ಅಪ್ಪು..ಅಪ್ಪುನೇ..ಎಂದ ನೆಟ್ಟಿಗರು: 'ಯುವ ರಾಜಕುಮಾರ್' ಮೇಲಿನ ಭರವಸೆ ಹುಸಿ ಆಯ್ತಾ?
ಬೆಂಗಳೂರು, ಜೂನ್ 12: ಕನ್ನಡ 'ಯುವ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ದೊಡ್ಮನೆ ಕುಡಿ 'ಯುವ ರಾಜಕುಮಾರ್' ಅವರ ವೈಯಕ್ತಿಕ ಬಾಳಲ್ಲಿ ಬಿರುಗಾಳಿ ಎದ್ದಿದೆ. ಡಿವೋರ್ಸ್‌ಗಾಗಿ ಯುವ ಕೋರ್ಟ್ ಮೆಟ್ಟಿಲೇರಿದ್ದಾರೆ. ಇಂತದ್ದೊಂದು ಬೆಳವಣಿಗೆ ದೊಡ್ಮನೆ ನಡೆದಿದ್ದು, ಇದೇ ಮೊದಲು. ಪಾರ್ವತಮ್ಮ ರಾಜಕುಮಾರ್, ಪವರ್ ಸ್ಟಾರ್ ಅಪ್ಪು ಇದ್ದಿದ್ದರೆ ಹೀಗೆ ಆಗಲು ಬಿಡುತ್ತಿರಲಿಲ್ಲ. ಯುವನಿಂದ ದೊಡ್ಮನೆ ಘನತೆಗೆ ಕುಂದುಂಟಾಗಿದೆ. ಇನ್ನು ಮುಂದೆ ಅಪ್ಪು ಅವರ ಸ್ಥಾನದಲ್ಲಿ ಬೇರೆ ಯಾರನ್ನು ನೋಡುವುದಿಲ್ಲ ಎಂದು ನೆಟ್ಟಿಗರು ಬೇಸರ ಹೊರ ಹಾಕಿದ್ದಾರೆ.
ಹೌದು, ಹಿಂದಿನಿಂದಲೂ ಹೆಣ್ಣು ಮಕ್ಕಳಿಗೆ ವಿಶೇಷ ಗೌರವ ಕೊಟ್ಟು ಬಂದಿರುವುದು ಡಾ.ರಾಜಕುಮಾರ್ ಕುಟುಂಬ. ಅವರ ಮನೆಯ ಪ್ರತಿ ಸದಸ್ಯರು ಸರಳತೆ, ವಿನಯ, ಅತ್ಯುತ್ತಮ ವ್ಯಕ್ತಿತ್ವಕ್ಕೆ ಹೆಸರಾದವರು. ದೊಡ್ಮನೆಯವರು ಆನ್ ಸ್ಕ್ರೀನ್ ನಲ್ಲಿ ಮಾತ್ರವಲ್ಲದೇ ಆಫ್ ಸ್ಕ್ರೀನ್ ನಲ್ಲೂ ಹಿರೋಗಳಂತೆ ಬದುಕಿದವರು.

