ಕರ್ನಾಟಕದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಬಗ್ಗೆ ವಿದೇಶದಲ್ಲೂ ಚರ್ಚೆ
Recommended Video

ಬೆಂಗಳೂರು, ಆಗಸ್ಟ್ 31: ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಸ್ಥಿರತೆ ಬಗೆಗೆ ವಿದೇಶದಲ್ಲೂ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಸ್ವತಃ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಬಹಿರಂಗಪಡಿಸಿದ್ದಾರೆ.
ಶುಕ್ರವಾರ ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಬ್ರಿಟಿಷ್ ಹೈಕಮಿಷನರ್ ಡೊನಾಲ್ಡ್ ಮೈಕ್ ಅಲಿಸ್ಟರ್ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಸ್ಥಿರತೆ ಕುರಿತಂತೆ ತಮ್ಮನ್ನು ಪ್ರಶ್ನಿಸಿದರು ಎಂದು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ ಜೆಡಿಎಸ್ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು ಐದು ವರ್ಷಗಳನ್ನು ಪೂರೈಸಲಿದೆ ಎನ್ನುವುದಾಗಿ ಬ್ರಿಟಿಷ್ ಹೈಕಮಿಷನರ್ ಗೆ ಭರವಸೆ ನೀಡಿದ್ದಾಗಿ ದೇವೇಗೌಡರು ಹೇಳಿದ್ದಾರೆ.

ಬ್ರಿಟಿಷ್ ಹೈಕಮಿಷನರ್ ತಮ್ಮನ್ನು ಭೇಟಿ ಮಾಡಿದರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು ಈ ವಿಷಯ ತಿಳಿಸಿದರು, ಅಷ್ಟೇ ಅಲ್ಲ ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರ ಯಾವುದೇ ತೊಂದರೆ ಇಲ್ಲದೆ ಐದು ವರ್ಷಗಳನ್ನು ಪೂರೈಸಲಿದೆ ಸಿದ್ದರಾಮಯ್ಯ ಅವರ ಜತೆಗೆ ಕುಮಾರಸ್ವಾಮಿಯವರಿಗೆ ಯಾವುದೇ ರೀತಿಯ ಮನಸ್ಥಾಪ ಇಲ್ಲ. ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದೆ.
ದೇಶಪಾಂಡೆ ಕೂಡಾ ಸಿಎಂ ಅಭ್ಯರ್ಥಿ ಎನ್ನುವುದು ಹಳೆಯ ವಿಚಾರ, ಧರ್ಮಸಿಂಗ್ ಸಿಎಂ ಆಗಿದ್ದಾಗಲೇ ಇಂತಹ ಒಂದು ಪ್ರಸ್ತಾಪ ಬಂದಿತ್ತು, ಕುಮಾರಸ್ವಾಮಿ ಹೇಳಿದ್ದು ದೇಶಪಾಂಡೆಯವರಿಗೂ ಅರ್ಹತೆ ಇದೆ ಎಂದು ಅಷ್ಟೇ ಅದರಲ್ಲಿ ಅಂತಹ ವಿಶೇಷವೇನೂ ಇಲ್ಲ ಎಂದರು.
ಆ ಸಭೆಯಲ್ಲಿ ಎಲ್ಲಾ ವಿಚಾರಗಳು ಚರ್ಚೆಯಾಗಲಿವೆ ಎಲ್ಲವೂ ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಆಂಧ್ರಪ್ರದೇಶದ ವಿಜಯವಾಡಕ್ಕೆ ತೆರಳಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಣ್ಣು ನೋಡಲು ಹೋಗಿದ್ದಾರೆ, ಹೆಣ್ಣು ಒಪ್ಪಿಗೆಯಾದರೆ ಮದುವೆ ಮಾಡುತ್ತೇವೆ ಇದೊಂದು ಖಾಸಗಿ ವಿಚಾರ ಎಂದು ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸಲಿಲ್ಲ.











Click it and Unblock the Notifications