ನಟ ದರ್ಶನ್ ತೂಗುದೀಪ ಬಗ್ಗೆ ಮುಖ್ಯಮಂತ್ರಿ ಚಂದ್ರು ಸ್ಫೋಟಕ ಹೇಳಿಕೆ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್‌, ಪವಿತ್ರಾ ಗೌಡ ಸೇರಿ 17 ಮಂದಿ ಜೈಲು ಪಾಲಾಗಿದ್ದಾರೆ. ಇನ್ನಯ ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಪರ-ವಿರೋಧ ಚರ್ಚೆಗಳು ಆಗುತ್ತಿವೆ. ಈ ನಡುವೆಯೇ ಮುಖ್ಯಮಂತ್ರಿ ಚಂದ್ರು ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾಹಿತಿ ಇಲ್ಲಿದೆ ತಿಳಿಯಿರಿ.

"ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ನಾನು ನೋಡಿದ ಹಾಗೆ ದರ್ಶನ್‌ ಅವರ ತಂದೆ ಶೂಟಿಂಗ್‌ ಸೆಟ್‌ನಲ್ಲಿ ಕೆಲವೊಮ್ಮೆ ತುಂಬಾ ಕೋಪಗೊಳ್ಳುತ್ತಿದ್ದರು. ಅದು ಕೆಲವೊತ್ತಷ್ಟೇ. ಆಮೇಲೆ ಎಲ್ಲರ ಜೊತೆಗೂ ಬೆರೆಯುವ ಸ್ವಭಾವ ಅವರದ್ದಾಗಿತ್ತು. ಸಿನಿಮಾದಲ್ಲಿ ಖಲನಾಯಕನಾಗಿದ್ದರೆ, ನಿಜಜೀವನದಲ್ಲಿ ಹಿರೋ ಆಗಿದ್ದರು," ಎಂದರು.

Do you know what did Mukhyamantri Chandru says about actor Darshan

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಅವರದ್ದು ಕೂಡ ತಪ್ಪಿದೆ. ಅದಕ್ಕಂತಲೇ ಕಾನೂನು ಇದೆ. ಸಿನಿರಂಗ ಇದೆ. ಅಲ್ಲೇ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ ಕೊಲೆ ಮಾಡುವ ಮಟ್ಟಕ್ಕೆ ಇಳಿದಿರುವುದು ಕೂಡ ಸರಿಯಲ್ಲ. ನಟ ದರ್ಶನ್‌ ಮನುಷ್ಯತ್ವ ಕಳೆದುಕೊಂಡಿದ್ದಾನೆ ಅಂತಾ ಅನಿಸುತ್ತದೆ ಎಂದು ಹೇಳಿದ್ದಾರೆ.

ಹಾಗೆಯೇ ಕೆಲವೊಂದು ವಿಚಾರಗಳಲ್ಲಿ ಮುಂಗೋಪಿಯಾಗಿದ್ದರು. ಅಂದರೆ ಊಟದ ಸರಿಯಾಗಿ ಇಲ್ಲದಿದ್ದರೆ ಕೋಪಗೊಳ್ಳುತ್ತಿದ್ದರು ಹೊರತು ದರ್ಶನ್‌ ರೀತಿ ಮೃಗಿಯಾಗಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

"ಇಲ್ಲಿ ಆಗಿರೋದು ಉದ್ದೇಶಪೂರ್ವಕವಾಗಿ ನಡೆದ ಕೊಲೆಯಲ್ಲ, ಇವರು ಯಾರೂ ಸಹ ಮೂಲತಃ ಕೊಲೆಗಾರರಲ್ಲ, ಸೇಡು ತೀರಿಸಿಕೊಳ್ಳೋಕೆ ಹಿಂಸೆ ಕೊಟ್ಟಿದ್ದಾರೆ. ಹಿಂಸೆ ಅತಿರೇಕ ಆಗಿದ್ದರಿಂದ ಈ ಘಟನೆ ನಡೆದಿದೆ. ಇನ್ನೂ ಹತ್ಯೆಯಾದ ರೇಣುಕಾಸ್ವಾಮಿ ಮಾಡಿದ್ದನ್ನು ನಾನು ಒಪ್ಪುವುದಿಲ್ಲ. ಯಾರೇ ಹೆಣ್ಣು ಮಗಳಿಗಾಗಲೀ ಈ ರೀತಿಯ ಅಶ್ಲೀಲ ಮೇಸೆಜ್‌ ಮಾಡುವುದು ತಪ್ಪು. ಹಾಗೆಯೇ ಪವಿತ್ರಾ ಗೌಡ ಮದುವೆಯಾದ ಮನುಷ್ಯನಾ ಜೊತೆ ಸಂಬಂಧ ಕೂಡ ಒಂದು ಅಪರಾಧವೇ. ಇದೆಲ್ಲವನ್ನು ಗಮನದಲ್ಲಿಟ್ಟಿಕೊಂಡು ಕಾನೂನು ಕೆಲಸ ಮಾಡಬೇಕಾಗುತ್ತದೆ," ಎಂದರು.

