಡಿದು ಫೋಟೊ ತೆಗೆಸುವಂತೆ ಇಂದಿರಾ ನಗರ ಠಾಣಾ ಪೊಲೀಸರು ಬಲವಂತ ಮಾಡಿದ್ದನ್ನು ಪ್ರಶ್ನಿಸಿ ಎಚ್‌ಎಎಲ್‌ ಎರಡನೇ ಹಂತದ ನಿವಾಸಿ ಎಂಬುವವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ಪೀಠ ಸ್ಲೇಟ್ ಹಿಡಿದು ಫೋಟೊ ತೆಗೆಸುವುದರಿಂದ ವಿನಾಯ್ತಿ ನೀಡಿದೆ. ವಿಚಾರಣಾಧೀನ ಕೈದಿಗಳ ಫೋಟೊ ತೆಗೆಸುವ ವಿಚಾರದಲ್ಲಿ 2013ರ ಡಿಸೆಂಬರ್‌ನಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಪಡೆಯದೇ ವಿಚಾರಣಾಧೀನ ಕೈದಿಗಳ ಫೋಟೊವನ್ನು ಪೊಲೀಸರು ತೆಗೆಯಬಾರದು.

ಮ್ಯಾಜಿಸ್ಟ್ರೇಟ್ ಕೋರ್ಟ್ ಪೂರ್ವಾನುಮತಿ ಇಲ್ಲದೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಆರೋಪಿಯ ಫೋಟೊವನ್ನು ತೆಗೆದರೆ ಆಕೆಯ ಪಾಡು ಏನಾಗಬೇಡ ಎಂದು ಹೇಳಲಾಗಿತ್ತು.

ಅಪರಾಧ ಪ್ರಕಣವೊಂದರಲ್ಲಿ ಆರೋಪಿಯಾಗಿದ್ದ ಅವರು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು 2019 ಜುಲೈ 12 ರಂದು ಜಾಮೀನು ನೀಡಿತ್ತು. ಒಬ್ಬರ ಭದ್ರತಾ ಖಾತರಿ, ವೈಯಕ್ತಿಕ ಬಾಂಡ್ ಮತ್ತು ಗುರುತು ಪತ್ತೆಗಾಗಿ ಆಧಾರ್ ಕಾರ್ಡನ್ನು ಪೊಲೀಸರಿಗೆ ನೀಡುವಂತೆ ಷರತ್ತು ವಿಧಿಸಲಾಗಿತ್ತು.

English summary
The Karnataka High Court has directed to not on a Photograph with a slate of a woman seeking to execute the bail bond.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X