• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆ ಭಗವಂತ ಬಂದರೂ ಬೆಂಗಳೂರು ಕಾಪಾಡುವುದು ಕಷ್ಟ!

|

ಬೆಂಗಳೂರು, ಜು. 17: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರು ಹೆಚ್ಚಾಗುತ್ತಿದ್ದರೆ, ಮತ್ತೊಂದಡೆ ಜವಾಬ್ದಾರಿ ಸ್ಥಾನದಲ್ಲಿದ್ದವರ ಹೇಳಿಕೆಗಳು ಜನರನ್ನು ಕಂಗೆಡಿಸುತ್ತಿವೆ.

ಈಗಾಗಲೇ ಸೋಂಕು ಸಮುದಾಯಕ್ಕೆ ಹರಡಿದೆ. ಸಮುದಾಯಕ್ಕೆ ಸೋಂಕು ಹರಡಿರುವುದು ಧೃಢ ಪಡುತ್ತಿರುವ ಸೋಂಕಿತರ ಸಂಖ್ಯೆಯಿಂದಲೇ ಬಹಿರಂಗವಾಗುತ್ತಿದೆ. ಇಷ್ಟು ದಿನ ಟ್ರಾವೆಲ್ ಹಿಸ್ಟರಿ ಮೂಲಕ ಚೈನ್ ಬ್ರೇಕ್ ಮಾಡಲು ಸರ್ಕಾರದ ಬಳಿ ಯೋಜನೆಯಿತ್ತು. ಆದರೆ ಇದೀಗ ಸಮುದಾಯಕ್ಕೆ ಹರಡುತ್ತಿರುವ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವುದು ಹೇಗೆ ಎಂಬ ಪೇಚಾಟದಲ್ಲಿ ರಾಜ್ಯ ಸರ್ಕಾರ ಸಿಲುಕಿದೆ. ಟ್ರಾವೆಲ್ ಹಿಸ್ಟರಿ ಇಲ್ಲ, ಮನೆಯಿಂದ ಹೊರಗೂ ಹೋಗದ ವೃದ್ಧರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದನ್ನು ತಡೆಯಲು ರಾಜ್ಯ ಸರ್ಕಾರದ ಬಳಿ ಸಧ್ಯಕ್ಕೆ ಯಾವುದೇ ಸಿದ್ಧ ಮಾದರಿ ಕಾಣುತ್ತಿಲ್ಲ. ಹೀಗಾಗಿ ಮತ್ತೆ ಬೆಂಗಳೂರಿನಲ್ಲಿ ಹಿಂದಿನ ಲಾಕ್‌ಡೌನ್ ಪ್ರಯೋಗ ಜಾರಿ ಮಾಡಿದೆ.

ಅರ್ಧ ಲಕ್ಷ ಸೋಂಕಿತರು

ಅರ್ಧ ಲಕ್ಷ ಸೋಂಕಿತರು

ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆರಂಭದಲ್ಲಿ ಸೋಂಕು ನಿಯಂತ್ರಣದಲ್ಲಿ ಮಾದರಿ ಎಂದು ಕೇಂದ್ರ ಬಿಜೆಪಿ ಸರ್ಕಾರ ರಾಜ್ಯ ಬಿಜೆಪಿ ಸರ್ಕಾರವನ್ನು ಹೊಗಳಿತ್ತು.

ಲಾಕ್ ಡೌನ್: ಬೆಂಗಳೂರಿಗರಿಗೆ ಕಾದಿದೆಯಾ ಶಾಕಿಂಗ್ ನ್ಯೂಸ್!?

ಬೆಂಗಳೂರು ಮಾದರಿ ಅನುಸರಿಸುವಂತೆಯೂ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಇತರ ರಾಜ್ಯಗಳಿಗೆ ಸಲಹೆ ಕೊಟ್ಟಿದ್ದರು. ಆದರೆ ಇದೀಗ ಕರ್ನಾಟಕದ ಪರಿಸ್ಥಿತಿ ತೀರಾ ಹದಗೆಟ್ಟಿದೆ.

