ಜನನ & ಮರಣ ನೋಂದಣಿ ಬಗ್ಗೆ ಪ್ರಮುಖ ಮಾಹಿತಿ ಇಲ್ಲಿದೆ!

ಬೆಂಗಳೂರು: ಜನನ ಹಾಗೂ ಮರಣ ನೋಂದಣಿಯಲ್ಲಿ ಜನನ & ಮರಣ ನೋಂದಣಾಧಿಕಾರಿ ಹಾಗೂ ಜನನ & ಮರಣ ಉಪ ನೋಂದಣಾಧಿಕಾರಿಗಳು ಸರ್ಕಾರಿ ಅದೇಶವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲು ಆದೇಶಿಸಲಾಗಿದೆ. ಹಾಗೆ ಜನನ & ಮರಣ ನೋಂದಣಿಯ ನಿಯಮಾನುಸಾರ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಸೂಚನೆ ನೀಡಿದ್ದಾರೆ.

ರಾಜಧಾನಿ ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಹಾಗೂ ಮರಣ ನೋಂದಣಿ ಕಾರ್ಯದ ಕೃಷಿ ಅಂಕಿ ಅಂಶಗಳ ಬಗ್ಗೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಾತನಾಡಿದರು. 2023ನೇ ಸಾಲಿನ ಜನವರಿ ತಿಂಗಳಿಂದ ಶುರು ಆಗಿ, ಅಕ್ಟೋಬರ್ ತಿಂಗಳವರೆ 11963 ಜನನ ಮತ್ತು 8671 ಮರಣ ಸೇರಿ ಒಟ್ಟು 20634 ಜನನ & ಮರಣ ನೋಂದಣಿಯಾಗಿದೆ. ಜನನ ಮರಣ ನೋಂದಣಿ ಪಾರದರ್ಶಕವಾಗಿ ನಡೆಯಬೇಕು ಎಂದರು.

Discover The Important Update About Birth and Death Registration

ಕಡ್ಡಾಯ ಪರಿಶೀಲನೆಗೆ ಖಡಕ್ ಸೂಚನೆ

ಜಿಲ್ಲೆಯ ಎಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಆಶಾ ಕಾರ್ಯಕರ್ತೆಯರು ಸೇರಿ ಅಂಗನವಾಡಿ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳಲ್ಲಿ ಜನನ ಮರಣ ನೋಂದಣಿ ಅಥವಾ, ಉಪ ನೋಂದಣಿ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಜನನ ಮರಣ ಘಟಕದಲ್ಲಿ ಕಡ್ಡಾಯ ಪರಿಶೀಲನೆ ನಡೆಸಿ ನಿಗದಿತ ಸಮಯದ ಒಳಗಾಗಿ ನೋಂದಾಯಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಇದೇ ವೇಳೆ ಸೂಚಿಸಿದರು.

ಸಮನ್ವಯ ಸಮಿತಿ ಸಭೆ ನಡೆಸಿ

ಜಿಲ್ಲೆಯ ಆಯಾ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕಾಲ ಕಾಲಕ್ಕೆ ಭೇಟಿ ನೀಡಿ ಜನನ & ಮರಣ ನೋಂದಣಿ ಘಟಕ ತಪಾಸಣೆ ಮಾಡಲಿ. ಪ್ರತಿ ತಿಂಗಳಿಗೆ ಒಂದು ಬಾರಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಜನನ & ಮರಣ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ ವರದಿ ನೀಡಬೇಕು ಎಂದು ಹೇಳಿದರು.

ಬೆಳೆ ಕಟಾವು ಬಗ್ಗೆ ಪರಿಶೀಲನೆ

2023 & 24ನೇ ಸಾಲಿನ ಮುಂಗಾರು ಋತುವಿನ ಮರುಹೊಂದಾಣಿಕೆ ವರದಿಯ ಪರಿಶೀಲಿಸಲು ಹಾಗೂ ಬೆಳೆ ಕಟಾವು ಪ್ರಯೋಗಗಳ ನಮೂನೆ -1 ಮತ್ತು ನಮೂನೆ -2 ಅನ್ನು ಹಾಗೂ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳುವಾಗ ನಿರೀಕ್ಷಿತ ಕಟಾವು ದಿನಾಂಕವನ್ನ ಗಮನದಲ್ಲಿಟ್ಟಿಕೊಂಡು, ರೈತರ ಜೊತೆಗೆ ನೇರ ಸಂಪರ್ಕದಲ್ಲಿ ಇದ್ದು, ಯಾವುದೇ ಪ್ರಯೋಗ ನಷ್ಟ ಆಗದಿರುವ ರೀತಿ ಕ್ರಮ ವಹಿಸುವಂತೆ ಈ ವೇಳೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನಾಗರಾಜ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಲಲಿತಾ ರೆಡ್ಡಿ, ಜಿಲ್ಲಾ ಸಾಂಖ್ಯಿಕ ಇಲಾಖೆ ಸಹಾಯಕ ನಿರ್ದೇಶಕರಾದ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರ ಮೇಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾಂಖಿಕ ಇಲಾಖೆ ತಾಲೂಕು ಮಟ್ಟದ ಗಣತಿದಾರರು & ಸಾಂಖಿಕ ನಿರೀಕ್ಷಕರು ಹಾಗೂ ಸಿಬ್ಬಂದಿ ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+