ಬಿಎಂಟಿಸಿಯಿಂದ ಇನ್ನು ಪ್ರಯಾಣಿಕರಿಗೆ ಡಿಜಿಟಲ್ ಪಾಸ್
ಬೆಂಗಳೂರು, ಜುಲೈ. 22: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಡಿಜಿಟಲ್ ಆಗುತ್ತಿರುವುದು ಸಂತಸದ ತಂದಿದೆಯಲ್ಲದೇ, ಸಂಸ್ಥೆಯಿಂದ ಪ್ರಯಾಣಿಕರಿಗೆ ಒಳ್ಳೆಯ ಸುದ್ದಿಯನ್ನೂ ತಂದಿದೆ.
ಡಿಜಿಟಲ್ ಸಾರಿಗೆ ಆ್ಯಪ್ 'Tummoc' ಅನ್ನು ಪರಿಚಯಿಸುವುದರೊಂದಿಗೆ ಪ್ರಯಾಣಿಕರಿಗೆ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್‌ಗಳನ್ನು ವಿತರಿಸುತ್ತಿದೆ. ನಿಗಮವು ಜುಲೈ ತಿಂಗಳ 20 ದಿನಗಳಲ್ಲಿ 2.5 ಕೋಟಿ ಆದಾಯವನ್ನು ಗಳಿಸಿದೆ.
'Tummoc'ಭಾರತದ ಮೊದಲ ಬಹು-ಮಾದರಿ ಸಾರ್ವಜನಿಕ ಸಾರಿಗೆ ಅಪ್ಲಿಕೇಶನ್ ಆಗಿದೆ. ಇದು ಭಾರತದಲ್ಲಿ ಈಗಾಗಲೇ 9 ರಾಜ್ಯಗಳಲ್ಲಿ ಯಶಸ್ವಿಯಾಗಿ ಬಳಕೆಯಾಗುತ್ತಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಆಪ್ ಡೌನ್ ಲೋಡ್ ಮಾಡಿಕೊಂಡ ನಂತರ ನಿಮ್ಮ ಆಧಾರ್ ಅಥವಾ ಯಾವುದೇ ಐಡಿ ಕಾರ್ಡ್‌ಗಳನ್ನು ಬಳಸಿಕೊಂಡು ಪರೀಶಿಲನೆ ಮಾಡಿಕೊಳ್ಳುವುದು. ಬಳಿಕ ಅಗತ್ಯ ಮಾಹಿತಿಯನ್ನು ತುಂಬುವುದು, ನಂತರ ಹಣವನ್ನು ಆನ್‌ಲೈನ್ ಮೂಲಕ ಪಾವತಿ ಮಾಡುವುದು. ಕೊನೆಗೆ ದೈನಂದಿನ ಇಲ್ಲವೇ ಮಾಸಿಕ ಪಾಸ್ ಅನ್ನು ಖರೀದಿಸುವುದು.
ಬಸ್‌ನಲ್ಲಿ ಪ್ರಯಾಣಿಸುವಾಗ ಹತ್ತಿದ ಸ್ಥಳದಿಂದ ತಲುಪುವ ಸ್ಥಳದವರೆಗೆ ಆಯ್ಕೆ ಮಾಡಿ ಟಿಕೆಟ್ ಖರೀದಿಸಬಹುದು. ಬಸ್‌ನಲ್ಲಿ ನಿರ್ವಹಕರು ಕೇಳಿದಾಗ ತೋರಿಸಿ ಅವರು ಇಟಿಎ ಮೆಷಿನ್‌ನಿಂದ ಸ್ಕ್ಯಾನ್ ಮಾಡಲಾಗುತ್ತದೆ. ಬಳಿಕ ಪ್ರಯಾಣ ಮುಂದುವರಿಸಬಹುದು.

