ಧರ್ಮರಾಯಸ್ವಾಮಿ ಕರಗ ಮಹೋತ್ಸವ: ಎಸ್‌ಜೆಪಿ ರಸ್ತೆಯಲ್ಲಿ ಸಂಚಾರ ನಿರ್ಬಂಧ
ಬೆಂಗಳೂರು, ಏ. 15: ವಿಶ್ವ ವಿಖ್ಯಾತ ಧರ್ಮರಾಯಸ್ವಾಮಿ ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆಯಿಂದ ಏ. 17 ರ ಬೆಳಗ್ಗೆ 8 ಗಂಟೆ ವರೆಗೂ ಜೆ.ಸಿ. ನಗರ ಸುತ್ತಮುತ್ತ ರಸ್ತೆಗಳ ಸಂಚಾರ ನಿರ್ಬಂಧಿಸಲಾಗಿದೆ.
ನಗರ್ತಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ಕರಗ ಮಹೋತ್ಸವಕ್ಕೆ ಗಣ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಏ. 16 ರಂದು ಸಂಜೆ 4 ಗಂಟೆಯಿಂದ ಏ. 17 ಬೆಳಗ್ಗೆ 8 ಗಂಟೆ ವರೆಗೂ ಸಂಚಾರ ಮಾರ್ಗ ಬದಲಿಸಲಾಗಿದೆ.
ಸಂಚಾರ ನಿಷೇಧ: ಎಸ್ ಜೆ ಪಿ ರಸ್ತೆಯಲ್ಲಿ ಸಿಟಿ ಮಾರ್ಕೆಟ್ ನಿಂದ ಎಸ್ಜೆಪಿ ಜಂಕ್ಷನ್ ನಲ್ಲಿ ಪಿಕೆ ಲೇನ್ ಮೂಲಕ ಒಟಿಸಿ ರಸ್ತೆ ಮಾರ್ಗವಾರಿ ಎನ್.ಆ ರ್ ರಸ್ತೆ, ಸುಣ್ಣಕಲ್ಲು ಹೋಗಲು ಎರಡು ತಿರುವು ಪಡೆಯುತ್ತಿದ್ದ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ: ಎಸ್‌ಜೆಪಿ ರಸ್ತೆಯಲ್ಲಿ ಸಿಟಿ ಮಾರ್ಕೆಟ್ ನಿಂದ ಬಂದು ಎಸ್ ಜೆಪಿ ಜಂಕ್ಷನ್ ನಲ್ಲಿ ಪಿಕೆ ಲೇನ್ ಮೂಲಕ ಒಟಿಸಿ ರಸ್ತೆ ಹೋಗಲು ಎರಡು ತಿರುವು ಪಡೆಯುತ್ತಿದ್ದ ವಾಹನಗಳು ನೇರವಾಗಿ ಟೌನ್ ಹಾಲ್ ವೃತ್ತದಲ್ಲಿ ಎಡ ತಿರುವು ಪಡೆದು ಮುಂದೆ ಸಾಗಲು ಅನುವು ಮಾಡಿಕೊಡಲಾಗಿದೆ.