3ನೇ ಸ್ಥಾನಕ್ಕೆ ಜಿಗಿದ ರಾಜ್ಯ

3ನೇ ಸ್ಥಾನಕ್ಕೆ ಜಿಗಿದ ರಾಜ್ಯ

ಜಾಗತಿಕ ಮಟ್ಟದಲ್ಲಿ ಭಾರತ 3ನೇ ಸ್ಥಾನಕ್ಕೆ ಜಿಗಿದಂತೆ ದೇಶದಲ್ಲಿ ಕರ್ನಾಟಕ ಕೂಡ 12 ನೇ ಸ್ಥಾನದಿಂದ ಮಹಾರಾಷ್ಟ್ರ, ತಮಿಳುನಾಡು ಬಳಿಕ 3ನೇ ಸ್ಥಾನಕ್ಕೆ ಜಿಗಿದಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅರ್ಧ ಲಕ್ಷ ಸಂಖ್ಯ ಮೀರಿದೆ. ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರು ರಾಜ್ಯದ ಜನರನ್ನು ದೇವರೇ ದಿಕ್ಕು ಎಂದಿದ್ದರು.

ಇದೀಗ ಮತ್ತೊಬ್ಬ ರಾಜಕೀಯ ನಾಯಕರು ಆ ಭಗವಂತ ಬಂದರೂ ಬೆಂಗಳೂರನ್ನು ಕೊರೊನಾವೈರಸ್‌ನಿಂದ ಕಾಪಾಡುವುದು ಕಷ್ಟ ಎಂದಿದ್ದಾರೆ.

ಭಗವಂತ ಬಂದರೂ

ಭಗವಂತ ಬಂದರೂ

ಮಾನ್ಯ ಮುಖ್ಯಮಂತ್ರಿಗಳೇ ಬೆಂಗಳೂರು ಲಾಕ್ ಡೌನ್ ಮಾಡಿದ್ದಿರಿ. ಆದರೆ ಈ ನೆಪ ಮಾತ್ರದ ಲಾಕ್ ಡೌನ್ ಇಂದ ಫಲಿತಾಂಶ ನಿರೀಕ್ಷೆ ಕಷ್ಟ. ತಜ್ಞರ ಅಭಿಪ್ರಾಯ ಪಡೆದು ಕನಿಷ್ಠ 15 ದಿನಗಳಾದರೂ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಮಾಡಿ.

ಬೆಂಗಳೂರಿನಲ್ಲಿ ಮತ್ತೊಂದು ವಾರ ಲಾಕ್‌ಡೌನ್ ಮುಂದುವರಿಕೆ?

ಇಲ್ಲವಾದರೆ ಆ "ಭಗವಂತ" ಬಂದರೂ ಬೆಂಗಳೂರನ್ನು ಕೋವಿಡ್-19ನಿಂದ ಕಾಪಾಡುವುದು ಕಷ್ಟವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಬದನೆಕಾಯಿ ಲಾಕ್‌ಡೌನ್

ಬದನೆಕಾಯಿ ಲಾಕ್‌ಡೌನ್

ಬೆಂಗಳೂರಿನಲ್ಲಿ ನೆಪಕ್ಕೆ ಲಾಕ್‌ಡೌನ್ ಜಾರಿಗೆ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ. ಲಾಕ್‌ಡೌನ್ ಅಂತೆ ಲಾಕ್‌ಡೌನ್ ಬದನೆಕಾಯಿ. ಸರ್ಕಾರ ಕಾಟಾಚಾರಕ್ಕೆ ಲಾಕ್ ಡೌನ್ ಮಾಡ್ತಾ ಇದೆ. ಲಾಕ್‌ಡೌನ್ ವಿಚಾರದಲ್ಲಿ ಗಂಭೀರತೆ ಕಾಣಿಸುತ್ತಿಲ್ಲ.

ಬೆಂಗಳೂರಿನಲ್ಲಿ ಕಟ್ಟು ನಿಟ್ಟಾಗಿ ಲಾಕ್‌ಡೌನ್ ಜಾರಿ ಮಾಡಲು ಸರ್ಕಾರ ವಿಫಲವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.

English summary
KPCC working president Ishwar Khandre tweeted that it would be difficult to protect Bengaluru people from Covid-19 if the strict lockdown is not implemented.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X