ವಜ್ರ ಮತ್ತು ವಾಯು ವಜ್ರದಲ್ಲೂ ಓಡಾಡಬಹುದು
ಈ ಹಿಂದೆ, ದೈನಂದಿನ ಪಾಸ್‌ಗಳನ್ನು ಕಂಡಕ್ಟರ್‌ಗಳಿಂದ ಮತ್ತು ಮಾಸಿಕ ಪಾಸ್‌ಗಳನ್ನು ನಿರ್ದಿಷ್ಟ ಬಸ್ ಡಿಪೋಗಳಿಂದ ನಿರ್ದಿಷ್ಟ ದಿನಾಂಕಗಳಲ್ಲಿ ಮಾತ್ರ ಖರೀದಿಸಬೇಕಾಗಿತ್ತು. ಬಿಎಂಟಿಸಿ ಗುರುತಿನ ಚೀಟಿ ಹೊಂದಿರುವವರು ಮಾತ್ರ ಮಾಸಿಕ ಪಾಸ್‌ಗಳನ್ನು ಪಡೆಯಬಹುದಾಗಿತ್ತು. ಆದರೆ ಜುಲೈನಿಂದ ಈ ನಿಯಮವನ್ನು ತೆಗೆದುಹಾಕಲಾಗಿದ್ದು, ಈ ಪಾಸ್‌ಗಳನ್ನು ಪಡೆಯಲು ಪ್ರಯಾಣಿಕರು ಈಗ ಯಾವುದೇ ರೀತಿಯ ಐಡಿ ಕಾರ್ಡ್‌ಗಳನ್ನು (ಆಧಾರ್, ವೋಟರ್ ಐಡಿ, ಡಿಲ್) ಬಳಸಬಹುದಾಗಿದೆ. ಈ ಅಪ್ಲಿಕೇಶನ್‌ನಲ್ಲಿಯೂ ಸಹ, ಒಬ್ಬರು ತಮ್ಮ ಐಡಿ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಿ ಪಾಸ್‌ಗಳನ್ನು ಪಡೆಯಬಹುದು. ವಜ್ರ ಮತ್ತು ವಾಯು ವಜ್ರ (ವೋಲ್ವೋ ಬಸ್‌ಗಳು) ಪಾಸ್‌ಗಳನ್ನು ಸಹ ಅಪ್ಲಿಕೇಶನ್‌ನಲ್ಲಿ ಖರೀದಿಸಬಹುದಾಗಿದೆ.

ದೈನಂದಿನ ಪಾಸ್ 70 ರು. ಮಾಸಿಕ ಪಾಸ್ 1500 ರು.
ನನ್ನ ಮಾಸಿಕ ಪಾಸ್ ಪಡೆಯಲು ಸರದಿಯಲ್ಲಿ ನಿಲ್ಲಲು ಸಮಯವಿಲ್ಲದ ಕಾರಣ ನಾನು ದೈನಂದಿನ ಪಾಸ್‌ಗಳಿಗಾಗಿ ಪ್ರತಿದಿನ 70 ರುಪಾಯಿ ಖರ್ಚು ಮಾಡುತ್ತಿದ್ದೆ. ಇದಕ್ಕಾಗಿ 200 ರು. ಅಥವಾ 500 ರುಪಾಯಿಯ ನೋಟು ಕೊಟ್ಟರೆ ಬಹುತೇಕ ಕಂಡಕ್ಟರ್‌ಗಳು ಸಿಟ್ಟಿಗೆಳುತ್ತಿದ್ದರು. ಹಾಗಾಗಿ ನಾನು ಯಾವಾಗಲೂ ಚಿಲ್ಲರೆ ಸಿದ್ಧ ಮಾಡಿಕೊಳ್ಳಬೇಕಿತ್ತು. ಈ ಆ್ಯಪ್ ಬಗ್ಗೆ ತಿಳಿಯುತ್ತಿದ್ದಂತೆ ಜುಲೈ 1ರಂದು 1,500 ರು. ಮಾಸಿಕ ಪಾಸ್ ಖರೀದಿಸಿದ್ದೇನೆ. ಈಗ ನನ್ನ ವ್ಯಾಲೆಟ್‌ನಲ್ಲಿ ಹಣವಿದೆಯೇ ಎಂಬ ಚಿಂತೆಯಿಲ್ಲದೆ ನಗರದ ಎಲ್ಲೆಡೆ, ಎಸಿ ಬಸ್‌ಗಳಲ್ಲಿಯೂ ಸಹ ಸಂತೋಷದಿಂದ ಪ್ರಯಾಣಿಸುತ್ತಿದ್ದೇನೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಕ್ಯಾಶ್‌ಬ್ಯಾಕ್ ಕೊಡುಗೆಗಳು ಇವೆ
