Get Updates
Get notified of breaking news, exclusive insights, and must-see stories!

ಮೇ 18ರಂದು ಪದ್ಮಶ್ರೀ ದೊಡ್ಡರಂಗೇಗೌಡರ ಕೃತಿ ಲೋಕಾರ್ಪಣೆ

ಬೆಂಗಳೂರು, ಮೇ 16 : ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರ ಮತ್ತೊಂದು ಅದ್ಬುತ ಕೃತಿ "ಮಣ್ಣಿನ ಮಾತುಗಳು" ಮೇ 18, ಶನಿವಾರದಂದು ಲೋಕಾರ್ಪಣೆಯಾಗಲಿದೆ. ಅಂತರಾಳ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಕೃತಿ ದೊ.ರಂ.ಗೌಡರ ಹಿಂದಿನ ಎಲ್ಲಾ ಕೃತಿಗಳಿಗಿಂತ ಭಿನ್ನವಾಗಿದ್ದು, ಈ ತತ್ವದ ಸಾಲುಗಳು ಮಣ್ಣಿನ ಮೂಸೆಯಿಂದ ಹೊರಹೊಮ್ಮಿರುವುದು. ಸಾಮಾನ್ಯ ಮನುಷ್ಯನ ಬೆವರ ಹನಿಯ ಅನುಭವದ ಸಾರ. ಮಣ್ಣಿನ ಮಕ್ಕಳ ಸ್ವಗತದಂತೆ ನೈಜವಾಗಿದೆ.

ಅಲ್ಲದೇ ಅವತ್ತು "ಮಣ್ಣಿನ ಮಾತುಗಳು" ಕೃತಿಯಲ್ಲಿನ ಆಯ್ದ ಮುತ್ತಿನ ಸಾಲುಗಳು ಧ್ವನಿ ಸಾಂದ್ರಿಕೆಯ ರೂಪದಲ್ಲಿಯೂ ಕೂಡ ಲೋಕಾರ್ಪಣೆಯಾಗಲಿದೆ. ಈ ಧ್ವನಿ ಸಾಂದ್ರಿಕೆಯ ಸಂಗೀತ ರೂವಾರಿ ಮ್ಯಾಂಡಲಿನ್ ಪ್ರಸಾದ ಅವರು. ಸನ್ನಿಧಿ ಸಂಸ್ಥೆ ನಿರ್ಮಿಸಿರುವ ಈ ಸಂಗೀತ ಸಂಪುಟಕ್ಕೆ ಡಾ. ಮುದ್ದು ಮೋಹನ್, ಗಣೇಶ್ ದೇಸಾಯಿ, ಮಹೇಶ್ ಪ್ರಿಯದರ್ಶನ್ ಹಾಗೂ ಶ್ರೀಮತಿ ಶ್ರುತಿ ಅವರು ಧ್ವನಿಯಾಗಿದ್ದಾರೆ.

Doddarange Gowdas Mannina Maatugalu book release Sahithya Parishat

ಕಾರ್ಯಕ್ರಮ ವಿವರ;
ಡಾ. ಮನು ಬಳಿಗಾರ್ ಅಧ್ಯಕ್ಷತೆ
ಪ್ರೊ. ಎಂ.ಎಚ್ ಕೃಷ್ಣಯ್ಯ ಅವರಿಂದ ಪುಸ್ತಕ ಲೋಕಾರ್ಪಣೆ
ಮುದ್ದುಮೋಹನ್ ರಿಂದ ಸೀಡಿ ಲೋಕಾರ್ಪಣೆ
ಉಪಸ್ಥಿತಿ : ಪದ್ಮಶ್ರೀ ಡಾ. ದೊಡ್ಡರಂಗೇಗೌಡ, ಮ್ಯಾಂಡೋಲಿನ್ ಶ್ರೀನಿವಾಸ್
ನಿರೂಪಣೆ: ರಾಜ ಶಶಿಧರ್.
ದಿನಾಂಕ, ಸಮಯ: ಮೇ 18, ಶನಿವಾರ, ಬೆಳಗ್ಗೆ 11 ಗಂಟೆಗೆ
ಸ್ಥಳ: ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+