ಇದೀಗ ಯುವ ರಾಜಕುಮಾರ್ ಅವರು ದೊಡ್ಮನೆಯ ಒಂದಷ್ಟು ಕಟ್ಟುಪಾಡುಗಳನ್ನು ಮುರಿದಿದ್ದಾರೆ. ಪತ್ನಿ ಶ್ರೀದೇವಿ ಅವರಿಗೆ ಡಿವೋರ್ಸ್ ನೋಟಿಸ್ ನೀಡುವ ಮೂಲಕ ರಾಘವೇಂದ್ರ ರಾಜಕುಮಾರ್ ಪುತ್ರ ದೊಡ್ಮನೆಗೆ ಕುಂದು ತಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೀಗೆ ಹೇಳಲು ಕಾರಣಗಳು ಸಾಕಷ್ಟಿವೆ. ಡಿವೋರ್ಸ್ ಪ್ರಸ್ತಾಪವಾಗುತ್ತಿದ್ದಂತೆ ಯುವ ಪರ ವಕೀಲರು ಶ್ರೀದೇವಿ ಬಗ್ಗೆ ಕೆಲವು ಆರೋಪ ಮಾಡಿದ್ದರು. ಅಲ್ಲದೇ ದೊಡ್ಮನೆಯಲ್ಲಿ ಇಂತಹ ಘಟನೆಗಳು ಆಗದಂತೆ ಕುಟುಂಬ ಸದಸ್ಯರು ಬುದ್ಧಿವಾದ ಹೇಳಿದ್ದನ್ನು ದಾಟಿ ಯುವ ಕೋರ್ಟ್ ಮೆಟ್ಟಿಲೇರಿರುವುದು ಬೆಳಕಿಗೆ ಬಂದಿದೆ. ಅಲ್ಲಿಗೆ ಯುವ ತಾತ, ಚಿಕ್ಕಪ್ಪ ಹಾಕಿ ಕೊಟ್ಟ ಹಾದಿ ಬಿಟ್ಟು ಬೇರೆ ಹಾದಿ ಹಿಡಿದರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಇನ್ನೂ ಪಾರ್ವತಮ್ಮ ಅವರು, ನಟ ಪುನೀತ್ ರಾಜಕುಮಾರ್ ಅವರು ಈಗ ಇದಿದ್ದರೆ ಇಷ್ಟೆಲ್ಲ ಆಗಲು ಬಿಡುತ್ತಲೇ ಇರಲಿಲ್ಲ. ಈಗಲೂ ನಟಿ ಅಶ್ವಿನಿ ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಹಲವರು ಯುವನಿಗೆ ಬುದ್ಧಿವಾದ ಹೇಳಿದ್ದರೂ ಅವರು ಕೇಳಿದೇ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ತಿಳಿದು ಬಂದಿದೆ.

ಅಭಿಮಾನಿಗಳ ಬೇಸರಕ್ಕೆ ಇದೇ ಪ್ರಮುಖ ಕಾರಣ
ವರನಟ ಡಾ.ರಾಜಕುಮಾರ್ ಅವರು ಹಾಕಿಕೊಟ್ಟ ಹಾದಿಯಲ್ಲೇ ಮನೆಯ ಸದಸ್ಯರು ಬೆಳೆದು ಬಂದಿದ್ದಾರೆ. ನಮ್ಮನ್ನಗಲಿರುವ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ತಮ್ಮ ನಟನೆ, ವಿನಯ, ಸರಳತೆ, ವ್ಯಕ್ತಿತ್ವ ಹಾಗೂ ಸಾಮಾಜಿಕ ಸೇವೆ, ಯಾವುದೇ ಸಣ್ಣ ಗಾಸಿಪ್ ಇಲ್ಲದೇ ಸಿನಿರಂಗದಲ್ಲಿನ ಪಯಣದಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದು ಎಂತವರಿಗೂ ಇಷ್ಟವಾಗುತ್ತದೆ.
ಅಪ್ಪು ಉತ್ತರಾಧಿಕಾರಿ ಎಂದು ಭಾವಿಸಿದ್ದೆವು..! ನಿರಾಸೆ
ಅಪ್ಪು ಅವರ ನಿಧನಾನಂತರ ಅವರ ಉತ್ತರಾಧಿಕಾರಿ ಯುವ ರಾಜ್ ಕುಮಾರ್ ಎಂದೇ ಎಲ್ಲ ಅಭಿಮಾನಿಗಳು ಭಾವಿಸಿದ್ದರು. ಹೀಗಾಗಿ 'ಅಪ್ಪು' ಅವರ ಮೊದಲ ಸಿನಿಮಾಗೆ ಸಿಕ್ಕಂತೆ 'ಯುವ' ಅವರ ಮೊದಲ ಸಿನಿಮಾವನ್ನು ಸ್ವಾಗತಿಸಿದ್ದರು. ತಲೆ ಮೇಲಿಟ್ಟುಕೊಂಡು ಸಿನಿಮಾವನ್ನು ಮೆರೆಸಿದರು. ಇನ್ನಿಲ್ಲದ ವಿಶ್ವಾಸ, ನಂಬಿಕೆ ಯುವ ಅವರ ಮೇಲಿತ್ತು.
