ಮತ ಹಾಕಿರಿ, ಹೋಟೆಲ್‌ನಲ್ಲಿ ತಿಂಡಿ, ಮಾಲ್ ನಲ್ಲಿ ಡಿಸ್ಕೌಂಟ್ ಪಡೆಯಿರಿ!
ಬೆಂಗಳೂರು, ಮಾರ್ಚ್ 29: ನಗರದಲ್ಲಿ ಈ ಬಾರಿ ವಿಧಾನಸಭೆ ಚುನಾವಣೆ ವೇಳೆ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಮತದಾನ ಮಾಡಿದವರಿಗೆ ಹತ್ತಿರದ ಹೊಟೆಲ್ ನಲ್ಲಿ ತಿಂಡಿ, ಮಾಲ್ ಗಳಲ್ಲಿ ಖರೀದಿ ಮೇಲೆ ಡಿಸ್ಕೌಂಟ್ ನೀಡಲು ಚಿಂತನೆ ನಡೆಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಚುನಾವಣೆ ಘೋಷಣೆ ಬಳಿಕ ಎಲ್ಲಾ ಪಕ್ಷಗಳ ಜೊತೆ ಸಭೆ ನಡೆಸಿ, ಜಿಲ್ಲಾ ಚುನಾವಣಾಧಿಕಾರಿ ಆಗಿ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ನೀಡಿದ್ದೇವೆ. ಮತ ಚಲಾಯಿಸಿ ಹೋಟೆಲ್, ಮಾಲ್ ಹೋದವರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಶುಕ್ರವಾರ ಮಾಲಿಕರ ಜತೆ ಸಭೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಇವಿಎಂ ಮತ್ತು ವಿವಿ ಪ್ಯಾಟ್ ಬಗ್ಗೆ ಮಾಹಿತಿ ನೀಡಿದ್ದೇವೆ. ರಾಯಚೂರಿನಲ್ಲಾದ ಘಟನೆ ಬಗ್ಗೆ ಕೂಡ ಪ್ರಶ್ನಿಸಿದ್ದಾರೆ. ನಗರದಲ್ಲಿರೋ ಪ್ಲೆಕ್ಸ್, ಬ್ಯಾನರ್ ತೆಗೆಯಲು ತೆಗೆದುಕೊಂಡಿರೋ ಕಾರ್ಯಕ್ರಮ ಬಗ್ಗೆ ತಿಳಿಸಿದ್ದೇವೆ. ಫ್ಲೆಕ್ಸ್ ಬಿಟ್ಟು ಹೋಗಿದ್ದಲ್ಲಿ ಮಾಹಿತಿ ನೀಡಿದರೆ ತೆಗೆಯಲು ಕ್ರಮ ಕೈಗೊಳ್ಳಲಾಗುತ್ತದೆ.

ವಿಧಾನಸಭಾ ಕ್ಷೇತ್ರ ಆರ್.ಓ ಗಳು ಕೆಲಸ ಆರಂಭಿಸಿದ್ದು, ಅವರ ಮಾಹಿತಿಗಳನ್ನು ಪಕ್ಷದ ಮುಖಂಡರಿಗೆ ನೀಡಲಾಗಿದೆ. ವರಿ ಲಿಸ್ಟ್ ತಯಾರು ಮಾಡಲಾಗಿದೆ.ಎಲ್ಲೆಲ್ಲಿ ಶಾಸಕರ ಕಚೇರಿ ಇದೆ, ಅಲ್ಲಿರೋ ಫೋಟೋಗಳನ್ನೂ ತೆಗೆಸಲು ಸೂಚಿಸಿದ್ದು, ಇಂದು ಸಂಜೆಯೊಳಗಾಗಿ ಅದನ್ನ ತೆಗೆಸಲಾಗುತ್ತದೆ.
ಅಭ್ಯರ್ಥಿ 28 ಲಕ್ಷ ಖರ್ಚು ಮಾಡೋ ಬಗ್ಗೆ ಸ್ಪಷ್ಟಪಡಿಸಿದ್ದು, ಅದರ ಬಗ್ಗೆ ಗಮನ ಇಡಲಾಗಿದೆ.ಪ್ರತೀ ಮನೆಗೂ ಓಟರ್ಸ್ ಲಿಸ್ಟ್ ಕೊಡುವ ಕೆಲಸ ಪಾಲಿಕೆಯದ್ದು, ಪಕ್ಷಗಳು ಕೊಡುವಂತಿಲ್ಲ ಅಂತ ಸೂಚಿಸಲಾಗಿದೆ.ಆರ್.ಆರ್ ನಗರ, ಯಶವಂತಪುರ, ಕೆ.ಆರ್ ಪುರ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚು ಒತ್ತನ್ನ ನೀಡಲಾಗುತ್ತಿದೆ.
ಮೂರು ಕ್ಷೇತ್ರಗಳಲ್ಲಿ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಆರೋಪವಿದೆ. ಗುರುವಾರ ಸಂಜೆಯೊಳಗಾಗಿ ಫ್ಲೆಕ್ಸ್ ತೆರವುಗೊಳಿಸಬೇಕು, ಇಲ್ಲದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.












Click it and Unblock the Notifications