ವಾಹನಗಳ ನಂಬರ್ ಪ್ಲೇಟ್ ಬಹಿರಂಗ ಹರಾಜು ಹಾಕುತ್ತಿದೆ ಸರ್ಕಾರ!
ವಾಹನ ಮಾಲೀಕರ ಬಾಯಲ್ಲಿ ಎಲ್ಲಿ ಕೇಳಿದರೂ ಒಂದೇ ಮಾತು, ಅದು ನಂಬರ್ ಪ್ಲೇಟ್ ನಂಬರ್ ಪ್ಲೇಟ್ ಅಂತಾ. ಹೀಗೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಬಗ್ಗೆ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗಿದ್ದಾಗ ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ, ಕರ್ನಾಟಕ ಸಾರಿಗೆ ಇಲಾಖೆ ನಂಬರ್ ಪ್ಲೇಟ್‌ಗಳ ಬಹಿರಂಗ ಹರಾಜಿಗೆ ಮುಂದಾಗಿದೆ. ಅರೆರೆ, ನಂಬರ್ ಪ್ಲೇಟ್‌ಗಳ ಬಹಿರಂಗ ಹರಾಜು ಯಾಕೆ ಅಂದ್ರಾ? ಮುಂದೆ ಓದಿ.
ಕರ್ನಾಟಕದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿ ಆಗಿರುವ ವಾಹನ ಸಂಖ್ಯೆಯು 2 ಕೋಟಿಗಿಂತ ಹೆಚ್ಚಾಗಿದೆ. ಹೀಗಿದ್ರೂ ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಫೆಬ್ರವರಿ 17ರ ಗಡುವನ್ನ ನೀಡಿತ್ತು. ಆದರೆ ಕೊನೆಯ ಕ್ಷಣದಲ್ಲಿ 3 ತಿಂಗಳು ಡೆಡ್‌ಲೈನ್ ಮುಂದೂಡಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಮೇ 31 ಕ್ಕೆ ಡೆಡ್‌ಲೈನ್ ಫಿಕ್ಸ್ ಮಾಡಿದೆ. ಹೀಗಿದ್ದಾಗ ವಾಹನಗಳ ನಂಬರ್ ಪ್ಲೇಟ್ ಬಹಿರಂಗ ಹರಾಜು ನಡೆಯಲಿದೆ! ಈ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ನಂಬರ್ ಪ್ಲೇಟ್ ಹರಾಜು ಎಲ್ಲಿ?
ಹೌದು ಸಾರಿಗೆ ಇಲಾಖೆ ವತಿಯಿಂದ ಮೋಟಾರು ವಾಹನಗಳ ಸಾರಿಗೆ ಆಯುಕ್ತರ ಕಚೇರಿ, 1ನೇ ಮಹಡಿ, ಟಿಟಿಎಂಸಿ ಕಟ್ಟಡ, ಕೆ.ಎಚ್ ರಸ್ತೆ, ಶಾಂತಿನಗರ, ಬೆಂಗಳೂರು ಇಲ್ಲಿ KA 04/NE ಮುಂಗಡ ಶ್ರೇಣಿಯ ಪ್ರಾರಂಭಿಸಿ ನೋಂದಣಿ ಸಂಖ್ಯೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಆ ಪ್ರಕಾರ ಫೆಬ್ರವರಿ 29 ರಂದು ಮಧ್ಯಾಹ್ನ 12 ಗಂಟೆಗೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಬೆಂಗಳೂರು (ಉತ್ತರ) ಇಲ್ಲಿ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯಾವ ಯಾವ ಸಂಖ್ಯೆ ಸಿಗಲಿದೆ ಗೊತ್ತಾ? ಮಾಹಿತಿಗಾಗಿ ಮುಂದೆ ಓದಿ.
ಇಲ್ಲಿರುವ ನಂಬರ್ ನಿಮಗೆ ಸಿಗುತ್ತೆ!
ಈಗ ಬಹಿರಂಗ ಹರಾಜು ಅಗುತ್ತಿರುವ ವಾಹನಗಳ ಸಂಖ್ಯೆ ನೋಡುವುದಾದರೆ, ನೋಂದಾಣಿ ಸಂಖ್ಯೆ 1, 123, 1234, 10, 11, 111, 1111, 100, 1000, 1001, 22, 27, 222, 234, 2222, 2727, 33, 36, 63,333, 3333, 3636, 45, 444, 4444, 4455, 4545, 5, 55, 555, 5454, 5555, 6, 63, 666, 6666, 6055, 6363, 7, 72, 77, 777, 786, 7272, 7777, 8, 88, 888, 8055, 8118, 8181, 8888, 9, 90, 99, 900, 909, 999, 9000, 9009, 9090 ಮತ್ತು 9999 ಹಾಗೂ ಉಳಿದ ಸಂಖ್ಯೆಗಳಲ್ಲಿ ಯಾವುದೇ ಆಯ್ಕೆಯ ನೋಂದಣಿ ಸಂಖ್ಯೆ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿದಾರರಿಗೆ ಪ್ರಮುಖ ಮಾಹಿತಿ
ಇನ್ನು ಲಘು ಮೋಟಾರು ವಾಹನ ಅಂದ್ರೆ ಸಾರಿಗೇತರ ವರ್ಗದ ಕಾರು, ಜೀಪು, ಇತ್ಯಾದಿ ಸ್ವಂತ ಉಪಯೋಗಕ್ಕೆ ಬಳಸುವ ವಾಹನಗಳು. ಕರ್ನಾಟಕದ ಯಾವುದೇ ಪ್ರಾಧಿಕಾರದ ಕಚೇರಿಯಲ್ಲಿ ಹೊಸದಾಗಿ ಪ್ರಾರಂಭಿಸುವ ಮುಂಗಡ ಶ್ರೇಣಿಗಳಲ್ಲಿಅರ್ಜಿದಾರರು ಕೇಳುವ, ಆಯ್ಕೆ ನೋಂದಣಿ ಸಂಖ್ಯೆಗಳನ್ನು ಬಹಿರಂಗ ಹರಾಜು ಕರೆಯುವ ಮೂಲಕ ಹಂಚಿಕೆ ಮಾಡಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ರವರ ಕಚೇರಿ,'ಎ' ಬ್ಲಾಕ್ 1 ನೇ ಮಹಡಿ, ಟಿ.ಟಿ.ಎಂ.ಸಿ ಕಟ್ಟಡ, ಬಿ.ಎಂ.ಟಿ.ಸಿ ಸಂಕೀರ್ಣ, ಶಾಂತಿನಗರ, ಬೆಂಗಳೂರು ಇಲ್ಲಿ ಭೇಟಿ ನೀಡಬಹುದು. ಇನ್ನು ಈ ಬಗ್ಗೆ ಬೆಂಗಳೂರು ದಕ್ಷಿಣ (ಪ್ರವರ್ತನ) ಅಪರ ಸಾರಿಗೆ ಆಯುಕ್ತರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications