ಅರ್ಚಕರಿಗೆ ಆರ್ಥಿಕ ಸಹಾಯ ಮಾಡಬೇಕು- ದಿನೇಶ್ ಗುಂಡೂರಾವ್ ಒತ್ತಾಯ
ಬೆಂಗಳೂರು, ಏಪ್ರಿಲ್ 18: ಲಾಕ್‌ಡೌನ್ ಸಮಯದಲ್ಲಿ ದೇವಸ್ಥಾನದ ಅರ್ಚಕರ ಸ್ಥಿತಿಯನ್ನು ಸಹ ಸರ್ಕಾರ ನೋಡಬೇಕು, ಅವರಿಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ, ಶಾಸಕ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಸಿ ದೇಗುಲಗಳು ಸುಮಾರು 35 ಸಾವಿರಕ್ಕೂ ಹೆಚ್ಚಿವೆ. ಇವುಗಳಲ್ಲಿ ಹೆಚ್ಚು ದೇವಾಲಯಗಳು ಗ್ರಾಮೀಣ ಪ್ರದೇಶದಲ್ಲಿವೆ. ಲಾಕ್‌ಡೌನ್‌ನಿಂದ ಇಂದು ಈ ಎಲ್ಲಾ ದೇಗುಲಗಳನ್ನು ಮುಚ್ಚಲಾಗಿದೆ. ಭಕ್ತರ ಭೇಟಿಯನ್ನು ನಿರ್ಭಂಧಿಸಲಾಗಿದೆ. ಹೀಗಿರುವಾಗ ಸರ್ಕಾರ ಅರ್ಚಕರಿಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಅವರು ಹೇಳಿದ್ದಾರೆ.

ದೇವಸ್ಥಾನಗಳಿಗೆ ಬೀಗ ಹಾಕಿರುವ ಕಾರಣ ಅರ್ಚಕರ ಕುಟುಂಬಕ್ಕೆ ತೊಂದರೆಯಾಗಿದೆ. ದೇವಸ್ಥಾನವನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದ, ಕುಟುಂಬಗಳು ಯಾವುದೇ ಆದಾಯವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಇಂತಹ ಕುಟುಂಬಗಳಿಗೆ ಸರ್ಕಾರದ ನೆರವು ಸಿಗಬೇಕು ಎಂದಿದ್ದಾರೆ.
My letter to @BSYBJP in lieu of the immense hardship being faced by the #priests of the nearly 35,000 ‘C’ category Muzarai temples in Karnataka.
— ದಿನೇಶ್ ಗುಂಡೂರಾವ್/ Dinesh Gundu Rao (@dineshgrao) April 18, 2020
No Pooja activities nor contributions from devotees have left them in penury.
I urge the govt to provide them some financial support. pic.twitter.com/Sdx1Se1HST
ಕೂಡಲೇ ಇಂತಹ ಅರ್ಚಕರ ಸ್ಥಿತಿಯತ್ತ ಸರ್ಕಾರ ಕಣ್ಣಾಯಿಸಿ, ಅವರಿಗೆ ಆರ್ಥಿಕ ಸಹಾಯ ಮಾಡಬೇಕು. ಸಹಾಯಧನ ನೀಡಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿ ಯಡಿಯೂರಪ್ಪಗೆ ಒತ್ತಾಯಿಸಿದ್ದಾರೆ.












Click it and Unblock the Notifications