ಹೆಚ್ಚು ಕಾಲ ನಾಲಿಗೆಯಿಂದ ಮೂಗು ಮುಟ್ಟಿ ದಾಖಲೆ ಬರೆದ ಬೆಂಗಳೂರು ಬಾಲಕಿ
ಬೆಂಗಳೂರು ಜನವರಿ 14: ಬೆಂಗಳೂರು ನಗರದ ಶಾಲೆಯೊಂದರ 14 ವರ್ಷದ ಬಾಲಕಿಯೊಬ್ಬಳು ತನ್ನ ನಾಲಿಗೆಯಿಂದ ಮೂಗನ್ನು ಹೆಚ್ಚು ಹೊತ್ತು ಮುಟ್ಟಿ ಏಷ್ಯನ್ ದಾಖಲೆ ನಿರ್ಮಿಸಿದ್ದಾಳೆ. ದೇವಶ್ರೀ ಅಮರ ತೋಕಲೆ ಅವರು 22 ನಿಮಿಷಗಳ ಸಾಧನೆ ಮಾಡುವ ಮೂಲಕ ಏಷ್ಯಾದ ಇಂಟರ್‌ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಗುರುತಿಸಿಕೊಂಡಿದ್ದಾರೆ.
ಒಂಬತ್ತನೇ ವಯಸ್ಸಿನಲ್ಲಿ ಬಾಲ್ಯದ ಮೋಜಿಗಾಗಿ ಪ್ರಾರಂಭವಾದ ಈ ಆಟ ಸದ್ಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯವಾಗಿ ದೇವಶ್ರೀ ಬಹು ಪುರಸ್ಕಾರಗಳನ್ನು ಗೆಲ್ಲುವಂತೆ ಮಾಡಿದೆ. ಅವರು 8 ನಿಮಿಷಗಳ ಕಾಲ ನಾಲಿಗೆಯಿಂದ ಮೂಗನ್ನು ಮುಟ್ಟುವ ಮೂಲಕ ಭಾರತದಲ್ಲಿ ದಾಖಲೆ ಬರೆದಿದ್ದಾರೆ. ಬಾಲಕಿಯ ಈ ಸಾಧನೆಯನ್ನು ಯೂನಿಕ್ ವರ್ಲ್ಡ್ ರೆಕಾರ್ಡ್ಸ್, ಗ್ಲೋಬಲಿ ಯುನಿಕ್, ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಆಕೆಗೆ 'ಗ್ರ್ಯಾಂಡ್ ಮಾಸ್ಟರ್' ಪ್ರಮಾಣೀಕರಣವನ್ನು ನೀಡಿದೆ ಮತ್ತು ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆ ಹೊಂದಿರುವ ಬಾಲಕಿ ಎಂಬ ಹೆಗ್ಗಳಿಕೆಯನ್ನು ಸಹ ದೇವಶ್ರೀ ಅವರು ಪಡೆದಿದ್ದಾರೆ.

ಏಷ್ಯನ್ ದಾಖಲೆ ನಿರ್ಮಿಸಿದ ಬಾಲಕಿ
ಚಿಕ್ಕವಯಸ್ಸಿನಲ್ಲಿ ತಮ್ಮ ನಾಲಿಗೆಯಿಂದ ಮೂಗನ್ನು ಸ್ಪರ್ಶಿಸುವುದನ್ನು ದೇವಶ್ರೀ ಪೋಷಕರು ಗಮನಿಸಿದ್ದರು. ಈ ಬಗ್ಗೆ ಮಾತನಾಡಿದ ದೇವಶ್ರೀ ತಂದೆ ಮತ್ತು ಏರ್ ವರ್ಕ್ಸ್ ಇಂಡಿಯಾದ ಕ್ಯಾಬಿನ್ ಇಂಟೀರಿಯರ್ ಜಿಎಂ ಅಮರ್ ಬಾಜಿರಾವ್ ಥೋಕಲೆ ಅವರು, "2021 ರಲ್ಲಿ ಕ್ರಿಸ್ಮಸ್ ಸಮಯದಲ್ಲಿ ನಾವು ಮಾಲ್‌ಗೆ ಹೋಗಿದ್ದೆವು. ಅಲ್ಲಿ ನಾವು ಪುಸ್ತಕವೊಂದರಲ್ಲಿ ನೆದರ್‌ಲ್ಯಾಂಡ್‌ನ ವ್ಯಕ್ತಿಯೊಬ್ಬರು ತಮ್ಮ ನಾಲಿಗೆಯಿಂದ 14 ನಿಮಿಷ ಮೂಗು ಮುಟ್ಟಿದ್ದಕ್ಕಾಗಿ ದಾಖಲೆಯನ್ನು ಹೊಂದಿದ್ದಾರೆ ಎಂದು ನಾವು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಿಂದ ಓದಿದ್ದೇವೆ. ಬಳಿಕ ನಾವು ಇದನ್ನು ಮಾಡಲು ಸಾಧ್ಯವೇ ಎಂದು ದೇವಶ್ರೀಗೆ ಕೇಳಿದೆವು. ಆಗ ದೇವಶ್ರೀ ಇದನ್ನು ಸುಲಭವಾಗಿ ಮಾಡಬಹುದು ಎಂದು ಹೇಳಿದಳು" ಎಂದು ಹೇಳಿದರು.

