ಬೇರೆ ರಾಜ್ಯದಲ್ಲಿರುವ ಕನ್ನಡಿಗರನ್ನು ಕರೆತನ್ನಿ- ಡಿಕೆ ಶಿವಕುಮಾರ್ ಮನವಿ
ಬೆಂಗಳೂರು, ಮೇ 9: ಬೇರೆ ರಾಜ್ಯದಲ್ಲಿರುವ ಕನ್ನಡಿಗನ್ನು ಕರೆತನ್ನಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
''ನಮ್ಮ ಕನ್ನಡದ ಅಣ್ಣ ತಮ್ಮಂದಿರು ಬೇರೆ ರಾಜ್ಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸಾವಿರಾರು ಜನರು ಅಲ್ಲಿಂದ ವಾಪಸ್ ಬರಲು ಅರ್ಜಿ ಹಾಕಿದ್ದಾರೆ. ಯಾವ ಅಧಿಕಾರಿಗಳು ಕೂಡ ಅವರನ್ನು ಕರೆತರಲು ಆಸಕ್ತಿ ತೋರಿಲ್ಲ. ಅವರನ್ನು ತಾಯಿ ನಾಡಿಗೆ ಕರೆದುಕೊಂಡು ಬರಬೇಕು ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ'' ಎಂದಿದ್ದಾರೆ.
ಹೊರ ರಾಷ್ಟ್ರದಲ್ಲಿ ಇದ್ದ ಕನ್ನಡಿಗರನ್ನು ಈಗಾಗಲೇ ವಿಮಾನಗಳ ಮೂಲಕ ಕರೆತರುವ ಪ್ರಯತ್ನ ನಡೆದಿದೆ. ಅದೇ ರೀತಿ ಬೇರೆ ರಾಜ್ಯದಲ್ಲಿರುವವರನ್ನು ಕರೆದುಕೊಂಡು ಬನ್ನಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡ ಡಿಕೆ ಶಿವಕುಮಾರ್
ಈ ಕೆಲಸಕ್ಕೆ ಕಾಂಗ್ರೆಸ್ ಪಕ್ಷ ನಿಮಗೆ ಸಂಪೂರ್ಣ ಸಹಕಾರ ನೀಡುತ್ತದೆ. ದಯಮಾಡಿ ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತನ್ನಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಅವರ ಸರ್ಕಾರ ಕೊರೊನಾ ವಿಚಾರದಲ್ಲಿ ನಮ್ಮ ಮನವಿ, ಸಲಹೆಗಳಿಗೆ ಸ್ಪಂದಿಸುತ್ತಿರುವುಕ್ಕೆ ಅಭಿನಂದನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.