DK Shivakumar: ವಿವಾದ ಸೃಷ್ಟಿಸಿದ ಕಾಂಗ್ರೆಸ್ ಜಾಹೀರಾತು, ರೇಟ್ ಕಾರ್ಡ್ ನೀಡಿದ್ದು ಬಿಜೆಪಿ ನಾಯಕರೇ: ಡಿಕೆಶಿ

ಬೆಂಗಳೂರು, ಮೇ 06: ರಾಜ್ಯ ಬಿಜೆಪಿ ಸರ್ಕಾರ ಇವೆಲ್ಲದರ ಮೇಲೆ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಶನಿವಾರ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತು ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಅದಕ್ಕೆ ಪ್ರತ್ಯುತ್ತರ ನೀಡಿರುವ ಅವರು ರೇಟ್ ಕಾರ್ಡ್ ನೀಡಿದವರು ಬಿಜೆಪಿ ನಾಯಕರೇ ಎಂದು ತಿರುಗೇಟು ಕೊಟ್ಟಿದ್ದಾರೆ.

ಬಿಜೆಪಿ ಲೂಟಿ ಸರ್ಕಾರ ಎಂದು ಹೇಳಿದ್ದ ಕಾಂಗ್ರೆಸ್ ಪಕ್ಷ ನೀಡಿರುವ ಜಾಹೀರಾತು ವಿವಾದ ಹುಟ್ಟುಹಾಕಿದೆ. ಇದರಿಂದ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ನೋಟಿಸ್ ನೀಡಿರುವ ಚುನಾವಣೆ ಆಯೋಗ ಸಾಕ್ಷಿ ಒದಗಿಸುವಂತೆ ಸೂಚಿಸಿದೆ. ಚುನಾವಣೆಗೆ ಕೇವಲ ಮೂರೇ ದಿನ ಇರುವಾಗಲೇ ರಾಜ್ಯ ರಾಜಕೀಯದಲ್ಲಿ ಇಂತದ್ದೊಂದು ಬೆಳವಣಿಗೆ ನಡೆದಿದೆ. ಈ ಸಂಬಂಧ ಕಿಡಿ ಕಾರಿದ ಡಿಕೆ ಶಿವಕುಮಾರ್ ಬಿಜೆಪಿ ನಾಯಕರೇ ರೇಟ್ ಕಾರ್ಡ್ ನೀಡಿದ್ದು ಎಂದು ಕೆಲವು ನಾಯಕರ ಹೆಸರುನ್ನು ಬಹಿರಂಗಪಡಿಸಿದ್ದಾರೆ.

DK Shivakumar Reacts about and revealed names on BJP Corruption Advertisement

ಬಿಜೆಪಿ ಸರ್ಕಾರ ಮೇಲೆ ರೇಟ್​ ಕಾರ್ಡ್ ನೀಡಿದ್ದು ನಾನಲ್ಲ, ಬದಲಾಗಿ ಬಿಜೆಪಿ ನಾಯಕರಾದ ಬಸನಗೌಡ ಯತ್ನಾಳ್, ಗೂಳಿಹಟ್ಟಿ ಶೇಖರ್, ​ಎಚ್​.ವಿಶ್ವನಾಥ್ ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರೇಟ್​ ಎಷ್ಟು ಕೊಡಬೇಕು ಎಂಬದನ್ನು ಬಿಜೆಪಿ ನಾಯಕರೇ ನೀಡಿದ್ದಾರೆ. ಬಿಜೆಪಿಯವರು ನೀಡಿದ ರೇಟ್ ಕಾರ್ಡ್ ನಾವು ನೀಡಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಚುನಾವಣೆ ಹೊತ್ತಿನಲ್ಲಿ ಆಗಿದ್ದೇನು?

ಬಿಜೆಪಿ ವಿರುದ್ಧ ನೀಡಿರುವ ಕಾಂಗ್ರೆಸ್‌ನ ಭ್ರಷ್ಟಾಚಾರ ಆರೋಪಗಳು ಆಧಾರರಹಿತವಾಗಿದೆ. ಈ ಕಾರಣಕ್ಕೆ ಕೇಸರಿ ಪಡೆ ರಾಜ್ಯ ಚುನಾವಣೆ ಆಯೋಗದಲ್ಲಿ ದೂರು ದಾಖಲಿಸಿದೆ. ಈ ದೂರಿನ ಮೇರೆಗೆ ಚುನಾವಣಾಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ ತಾವು ಮಾಡಿರುವ ಆರೋಪಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ನೋಟಿಸ್ ನೀಡಿತು.

DK Shivakumar Reacts about and revealed names on BJP Corruption Advertisement

ನೋಟಿಸ್ ಪ್ರಕಾರ ಇಂದು ಭಾನುವಾರ ಸಂಜೆ 7ಗಂಟೆಯೊಳಗೆ ಸಾಕ್ಷ್ಯ ಒದಗಿಸುವಂತೆ ಜೊತೆಗೆ ಆರೋಪ ಕುರಿತು ವಿವರಣೆಯನ್ನು ಚುನಾವಣಾ ಆಯೋಗ ಕೇಳಿದೆ. ಸರ್ಕಾರದ ಆಡಳಿತ ಯಂತ್ರದ ಮೇಲೆ ನಿರ್ದಿಷ್ಟವಾಗಿ ಭ್ರಷ್ಟಾಚಾರದ ಆರೋಪಿಸಲಾಗಿದೆ. ಇದು ಚುನಾವಣೆ ಪ್ರಕ್ರಿಯೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಭಾರತದ ಇತಿಹಾಸದಲ್ಲೇ ಇದೊಂದು ಭ್ರಷ್ಟ ಸರ್ಕಾರ. ಕಳೆದ ನಾಲ್ಕೇ ವರ್ಷದಲ್ಲಿ ಈ 40ಪರ್ಸೆಂಟ್ ಸರ್ಕಾರ 1,50,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಲೂಟಿ ಹೊಡೆದಿದೆ. ಈ ಕುರಿತು ಒಂದಷ್ಟು ಅಂಶಗಳನ್ನು ನೀಡಿ ಕಾಂಗ್ರೆಸ್ ಶನಿವಾರ ಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು. ಭಾನುವಾರ ಸಹ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಜಾಹೀರಾತು ನೀಡಿದೆ.

ಈ ಸಂಬಂಧ ಸಿಎಂ ಸ್ಥಾನಕ್ಕೆ, ಸರ್ಕಾರದ ಆಡಳಿತಕ್ಕೆ ಬಿಜೆಪಿ ನಾಯಕರೇ ರೇಟ್ ಕಾರ್ಡ್ ನಿಡಿದ್ದಾರೆ. ನಾವೇ ಅದನ್ನ ಪ್ರಕಟಿಸಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+