ಮೇ ಮತ್ತು ಜೂನ್‌ನಲ್ಲಿ ನಾನು ಕೆಲವು ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಪೋಸ್ಟರ್‌ಗಳನ್ನು ಗಮನಿಸಿದ್ದೆ. ಆದರೆ ಈಗ ಎಲ್ಲಾ ಬಸ್ಸುಗಳು ಅವುಗಳನ್ನು ಹೊಂದಿವೆ ಎಂದು ತೋರುತ್ತದೆ. ನಾನು ವಾರದಲ್ಲಿ ಎರಡು ಅಥವಾ ಮೂರು ದಿನ ಬಸ್‌ಗಳಲ್ಲಿ ಓಡಾಡುತ್ತೇನೆ. ಮನೆಯಿಂದ ಹೊರಡುವ ಮೊದಲು ಬೆಳಿಗ್ಗೆ ಅಪ್ಲಿಕೇಶನ್‌ನಲ್ಲಿ ನನ್ನ ದೈನಂದಿನ ಪಾಸ್‌ಗಳನ್ನು ಖರೀದಿಸುತ್ತೇನೆ. ಅವರು ಇತ್ತೀಚೆಗೆ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಸಹ ಪ್ರಾರಂಭಿಸಿದ್ದಾರೆ ಎಂದು ಮತ್ತೊಬ್ಬ ಪ್ರಯಾಣಿಕರು ತಿಳಿಸಿದ್ದಾರೆ.

ಅಧಿಕಗೊಂಡ ಬಿಎಂಟಿಸಿ ಆದಾಯ
ಬಿಎಂಟಿಸಿ ಒಂದು ತಿಂಗಳಲ್ಲಿ ಸುಮಾರು 15 ಲಕ್ಷ ಪಾಸ್‌ಗಳನ್ನು ಮಾರಾಟ ಮಾಡುತ್ತದೆ. ಈ ಪೈಕಿ ಜುಲೈನಲ್ಲಿ 50,000 ಪಾಸ್‌ಗಳನ್ನು ಡಿಜಿಟಲ್ ಮೂಲಕ ಖರೀದಿಸಲಾಗಿದೆ. ಈ ಅಪ್ಲಿಕೇಶನ್‌ನಿಂದ ಬರುವ ಆದಾಯವು ಏಪ್ರಿಲ್ ಮತ್ತು ಜುಲೈ ನಡುವೆ ಹತ್ತು ಪಟ್ಟು ಹೆಚ್ಚಾಗಿದೆ. ಈಗ ಆದಾಯವು 21 ಲಕ್ಷದಿಂದ 2.5 ಕೋಟಿಗೆ ಏರಿದೆ ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ. ಈ ತಿಂಗಳಲ್ಲಿ ಕೇವಲ 20 ದಿನಗಳಲ್ಲಿ ಈ ಡಿಜಿಟಲ್ ಪಾಸ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿರುವುದನ್ನು ನೋಡಿದ್ದೇವೆ. ಈ ತಿಂಗಳು ಇದು ಇನ್ನೂ ಶೇ 10 ಕ್ಕಿಂತ ಹೆಚ್ಚು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.












Click it and Unblock the Notifications