ಅತೃಪ್ತ ಶಾಸಕರ ಕರೆತರಲು ಮುಂಬೈಗೆ ತೆರಳಲಿದ್ದಾರೆ ಡಿಕೆಶಿ
ಬೆಂಗಳೂರು, ಜುಲೈ 09: ನಾಳೆ (ಜುಲೈ 10) ರಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಲಿದ್ದು, ಅತೃಪ್ತ ಶಾಸಕರು ತಂಗಿರುವ ಹೊಟೆಲ್‌ಗೆ ಭೇಟಿ ನೀಡಿ ಅತೃಪ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಜೊತೆ ಜೆಡಿಎಸ್‌ನ ಶೀವಲಿಂಗೇಗೌಡ ಅವರೂ ಸೇರಿ ಇನ್ನೂ ಕೆಲವು ಪ್ರಮುಖ ಮುಖಂಡರು ಮುಂಬೈಗೆ ತೆರಳುತ್ತಿದ್ದು, ಅಲ್ಲಿ ತಂಗಿರುವ ಅತೃಪ್ತ ಶಾಸಕರೊಂದಿಗೆ ಅವರು ಮಾತುಕತೆ ನಡೆಸಲಿದ್ದಾರೆ.
ಅರ್ಥವಾಗದ ಡಿಕೆಶಿ ನಡೆ- ತೆರಳಿದ್ದು ಮುಂಬೈಗಲ್ಲ, ದೆಹಲಿಗೆ!
ನಾಳೆ ಬೆಳಿಗ್ಗೆ 9:30 ರ ವೇಳೆಗೆ ಅವರು ಮುಂಬೈಗೆ ತೆರಳುತ್ತಿದ್ದು, ಅತೃಪ್ತರು ತಂಗಿರುವ ಸೋಫಿಯೇಟ್ ಹೊಟೆಲ್‌ಗೆ ತೆರಳಿ ಮಾತುಕತೆ ನಡೆಸಲಿದ್ದಾರೆ.
ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಡಿ.ಕೆ.ಶಿವಕುಮಾರ್, ಮುಂಬೈಗೆ ತೆರಳಿರುವವರೂ ಸಹ ನಮ್ಮ ಸ್ನೇಹಿತರೆ ಅವರೊಂದಿಗೆ ಮಾತುಕತೆ ನಡೆಸಿ ಅವರನ್ನು ವಾಪಸ್ ಕರೆದುಕೊಂಡು ಬರುತ್ತೇವೆ ಎಂದು ಹೇಳಿದರು.
ಜುಲೈ 15 ರ ವರೆಗೆ ಮೈತ್ರಿ ನಿರಾಳ, ಸರ್ಕಾರ ಉಳಿಸಿಕೊಳ್ಳಲು ಕಾಲಾವಕಾಶ
ಎಸ್.ಟಿ.ಸೋಮಶೇಖರ್ ನಾವು ಎಲ್ಲರೂ ಒಟ್ಟಿಗೆ ರಾಜಕಾರಣ ಪ್ರಾರಂಭ ಮಾಡಿದವರು, ಕಾಂಗ್ರೆಸ್ ಕಷ್ಟದಲ್ಲಿದ್ದಾಗ ಕಟ್ಟಿದವರು ಅವರು, ಕಾಂಗ್ರೆಸ್‌ನ ಆಧಾರ ಸ್ತಂಭಗಳು ಅವರೆಲ್ಲಾ, ಅವರೊಟ್ಟಿಗೆ ಮಾತನಾಡಿ, ಅವರ ಕಷ್ಟ-ಸುಖಗಳನ್ನು ಕೇಳಿ ಅವರನ್ನು ಕರೆದುಕೊಂಡು ಬರುತ್ತೇವೆ ಎಂದು ಹೇಳಿದರು.