"ದರ್ಶನ್‌ ತಂದೆ ನನಗೆ ಚೆನ್ನಾಗಿ ಗೊತ್ತು. ಡಾ.ರಾಜ್‌ಕುಮಾರ್‌ ಜೊತೆ ಹೆಚ್ಚು ಪಾತ್ರಗಳನ್ನು ಮಾಡುತ್ತಿದ್ದರು. ರಾಜ್‌ಕುಮಾರ್‌ ತೂಗುದೀಪ ಅವರಿಗೆ ಪಾತ್ರಗಳನ್ನು ಹುಡುಕಿ ಹುಡುಕಿ ಕೊಡುತ್ತಿದ್ದರು. ತೂಗುದೀಪ ಶ್ರೀನಿವಾಸ್ ಅವರು ಕೌಟುಂಬದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದು, ತಮ್ಮ ತನವನ್ನು ಸಿನಿಮಾ ರಂಗದಲ್ಲಿ ತೂಗುದೀಪ ಶ್ರೀನಿವಾಸ ಕಾಪಾಡಿಕೊಂಡಿದ್ದರು. ಒಬ್ಬ ತಂದೆಗೆ ಮಗ ಹೀಗೆ ಮಾಡಿದಾಗ ಸಹಜವಾಗಿ ನೋವಾಗುತ್ತದೆ. ಸಮಸ್ಯೆಯನ್ನು ಬಗೆ ಹರಿಸುವುದಕ್ಕೆ ಯಾರನ್ನಾದರೂ ಸಹಾಯ ಕೇಳಿ ಮಗನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು," ಎಂದರು.

"ತೂಗುದೀಪ ಶ್ರೀನಿವಾಸ ಅವ‌ರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ, ಅವರು ತುಂಬಾ ವಿನಯವಂತರಾಗಿದ್ದರು. ದರ್ಶನ್‌ನ್‌ನಂತೆಯೇ ತಂದೆ ತೂಗುದೀಪ ಶ್ರೀನಿವಾಸ ಅವರಿಗೂ ಸಹ ತುಂಬಾ ಕೋಪ ಬರುತ್ತಿತ್ತು. ಆದರೆ ಆ ಕೋಪ ಸ್ವಲ್ಪ ಹೊತ್ತು ಅಷ್ಟೇ. ಮತ್ತೊಂದೆಡೆ ತಂದೆಯಂತೆ ಸಾಧಿಸಬೇಕು ಎಂಬ ಗುಣ ದರ್ಶನ್‌ರಲ್ಲಿತ್ತು, ಅದನ್ನು ನಾನು ನೋಡಿದ್ದೇನೆ," ಎಂದರು.

"ತರಾತುರಿಯಲ್ಲಿ ಹಣ, ಅಭಿಮಾನಿಗಳ‌ ಸಂಪಾದನೆ ಹೆಚ್ಚಾದಂತೆ ದರ್ಶನ್‌ಗೆ ತಡೆದುಕೊಳ್ಳೋಕೆ ಆಗಿಲ್ಲ. ಆ ವೇಳೆಯಲ್ಲಿ ತನ್ನ ತನವನ್ನು ಕಳೆದುಕೊಂಡುಬಿಟ್ಟಿದ್ದಾನೆ. ಮನುಷ್ಯತ್ವವವನ್ನು ಕಳೆದುಕೊಂಡಿದ್ದಾರೆ ಎಂದು ಎನಿಸುತ್ತದೆ. ಆದ್ದರಿಂದ ಈ ಘಟನೆ ನಡೆದಿದೆ ಎನ್ನಬಹುದು. ಆದರೆ ಇಂತಹ ದೊಡ್ಡ ಸ್ಟಾರ್‌ ಮನುಷ್ಯನಾಗಿ ವರ್ತಿಸಿದ್ದರೆ ಇಂತಹ ದುರ್ಘಟನೆ ಘಟನೆ ನಡೆಯುತ್ತಿರಲಿಲ್ಲ. ದರ್ಶನ್‌ ಕಾನೂನಿನ ಪ್ರಕಾರ ಮುಂದುವರೆಯಬೇಕಿತ್ತು. ಇಂತಹ ದುರ್ಘಟನೆಗಳು ಮುಂದೆ ನಡೆಯಬಾರದು," ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+