Video: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್: ಗೃಹ ಸಚಿವರು ಫುಲ್ ಗರಂ, ವರದಿ ಕೇಳಿದ ಸಿಎಂ
ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಸರ್ಕಾರಿ ಕಚೇರಿಯಲ್ಲಿ ಮಹಿಳೆಯೊಬ್ಬರ ಜೊತೆಗೆ ಮುತ್ತಿಕ್ಕುವ ಹಸಿ ಬಿಸಿ ದೃಶ್ಯಗಳ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಹೊರ ಬರುತ್ತಿದ್ದಂತೆ ಕರ್ನಾಟಕ ಪೊಲೀಸ್ ಇಲಾಖೆ ಮನಾ ಹರಾಜಾಗಿದೆ. ಇಂಥಹ ಅಧಿಕಾರಿಗಳು ಇಲಾಖೆಗೆ ಕಪ್ಪು ಚುಕ್ಕೆ ಎಂದೆಲ್ಲ ಜನರು ಕಿಡಿ ಕಾರಿದ್ದಾರೆ. ಇತ್ತ ಗೃಹ ಸಚಿವರು ರಾವ್ ಮೇಲೆ ಗರಂ ಆಗಿದ್ದು, ಸಂಜೆಯೊಳಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ ಸಿದ್ದರಾಮಯ್ಯ ವರದಿ ಕೇಳಿದ್ದಾರೆ.
ಸದ್ಯ ಡಿಸಿಆರ್‌ಇ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಮಚಂದ್ರ ರಾವ್ ಅವರು ಕಚೇರಿಯಲ್ಲಿದ್ದಾಗ ಇಲಾಖೆ ಯೂನಿಫಾರ್ಮ್‌ನಲ್ಲಿಯೇ ಮಹಿಳೆಗೆ ಮುತ್ತಿಕ್ಕಿದ್ದಾರೆ. ಬೇರೆ ಬೇರೆ ವಿಡಿಯೋಗಳ ಇದ್ದು, ಸೂಟ್‌ನಲ್ಲಿ ಮಹಿಳೆ ಜೊತೆಗಿರುವ ವಿಡಿಯೋಗಳು ಹರಿದಾಡುತ್ತಿವೆ. ವಿಶೇಷ ಎಂದರೆ ಅಕ್ರಮ ಚಿನ್ನ ಕಳ್ಳಸಾಗಾಣೆ ಮಾಡಿದ್ದ ನಟಿ ರನ್ಯಾ ರಾವ್ ಇವರು ಮಗಳು. ರನ್ಯಾ ರಾವ್ ಪ್ರಕರಣ ಬೆಳಕಿಗೆ ಬರುವ ಮೊಲದೇ ನಡೆದಿದ್ದ ಡಿಜಿಎಪಿಯ ರಾಸಲೀಲೆಯ ವಿಡಿಯೋಗಳು ಇವೆ ಎಂದು ತಿಳಿದು ಬಂದಿದೆ.

ಕಚೇರಿಯಲ್ಲಿ ಪೊಲೀಸ್ ಯೂನಿಫಾರ್ಮ್‌ನಲ್ಲಿ ಕುಳಿತ ಡಿಜಿಪಿ ರಾಮಚಂದ್ರ ರಾವ್ ಅವರು ಮಹಿಳೆಗೆ ಮುತ್ತು ಕೊಡುವುದು, ಕೂತಲ್ಲಿಯೇ ಮಹಿಳೆ ತಪ್ಪಿಕೊಳ್ಳುವ ಹಸಿಬಿಸಿ ದೃಶ್ಯಗಳು ವಿಡಿಯೋದಲ್ಲಿವೆ. ಇದೀಗ ಈ ವಿಚಾರ ಬೆಳಕಿಗೆ ಬರುತ್ತಿದ್ದಾರೆ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಗರಂ ಆಗಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಅವರ ಕಚೇರಿಗೆ ಬಂದ ರಾಮಚಂದ್ರ ರಾವ್ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ.
ಇಂದೇ ರಾಮಚಂದ್ರ ರಾವ್ ತಲೆದಂಡ ಸಾಧ್ಯತೆ
ಸರ್ಕಾರಿ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ರಾಸಲೀಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರು ಕ್ರಮಕ್ಕೆ ಮುಂದಾಗಿದೆ. ವೈರಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಂತೆ ಗೃಹ ಇಲಾಖೆಯಿಂದ ವರದಿ ಕೇಳಿದ್ದಾರೆ. ವರದಿ ನೋಡಿಕೊಂಡು ಇಂದು ಸಂಜೆಯೊಳಗೆ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಮತ್ತೊಂದೆಡೆ ಇದು ನನ್ನ ವಿರುದ್ಧ ನಡೆದ ಷಡ್ಯಂತ್ರ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ರಾಮಚಂದ್ರ ರಾವ್ ಅವರು ಪ್ರಕರಣ ಸಂಬಂಧ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಇದೆಲ್ಲ ನೋಡಿದರೆ ಇಂದು ರಾಮಚಂದ್ರ ರಾವ್ ಅವರ ತಲೆದಂಡ ಆಗುವುದು ಗ್ಯಾರಂಟಿ ಎನ್ನಲಾಗಿದೆ.
ರಾಮಚಂದ್ರ ರಾವ್ ಫಸ್ಟ್ ರಿಯಾಕ್ಷನ್
ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಭೇಟಿಯಾಗಲು ಡಿಜಿಪಿ ರಾಮಚಂದ್ರ ರಾವ್ ಅವರು ಆಗಮಿಸಿದ್ದರು. ಈ ವೇಳೆ ಸಚಿವರು ನಿರಾಕರಿಸಿದ್ದಾರೆ. ಆಗ ಹೊರಗಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ರಾಮಚಂದ್ರ ರಾವ್ ಅವರು, ಇದು ಒಂದು ವರ್ಷದ ಹಿಂದಿನದ್ದು ಎಂಬಂತೆ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯಲ್ಲಿ ಸೇವೆಯಲ್ಲಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಬಳಿಕ ಇದೆಲ್ಲ ಷಡ್ಯಂತ್ರ. ಈ ವಿಡಿಯೋ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ನನ್ನ ಮರಿಯಾದೆ ಹಾಳಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆಯ ವಿಡಿಯೋ ಪ್ರಕರಣ ಸಾಕಷ್ಟು ಮುಜುಗರ ತಂದಿದೆ. ಈಗಾಗಲೇ ಡ್ರಗ್ಸ್ ಹಾಗೂ ಅಪರಾಧ ಕೃತ್ಯಗಳಲ್ಲಿ ಪೊಲೀಸರು ಕೈ ಜೋಡಿಸಿದ್ದರು ಎಂದು ಕೆಲವು ಅಧಿಕಾರಿಗಳು ಅಮಾನತ್ತಾಗಿದ್ದರು. ಇದೀಗ ಹಿರಿಯ ಅಧಿಕಾರಿ ಸರ್ಕಾರಿ ಕಚೇರಿಯಲ್ಲೇ ಈ ರೀತಿ ಮಾಡಿರುವುದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.












Click it and Unblock the Notifications