ಪವಿತ್ರಾ ಗೌಡಳ 'ಕೋಟಿ ಕಾರು' ಮುನಿಸು ಮರೆಸಲು ರೇಣುಕಾಸ್ವಾಮಿ ಕೊಲೆ ಮಾಡಿದ್ರಾ "ಡಿ" & ಟಿಂ.?
ಬೆಂಗಳೂರು, ಜುಲೈ, 07: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಪಟಾಲಂ ಗ್ಯಾಂಗ್ ಜೈಲು ಸೇರಿದೆ. ಇನ್ನೂ ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಕೋಟಿ ಕಾರಿನ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ನಡುವೆಯೇ ಇದೀಗ ಈ ಪ್ರಕರಣದಕ್ಕೆ ಮತ್ತೊಂದ ಟ್ವಿಸ್ಟ್ ಸಿಕ್ಕಿದೆ. ಹಾಗಾದರೆ ಆ ಸ್ಫೋಟಕ ಮಾಹಿತಿ ಏನು ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕಿಡ್ನಾಪ್ ಮತ್ತು ಕೊಲೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಲಭ್ಯವಾಗುತ್ತಿದ್ದು, ಇದೀಗ ಆಪ್ತೆ ಪವಿತ್ರಾ ಗೌಡ ಅವರ ಮುನಿಸು ಶಮನ ಮಾಡಲು ರೇಣುಕಾಸ್ವಾಮಿ ಕೊಲೆ ನಡೆಯಿತಾ ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯ ಆಗಿದೆ. ಸಣ್ಣ ವಿಚಾರವೊಂದಕ್ಕೆ ನಟ ದರ್ಶನ್ ಜೊತೆ ಆರೋಪಿ ಪವಿತ್ರಾ ಗೌಡ ಇತ್ತೀಚೆಗೆ ಮುನಿಸಿಕೊಂಡಿದ್ದರಂತೆ. ಕೋಟಿ ರೂಪಾಯಿ ಮೌಲ್ಯದ ಕಾರು ಕೊಡಿಸುವ ವಿಚಾರಕ್ಕೆ ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಮನಸ್ತಾಪವಾಗಿದ್ದ ವಿಚಾರವೊಂದು ಇದೀಗ ಬಲಯಾಗಿದೆ ಮೂಲಗಳಿಂದ ತಿಳಿದುಬಂದಿದೆ.
ಇತ್ತೀಚೆಗಷ್ಟೇ ನಟ ದರ್ಶನ್ ಪತ್ನಿ ವಿಯಜಲಕ್ಷ್ಮಿ ಅವರಿಗೆ ದುಬಾರಿ ಕಾರನ್ನು ರೇಂಜ್ ರೋವರ್ ಅನ್ನು ಕೊಡಿಸಿದ್ದು, ಈ ಹೊಸ ಕಾರಿನ ಫೋಟೋಗಳನ್ನು ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಪವಿತ್ರಾ ಗೌಡ ಕೂಡ ನನಗೂ ಇದೇ ಕಾರು ಬೇಕು ಎಂದು ಹಠ ಹಿಡಿದಿದ್ದು, ಕೊನೆಗೂ ಈ ಮಹಾದಾಸೆಯನ್ನು ದರ್ಶನ್ ಈಡೇರಿಸಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿತ್ತು.
ಅಷ್ಟೇ ಅಲ್ಲದೆ, ಬಳಿಕ ಪವಿತ್ರಾ ಗೌಡ ಕೋಟಿ ಬೆಲೆಯ ಕಾರು ಕೊಡಿಸುವಂತೆ ದರ್ಶನ್ ಬಳಿ ಬೇಡಿಕೆ ಇಟ್ಟಿದ್ದಳಂತೆ. ನಟ ದರ್ಶನ್ ದುಬೈ ಟ್ರಿಪ್ ಮುಗಿಸುಕೊಂಡು ಬರುತ್ತಿದ್ದಂತೆ ಪವಿತ್ರಾ ಗೌಡ ಕೋಟಿ ಬೆಲೆ ಕಾರು ಕೊಡಿಸುವಂತೆ ಬೇಡಿಕೆಯಿಟ್ಟಿದ್ದರಂತೆ. ಆದರೆ ಈ ವೇಳೆ ದರ್ಶನ್ ಆ ಕಾರು ಕೊಡಿಸುವುದಕ್ಕೆ ನಿರಾಕರಿಸಿದ್ದರಂತೆ. ಸದ್ಯ ಇಷ್ಟೊಂದು ಹಣ ಇಲ್ಲ ಎಂದು ಕಾರಣ ನೀಡಿ ಪವಿತ್ರಾ ಗೌಡಗೆ ಆ ಕಾರು ಕೋಡಿಸುವುದಕ್ಕೆ ಹಿಂದೇಟು ಹಾಕಿದ್ದರಂತೆ.
ಆದ್ದರಿಂದ ಕೋಟಿ ರೂಪಾಯಿ ಕಾರು ಕೊಡಿಸಲಿಲ್ಲ ಎನ್ನುವ ಕಾರಣದಿಂದಲೇ ಪವಿತ್ರಾ ಗೌಡ ದರ್ಶನ್ ಜೊತೆ ಒಂದು ತಿಂಗಳು ಕಾಲ ಮಾತು ಬಿಟ್ಟು ಮುನಿಸಿಕೊಂಡಿದ್ದಂತೆ. ಈ ನಡುವೆಯೇ ರೇಣುಕಾಸ್ವಾಮಿ-ಪವಿತ್ರಾ ಗೌಡ ನಡುವೆ ಸಂದೇಶದ ವಾರ್ ಆಗಿರುತ್ತದೆ. ನಂತರ ಈ ಸಮಸ್ಯೆಯನ್ನು ಸರಿಪಡಿಸಿದರೆ ನಾವಿಬ್ಬರು ಮತ್ತೆ ಹತ್ತಿರ ಆಗಬಹುದೆಂದು ನಂಬಿ ಕಿಡ್ನಾಪ್ ಸಾಹಸಕ್ಕೆ ಕೈಹಾಕಿ ಕೊನೆಗೆ ಕೊಲೆ ಮಾಡುವ ಹಂತದವರೆಗೂ ಇಳಿದು ನಟ ದರ್ಶನ್ ತಗ್ಲಾಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.











Click it and Unblock the Notifications