ಡಿಕೆ ರವಿ ಮಾವ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಿಷ್ಟು
ಬೆಂಗಳೂರು, ಮಾ. 18 : 'ರವಿ ಅವರನ್ನು ಕೋಲಾರದಿಂದ ವರ್ಗಾವಣೆ ಮಾಡುವಂತೆ ನಾನು ಮನವಿ ಮಾಡಿದ್ದೆ. ನನ್ನ ಅಳಿಯ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ, ಕೌಟುಂಬಿಕ ಕಲಹದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ' ಎಂದು ರವಿ ಅವರ ಮಾವ ಹನುಮಂತರಾಯಪ್ಪ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಾಗರಭಾವಿಯ ನಿವಾಸದಲ್ಲಿ ರವಿ ಅವರ ಪತ್ನಿ ಕುಸುಮಾ ಅವರ ತಂದೆ ಹನುಮಂತರಾಯಪ್ಪ ಪತ್ರಿಕಾಗೋಷ್ಠಿ ನಡೆಸಿದರು. 'ತಮ್ಮ ಅಳಿಯ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ ಎಂದು ಹೇಳಿದ ಅವರು, ತನಿಖೆಗೆ ಕುಟುಂಬದ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ, ಸಿಬಿಐ ತನಿಖೆಯಾಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ' ಎಂದರು. [ಈ ಸಾವು ನ್ಯಾಯವೇ ಮತ ಹಾಕಿ]

'ಕೋಲಾರದಿಂದ ಡಿಕೆ ರವಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡುವಂತೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೆ' ಎಂದು ಹೇಳಿದ ಹನುಮಂತರಾಯಪ್ಪ ಅವರು, ಕೌಟುಂಬಿಕ ಕಲಹದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದರು. [ಡಿಕೆ ರವಿ ಕೊನೆಯ ಕರೆ ಸ್ವೀಕರಿಸಿದ್ದು 11.22ಕ್ಕೆ]
'ನಾನು ಮತ್ತು ರವಿ ಸ್ನೇಹಿತರಂತೆ ಇದ್ದೆವು. ಮಾ.16ರ ಸೋಮವಾರ ಬೆಳಗ್ಗೆ 9.30ಕ್ಕೆ ರವಿ ಅವರ ಜೊತೆಗೆ ಕುಳಿತುಕೊಂಡು ತಿಂಡಿ ತಿಂದಿದ್ದೆ. ಮಧ್ಯಾಹ್ನದ ಊಟಕ್ಕೂ ನಮ್ಮ ಮನೆಯಿಂದಲೇ ಊಟವನ್ನು ಕಳಿಸಲಾಗಿತ್ತು' ಎಂದು ಹನುಮಂತರಾಯಪ್ಪ ತಿಳಿಸಿದರು. [ಡಿಕೆ ರವಿ ಸಾವು : ಮಂಗಳವಾರದ ಪ್ರಮುಖ ಘಟನೆಗಳು]
'ರವಿ ಅವರಿಗೆ ಬೆದರಿಕೆ ಕರೆ ಬಂದಿದ್ದರೆ ದೂರವಾಣಿ ಮೂಲಕ ಬಂದಿರುತ್ತದೆ. ಅವರ ಎರಡೂ ಮೊಬೈಲ್ ಫೋನ್‌ಗಳ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿದರೆ ಬೆದರಿಕೆ ಬಂದಿತ್ತೇ ಎಂಬುದು ತಿಳಿಯುತ್ತದೆ. ನಮ್ಮ ಕುಟುಂಬ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ' ಎಂದರು.
ಸೋಮವಾರ ಏನಾಯಿತು : 'ರವಿ ಅವರು ಬೆಳಗ್ಗೆ ನಮ್ಮ ಮನೆಯಿಂದಲೇ ತಿಂಡಿ ತಿಂದು ಕಚೇರಿಗೆ ಹೋದರು. ಅವರು ಕಚೇರಿಗೆ ಹೋದ ಮೇಲೆ ತುರ್ತು ಕೆಲಸಗಳಿದ್ದರೆ ಮಾತ್ರ ಕರೆ ಮಾಡುತ್ತಿದ್ದರು. ಆದರೆ, ಸೋಮವಾರ ಯಾವುದೇ ಕರೆಗಳನ್ನು ಸ್ವೀಕರಿಸಲಿಲ್ಲ. ಸಂಜೆ 4 ಗಂಟೆ ನಂತರ ನನ್ನ ಮಗಳು ಕುಸುಮಾ ಕಚೇರಿಗೆ ಕರೆ ಮಾಡಿದಾಗ ಮನೆಗೆ ಹೋಗಿದ್ದಾರೆ' ಎಂದು ಹೇಳಿದ್ದರು.
'ಸಂಜೆ 6.45ರ ಸುಮಾರಿಗೆ ನಾವು ಅಪಾರ್ಟ್‌ಮೆಂಟ್‌ಗೆ ಹೋದೆವು. ಮಗಳು ಕೀ ತೆಗೆದುವೊಳಗೆ ಹೋದಳು ರೂಂನೊಳಗೆ ಹೋಗುತ್ತಿದ್ದಂತೆ ಕಿರುಚಿಕೊಂಡು ಬಿದ್ದಳು. ನಾನು ಹೋಗಿ ನೋಡಿದಾಗ ರವಿ ಅವರ ದೇಹ ಫ್ಯಾನಿನಲ್ಲಿ ನೇತಾಡುತ್ತಿತ್ತು. ಅವರ ಕೈ ಮುಟ್ಟಿ ನೋಡಿದಾಗ ಅವರು ಸತ್ತಿದ್ದಾರೆ ಎಂದು ತಿಳಿಯಿತು' ನಂತರ ಪೊಲೀಸರಿಗೆ ಮಾಹಿತಿ ನೀಡಿದೆ ಎಂದರು.
ಶಾಸಕರಿಂದ ಬೆದರಿಕೆ ಇತ್ತು : 'ಡಿಕೆ ರವಿ ಅವರಿಗೆ ಕೋಲಾರದ ಬಂಗಾರ ಪೇಟೆಯ ಕಾಂಗ್ರೆಸ್ ಶಾಸಕ ನಾರಾಯಣ ಸ್ವಾಮಿಯವರಿಂದ ಬೆದರಿಕೆ ಕರೆ ಇತ್ತು. ಕಾನ್ಫಿಡೆಂಡ್ ಗ್ರೂಪ್ ವಿಚಾರದ ಬಗ್ಗೆ ನಾರಾಯಣ ಸ್ವಾಮಿ ಅವರಿಂದ ಬೆದರಿಕೆ ಕರೆ ಬಂದಿತ್ತು' ಎಂದು ಹೇಳಿದರು.












Click it and Unblock the Notifications