ಪಾರ್ಕಿಂಗ್ ನಿಷೇಧ: ಪಿ.ಕೆ ಲೇನ್, ಒಟಿಸಿ ರಸ್ತೆ, ನಗರ್ತಪೇಟೆ, ಎಸ್.ಪಿ. ರಸ್ತೆ, ಎಸ್. ಪಿ ರಸ್ತೆ ಅಡ್ಡ ರಸ್ತೆಗಳು, ಸುಣ ಕಲ್ ಪೇಟೆ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ.
ಪಾರ್ಕಿಂಗ್ ಸ್ಥಳ: ಟೌನ್ ಹಾಲ್, ರವೀಂದ್ರ ಕಲಾ ಕ್ಷೇತ್ರ, ಮೈ ಶುಗರ್ ಬಿಲ್ಡಿಂಗ್, ಎನ್.ಆರ್. ರಸ್ತೆ ಎಡಭಾಗ, ಕುಂಬಾರ ಗುಂಡಿ ರಸ್ತೆ, ಜೆ.ಸಿ. ರಸ್ತೆ ಎಡ ಭಾಗ, ಎಸ್ ಜೆಪಿ ರಸ್ತೆ ವಾಹನ ನಿಗದಿತ ಸ್ಥಳದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಮೆರವಣಿಗೆ ನಡೆಸಲು ಹೈಕೋರ್ಟ್ ಬುಧವಾರ ಗ್ರೀನ್ ಸಿಗ್ನಲ್ ನೀಡಿದೆ. ಮೆರವಣಿಗೆ ವೇಳೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಪೊಲೀಸರಿಗೆ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿದೆ. ಸಾರ್ವಜನಿಕ ಸಭೆ, ಪ್ರತಿಭಟನೆ ಇತ್ಯಾದಿ ಚಟುವಟಿಕೆಗಳನ್ನು ನಿಯಂತ್ರಿಸುವ ಹಾಗೂ ಅನುಮತಿ ನೀಡುವ ಸಂಬಂಧ ರಾಜ್ಯ ಸರ್ಕಾರವು ಇ-ಗೆಜೆಟೆಡ್ ನಿಯಮಗಳನ್ನು ಸಲ್ಲಿಸಿದೆ. ಕರ್ನಾಟಕ ಪೊಲೀಸ್ ಕಾಯ್ದೆ-1963ರ ಸೆಕ್ಷನ್103 ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 188ರ ಅಡಿ ಈ ನಿಯಮಗಳನ್ನು ಜಾರಿ ಮಾಡುವ ಹೊಣೆ ಸಂಬಂಧಪಟ್ಟ ಪೊಲೀಸ್ ಇನ್ಸ್‌ಪೆಕ್ಟರ್ ಮೇಲಿದೆ.

ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಕಳೆದ ಎರಡು ವರ್ಷಗಳ ಕಾಲ ಸರಳವಾಗಿ ನಡೆದಿದ್ದ ಬೆಂಗಳೂರು ಕರಗ, ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಏಪ್ರಿಲ್ 8ರ ಶುಕ್ರವಾರದಿಂದ ಏಪ್ರಿಲ್ 18ರ ಸೋಮವಾರದ ತನಕ ಕರಗ ಮಹೋತ್ಸವದ ವಿವಿಧ ಕಾರ್ಯಕ್ರಮಗಳು ನಿಗದಿಯಾಗಿವೆ.
ಏಪ್ರಿಲ್16ರಂದು ಕರಗ ಉತ್ಸವದಂದು ಧರ್ಮರಾಯ ದೇಗುಲ ಪ್ರದಕ್ಷಿಣೆ ಹಾಕಲಿರುವ ತಾಯಿಯ ಕರಗ ಮೆರವಣಿಗೆ, ದೇಗುಲದ ರಸ್ತೆ ಮೂಲಕ ಕುಂಬಾರಪೇಟೆ ರಸ್ತೆ, ಆನಂತರ ರಾಜ ಮಾರ್ಕೆಟ್ ಸರ್ಕಲ್, ಅಲ್ಲಿಂದ ಸಿಟಿ ಮಾರ್ಕೆಟ್ ಸರ್ಕಲ್ ಕಡೆ ಮೆರವಣಿಗೆ ಸಾಗಲಿದೆ. 'ಬೆಂಗಳೂರು ಕರಗ ಬಹುಪ್ರಸಿದ್ಧ. ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ 'ಕರಗ' ಉತ್ಸವಗಳು ನಡೆಯುತ್ತವೆ. ಅನೇಕಲ್, ಹೊಸಕೋಟೆ, ಮಾಲೂರು, ಚಿಕ್ಕಬಳ್ಳಾಪುರ, ಕೈವಾರ, ವೇಮಗಲ್, ನರಸಾಪುರ-ಹೀಗೆ ಹಳ್ಳಿ ಪಟ್ಟಣಗಳಲ್ಲಿ 'ಕರಗ' ಹಬ್ಬ ಪ್ರತಿ ವರ್ಷದ ರೂಢಿ. ಸಾಮರಸ್ಯದ ಹಬ್ಬವೆಂದೇ ಹೆಸರಾದ ಕರಗ 'ಶಕ್ತ್ಯತ್ಸವ'ವೂ ಹೌದು.












Click it and Unblock the Notifications