ಡಿ.ಕೆ. ಶಿವಕುಮಾರ್ ಬ್ರದರ್ ಡಿ.ಕೆ. ಸುರೇಶ್‌ಗೆ ಟಿಕೆಟ್: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ರಂಗೇರಿದ ಅಖಾಡ!

ಕಾಂಗ್ರೆಸ್ 2024 ರ ಲೋಕಸಭಾ ಚುನಾವಣೆಗೆ, ಎನ್‌ಡಿಎ ವಿರುದ್ಧ ತೊಡೆತಟ್ಟಿದೆ. ಹೀಗಾಗಿಯೇ ಬಿಜೆಪಿಗೆ ಮೊದಲೇ ಕರ್ನಾಟಕದ ತನ್ನ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿಯ ರಿಲೀಸ್ ಮಾಡಿದೆ. ಅದರಲ್ಲಿಯೂ ಹೈವೋಲ್ಟೇಜ್ ಕ್ಷೇತ್ರ ಎಂದು ಪರಿಗಣಿಸಿರುವ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಅವರ ಎಂಟ್ರಿ ಪಕ್ಕಾ ಆಗಿದೆ.

ಹೌದು ಕರ್ನಾಟಕದಲ್ಲಿ ಲೋಕಸಭಾ ಅಖಾಡಕ್ಕೆ ಇಳಿಯಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ ಕಾಂಗ್ರೆಸ್. ಈ ಪೈಕಿ ಇಡೀ ದೇಶದ ಗಮನ ಸೆಳೆಯುತ್ತಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರು ಸತತ 4ನೇ ಬಾರಿಗೆ ಅಖಾಡ ಪ್ರವೇಶವನ್ನ ಮಾಡುತ್ತಿದ್ದಾರೆ. ಹೀಗಾಗಿ ಕಳೆದ 3 ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ, ಸುರೇಶ್ ಅವರು ಈಗ 4ನೇ ಬಾರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದು ಬೀಗಲು ರಣತಂತ್ರ ರೂಪಿಸಿದಂತೆ ಕಾಣ್ತಿದೆ ಇದರ ಜೊತೆಗೆ ಡಿ.ಕೆ. ಸುರೇಶ್ ಅವರು ಈ ಬಾರಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರ ತೊರೆದು ಬೆಂಗಳೂರು ಉತ್ತರಕ್ಕೆ ಹೋಗ್ತಾರೆ ಅನ್ನೋ ಸುದ್ದಿ ಕೂಡ ಸುಳ್ಳಾಗಿ ಹೋಗಿದೆ.

DK Suresh Name Has Been Finalised For Bengaluru Rural Lok Sabha Constituency By Congress

ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಗ್ಯಾರಂಟಿ?

ಗೆಲ್ಲಬೇಕು.. ಗೆಲ್ಲಲೇಬೇಕು.. ಇದು 2024 ರ ಲೋಕಸಭೆ ಚುನಾವಣೆಯ ಒನ್‌ಲೈನ್ ಅಜೆಂಡಾ ಆಗಿದೆ. ಹೀಗಾಗಿ ಕಾಂಗ್ರೆಸ್ & ಬಿಜೆಪಿ ನಾಯಕರು ಫೈಟ್ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಕರ್ನಾಟಕದಲ್ಲಿ ಬಿಜೆಪಿ & ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಗೆಲುವಿಗೂ ಚೆಕ್‌ಮೇಟ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಡಿಕೆ ಬ್ರದರ್ಸ್ ರಣತಂತ್ರ ರೂಪಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬೇರೆಯದ್ದೇ ಆಟ ಈಗ ಶುರುವಾಗಿದೆ. ಹೀಗಿದ್ದಾಗಲೇ ಡಿ.ಕೆ. ಸುರೇಶ್ ಅವರಿಗೆ ಟಿಕೆಟ್ ಕನ್ಫರ್ಮ್ ಆಗಿದೆ. ಹಾಗೇ ಗೆಲುವಿಗೆ ಕಾಂಗ್ರೆಸ್ ತನ್ನ ಸಂಪೂರ್ಣ ಶ್ರಮ ಹಾಕಲು ಸನ್ನದ್ಧವಾಗಿದೆ.

ಬಿಜೆಪಿ & ಜೆಡಿಎಸ್ ತಂತ್ರ ಏನು?

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಕುತೂಹಲದ ಕೇಂದ್ರ ಬಿಂದುವಾಗಿದೆ ಇಲ್ಲಿ ಜಯ ದಾಖಲಿಸಿ, ಹೊಸ ಇತಿಹಾಸ ನಿರ್ಮಿಸಬೇಕು ಅನ್ನೋದು ಕಾಂಗ್ರೆಸ್ & ಬಿಜೆಪಿ ನಾಯಕರ ಗುರಿ. ಹೇಗೆಂದರೆ ಸತತ ಇಲ್ಲಿ 3 ಬಾರಿ ಗೆದ್ದಿರುವ ಡಿ.ಕೆ. ಸುರೇಶ್ ಅವರು, ಇದೀಗ ಮತ್ತೆ ಬೆಂಗಳೂರು ಗ್ರಾಮಾಂತರದ ಕ್ಷೇತ್ರದಿಂದ ಗೆದ್ದು ಬೀಗಿದರೆ 4ನೇ ಬಾರಿಗೆ ಗೆದ್ದಂತೆ ಆಗುತ್ತದೆ. ಈ ಮೂಲಕ ಸತತ 4 ಬಾರಿ ಗೆದ್ದ ಕೀರ್ತಿ ಡಿ.ಕೆ. ಸುರೇಶ್ ಅವರಿಗೆ ಸಲ್ಲುತ್ತದೆ. ಆದರೆ ಈ ನಡುವೆ ಬಿಜೆಪಿ & ಜೆಡಿಎಸ್ ಮಧ್ಯೆ ಇದೀಗ ಮೈತ್ರಿ ಆಗಿರುವ ಹಿನ್ನೆಲೆ, ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಪಣತೊಟ್ಟಿದ್ದಾರೆ ದೋಸ್ತಿಗಳು. ಹೀಗಾಗಿ ಭಾರಿ ಹಣಾಹಣಿ ನಿರೀಕ್ಷೆ ಮಾಡಲಾಗಿದೆ.

DK Suresh Name Has Been Finalised For Bengaluru Rural Lok Sabha Constituency By Congress

ಒಟ್ನಲ್ಲಿ ಇದೀಗ ತಾನೇ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿಯ ಘೋಷಣೆ ಮಾಡಿ, ಕಾಂಗ್ರೆಸ್ ನಾಯಕರು ರಣಕಹಳೆ ಮೊಳಗಿಸಿದ್ದಾರೆ. ಹೀಗೆ ಲೋಕಸಭೆ ಚುನಾವಣೆಯಲ್ಲಿ ಮತದಾರನ ಒಲವು ಯಾರ ಪರವಾಗಿ ಇರಲಿದೆ? ಈ ತಿಕ್ಕಾಟವು ಎಲ್ಲಿಗೆ ಬಂದು ನಿಲ್ಲಲಿದೆ? ಈ ಗೆಲುವಿನ ಮೂಲಕ ಡಿ.ಕೆ. ಸುರೇಶ್ ಅವರು ಹೊಸ ಇತಿಹಾಸ ನಿರ್ಮಾಣ ಮಾಡ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+