ಆದರೆ ಡಿವೋರ್ಸ್ ವಿಚಾರ ಹಾಗೂ ಅದರಲ್ಲಿ ನಡೆದ ಬೆಳವಣಿಗೆಗಳು ನೆಟ್ಟಿಗರಿಗೆ ಬೇಸರ ತರಿಸಿದೆ. ಅಪ್ಪು ಅವರ ಸ್ಥಾನದಲ್ಲಿ ಯುವ ಅವರನ್ನು ನೋಡಿದ್ದ ಜನರಿಗೆ ದೊಡ್ಮನೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಲು ಆಗುತ್ತಿಲ್ಲ. ಹೀಗಾಗಿ ಅಪ್ಪು..ಅಪ್ಪುನೇ...ಅವರ ಸ್ಥಾನ ಬೇರಾರು ತುಂಬಲು ಸಾಧ್ಯವಿಲ್ಲ. ನಾವು ನಂಬಿ ಮೋಸ ಹೋದೆವು ಎಂದು ಪೋಸ್ಟ್ ಮಾಡುತ್ತಿದ್ದಾರೆ.
ಏಳು ವರ್ಷಗಳಿಂದ ಪ್ರೀತಿಸಿ ಮದುವೆಯಾದ ಪತ್ನಿಯನ್ನು ನೋಯಿಸಿರುವ ಯುವನಿಂದ ದೊಡ್ಮನೆ ಘನೆಗೆ ಧಕ್ಕೆ ಉಂಟಾಗಿದೆ. ಮಹಿಳೆಗೆ ತೊಂದರೆ ನೀಡಲಾಗಿದೆ ಎಂದು ಯುವ ಮಾವಾ ಆರೋಪಿಸಿದ್ದಾರೆ. ಒಂದು ಹೆಣ್ಣಿನ ವಿಚಾರದಲ್ಲಿ ದೊಡ್ಮನೆಗೆ ಹೀಗೆ ಕಳಂಕವೊಂದು ಬಂದು ಬಿಟ್ಟಿದೆ ಎಂಬೆಲ್ಲ ವಿಚಾರಗಳಿಂದ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ದೊಡ್ಮನೆಯಲ್ಲಿ ತಮ್ಮ ಮಗಳು ನೋವು ಅನುಭವಿಸಿದ್ದಾರೆ ಎಂದು ಯುವ ಪತ್ನಿ ಶ್ರೀದೇವಿ ತಂದೆ ಭೈರಪ್ಪ ಹೇಳಿದ್ದಾರೆ. ಜೊತೆಗೆ ಯುವ ಎಸ್‌ಎಸ್‌ಎಲ್‌ಸಿ ಓದಿದ್ದಾರೆ. ನನ್ನ ಮಗಳು ಹೆಚ್ಚಿನ ಶಿಕ್ಷಣ ಪಡೆದಿದ್ದಾಳೆ. ಇಬ್ಬರು ಜೊತೆಗಿರಲು ನಾವು ಬಯಸಿದ್ದೇವೆ. ಆದರೆ ಅಲ್ಲಿ ನನ್ನ ಮಗಳು ನೋವು ಅನುಭವಿಸಿದ್ದಾಳೆ. ಯುವ ಅಪ್ಪಾ ಅಮ್ಮ ನಮ್ಮನ್ನು ಯವಾ ಬಳಿ ಮಾತನಾಡಲು ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನೂ ಇದೇ ವಿಚಾರವಾಗಿ ತಮ್ಮ ವಕೀಲರ ಮೂಲಕ ಉತ್ತರಿಸಿದ್ದ ಶ್ರೀದೇವಿ ಭೈರಪ್ಪ ಅವರು, ಯುವ ರಾಜಕುಮಾರ್ ಹಾಗೂ ನಟಿ ಸಪ್ತಮಿ ಗೌಡ ಜೊತೆಗೆ ಯುವ ರೆಡ್ ಹ್ಯಾಂಡ್ ಆಗಿ ಹೋಟೆಲ್ ರೂಮ್‌ನಲ್ಲಿ ಸಿಕ್ಕಿ ಬಿದ್ದಿದ್ದರು ಎಂದೆಲ್ಲ ಅವರು ಆರೋಪಿಸಿದ್ದಾರೆ. ಸದ್ಯ ಅಮೇಕರಿಕಾದಿಂದಲೇ ಅವರು ಡಿವೋರ್ಸ್ ನೋಟಿಸ್‌ಗೆ ಉತ್ತರಿಸಿದ್ದಾರೆ.












Click it and Unblock the Notifications