ಧರ್ಮಸ್ಥಳ ಬುರಡೆ ಕೇಸ್ ರಾಜ್ಯ ಸರ್ಕಾರವನ್ನೇ ಅಲುಗಾಡಿಸಬಹುದು: ಸಿಎಂಗೆ ವಿಜಯೇಂದ್ರ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 11: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ನಡೆಸುತ್ತಿರುವ ಉತ್ಖನನ ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಸ್ವತಃ ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ. ತಮ್ಮ ಸರ್ಕಾರದ ವಿರುದ್ಧ ತಮ್ಮದೇ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಧಾರ್ಮಿಕ ನಂಬಿಕೆ ಗಳನ್ನು ಕೆಡಿಸುತ್ತಿರುವ ಬುರುಡೆ ಪ್ರಕರಣ ಎಂಬ ಬುರುಡೆ ಕಥೆಗಳು ನಿಮ್ಮ ಸರ್ಕಾರವನ್ನೇ ಅಲ್ಲಾಡಿಸಬಹುದು ಎಚ್ಚರದಿಂದಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ನಡೆದುಕೊಂಡ ರೀತಿ, ಇತ್ತೀಚಿನ ಬೆಳವಣಿಗೆ ಹಾಗೂ ಹಿಂದೂ ಧಾರ್ಮಿಕ ನಂಬಿಕೆ ಕುರಿತು ಪ್ರತಿಕ್ರಿಯಿಸಿರುವ ಬಿ.ವೈ ವಿಜಯೇಂದ್ರ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಹಾಗೂ ಧಾರ್ಮಿಕ ನಂಬಿಕೆ ಕೆಡಿಸಲು ನಡೆಯುತ್ತಿರುವ ಹುನ್ನಾರಗಳ ಕುರಿತು ತಮ್ಮದೇ ಸರ್ಕಾರದ ವಿರುದ್ಧ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಬಾಹ್ಯ ಶಕ್ತಿಗಳ ಒತ್ತಡಕ್ಕೆ ಮಣಿದು ಎಸ್‌ಐಟಿ ತನಿಖೆಗೆ ಆದೇಶಿಸಿದ್ದು ಎಂಬುದು ಲೋಕಸತ್ಯ ಎಂದು ದೂರಿದರು.

ಮಾಜಿ ಕೆಪಿಸಿಸಿ ಅಧ್ಯಕ್ಷರು, ಮಾಜಿ ಕೇಂದ್ರ ಸಚಿವರು, ಹಿರಿಯ ಕಾಂಗ್ರೆಸ್ ನಾಯಕರಾದ ಜನಾರ್ಧನ ಪೂಜಾರಿ ಅವರು ಸರ್ಕಾರದ ನಡವಳಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ ಎಂದು ಗುಡುಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರು ಕೂಡಾ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಹಿಂದೂ ಧಾರ್ಮಿಕ ನಂಬಿಕೆಗಳನ್ನು ಕೆಡಿಸುತ್ತಿರುವ ಬುರುಡೆ ಪ್ರಕರಣ ಎಂಬ ಬುರುಡೆ ಕಥೆಗಳು ನಿಮ್ಮ ಸರ್ಕಾರವನ್ನೇ ಅಲ್ಲಾಡಿಸಬಹುದು, ಎಚ್ಚರಿಕೆ! ಎಂದು ವಿಜಯೇಂದ್ರ ಅವರು ನೆನಪಿಸಿದ್ದಾರೆ.
ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ಸವಾಲು
ಭಾನುವಾರ ಧರ್ಮಸ್ಥಳದಲ್ಲಿ ಅಸ್ತಿಪಂಜರ ಹುಡುಕುವ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ. ನಾಳೆಯಿಂದ ಮತ್ತೆ ಅಸ್ತಿಪಂಜರ ಹುಡುಕಾಟಕ್ಕಾಗಿ ರಾಜ್ಯ ಸರ್ಕಾರ ಎಸ್‌ಐಟಿಗೆ ಅನುಮತಿ ನೀಡಿರುವ ನಡೆಯನ್ನು ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ್ ಪೂಜಾರಿ ಅವರು ಪ್ರಶ್ನೆ ಮಾಡಿದ್ದಾರೆ. ಧರ್ಮಸ್ಥಳಕ್ಕೆ ಅವಹೇಳನ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳಾದ ನೀವು ಏನು ಮಾಡುತ್ತಿದ್ದೀರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಅನಾಮಿಕ ಒಬ್ಬ ನೀಡಿದ ದೂರನ್ನು ಸರ್ಕಾರ ಇಷ್ಟೊಂದು ಗಂಭೀರವಾಗಿ ಪರಿಗಣಿಸಿದೆ. ಎಸ್ಐಟಿಗೆ ತನಿಖೆಗೆ ಕೊಟ್ಟಿದೆ. ಧಾರ್ಮಿಕ ಭಾವನೆ ಇರುವ ಹಿಂದೂಗಳ ಪವಿತ್ರ ಸ್ಥಳದಲ್ಲಿ ಎಲ್ಲೆಂದರಲ್ಲಿ ಭೂಮಿ ಅಗೆಯುತ್ತಿದ್ದಾರೆ. ಧರ್ಮಸ್ಥಳ ಹಾಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಯಮನಿಂದಲೂ ಅಸಾಧ್ಯ. ನಾನು ಕದ್ರೊಳಿ ದೇವರ ಭಕ್ತ ಮಾತ್ರವಲ್ಲ, ಧರ್ಮಸ್ಥಳದ ಭಕ್ತನು ಹೌದು. ಯಾವುದೇ ಕಾರ್ಯರಣಕ್ಕೆ ಧರ್ಮಸ್ಥಳ ಹೆಸರು ಹಾಳಾಗಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಹೆಣ ಹೂತಿರುವುದು ಕೇವಲ ಧರ್ಮಸ್ಥಳದಲ್ಲಿ ಮಾತ್ರವೇ ಹೆಣ ಹೂಳಲಾಗಿದೆಯಾ, ಮಸೀದ, ಚರ್ಚ್‌ನಲ್ಲಿ ಹೂತಿಲ್ಲವೇ ಎಂದು ಖಾತವಾಗಿ ಕೇಳಿದ್ದಾರೆ.
ಈ ಮೂಲಕ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಧರ್ಮಸ್ಥಳಕ್ಕೆ ಕೇಡು ಬಗೆಯುವವರಿಗೆ ಸರ್ಕಾರ ಬೆಂಬಲ ನೀಡುತ್ತಿದೆ. ಸರ್ಕಾರ, ಸಿಎಂ ಸಿದ್ದರಾಮಯ್ಯ ನಡೆ ಸರಿಯಲ್ಲ ಎಂದು ಜನರ ದೂರಿದ್ದಾರೆ.












Click it and Unblock the Notifications