ಹೆಚ್ಚು ಕಾಲ ನಾಲಿಗೆಯಿಂದ ಮೂಗು ಮುಟ್ಟುವುದು ಅಭ್ಯಾಸ
"ನನ್ನ ನಾಲಿಗೆಯಿಂದ ನನ್ನ ಮೂಗನ್ನು ಅನಾಯಾಸವಾಗಿ ಸ್ಪರ್ಶಿಸಲು ನನಗೆ ಸಾಧ್ಯವಾಗುತ್ತದೆ. ಆದರೆ ಹೆಚ್ಚು ಸಮಯ ಅದನ್ನು ಹಿಡಿದಿಡಲು ಅಗತ್ಯವಾದ ಅಭ್ಯಾಸವನ್ನು ಮಾಡಿದೆ. ಒಂದು ತಿಂಗಳು ನಾನು ಮನೆಯಲ್ಲಿ ಅಭ್ಯಾಸ ಮಾಡಿದೆ ಮತ್ತು ಕೆಲವೊಮ್ಮೆ ನಾಲಿಗೆ ನೋವಾಯಿತು. ಆದರೆ ನನ್ನ ಪ್ರಯತ್ನವನ್ನು ನಾನು ಬಿಡಲಿಲ್ಲ. ನಾನು ನನ್ನ ಹೊಸ ಸಾಧನೆಯನ್ನು ನನ್ನ ಸ್ನೇಹಿತರಿಗೆ ತೋರಿಸಿದೆ. ಅವರೆಲ್ಲ ಮೆಚ್ಚಿಕೊಂಡರು" ಎಂದು ಎಲೆಕ್ಟ್ರಾನಿಕ್ಸ್ ಸಿಟಿಯ ಟ್ರಯಂಫ್ ವರ್ಲ್ಡ್ ಸ್ಕೂಲ್‌ನ 9 ನೇ ತರಗತಿ ವಿದ್ಯಾರ್ಥಿನಿ ದೇವಶ್ರೀ ಹೇಳಿದರು.
"ನಾವು ನಮ್ಮ ಮಗಳನ್ನು ಪ್ರೋತ್ಸಾಹಿಸಿದ್ದೇವೆ ಮತ್ತು ಅವಳು ಅದನ್ನು ಸಾಧಿಸುವ ವಿಶ್ವಾಸ ಹೊಂದಿದ್ದಳು" ಎಂದು ಗೃಹಿಣಿಯಾದ ಆಕೆಯ ತಾಯಿ ತೃಪ್ತಿ ಅಮರ್ ತೋಕಳೆ ಹೇಳಿದ್ದಾರೆ.
ಮಗಳ ಸಾಧನೆ ಸೆರೆ
ಜನವರಿ 2022 ರಲ್ಲಿ ಅಮರ್ ತಮ್ಮ ಮಗಳ ಈ ಸಾಧನೆಯನ್ನು ಸೆರೆ ಹಿಡಿಯಲು ಬಯಸಿದ್ದರು. "ನಾನು ತಕ್ಷಣ ಕ್ಯಾಮರಾಪರ್ಸನ್ ಅನ್ನು ನೇಮಿಸಿಕೊಂಡೆ ಮತ್ತು ಆಕೆಯ ನಾಲಿಗೆಯನ್ನು ಅವಳ ಮೂಗಿಗೆ ಸ್ಪರ್ಶಿಸುವ ವಿಡಿಯೊವನ್ನು ಚಿತ್ರೀಕರಿಸಿದೆ" ಎಂದು ಅಮರ್ ಹೇಳಿದರು. ಈ ದಾಖಲೆಯನ್ನು 22 ನಿಮಿಷಗಳಲ್ಲಿ ಸಾಧಿಸಲಾಯಿತು.

ಗಿನ್ನಿಸ್ ಪಡೆಯಲು ಹಿನ್ನಡೆ
ಅದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಸಮಯವಾಗಿತ್ತು. ಆದರೆ ನಾನು ಅರ್ಜಿ ಸಲ್ಲಿಸುವಾಗ ಕೋವಿಡ್ -19ನಿಂದಾಗಿ ಅಮರ್ ಅವರಿಗೆ ಕಟ್ಟುನಿಟ್ಟಾದ ಪ್ರೋಟೋಕಾಲ್ ನಿಂದ ಹಿನ್ನಡೆಯಾಯಿತು. ಅವರು ಅರ್ಜಿ ಸಲ್ಲಿಸುವ ಹೊತ್ತಿಗೆ ಯುಕೆಯ ಇನ್ನೊಬ್ಬ ವ್ಯಕ್ತಿ 50 ನಿಮಿಷಗಳ ದಾಖಲೆಯನ್ನು ಸ್ಥಾಪಿಸಿದ್ದರು.
"15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಒಂದು ಗಂಟೆ ಮೀರಿ ಹೋಗಬಾರದು ಎಂಬ ಮಾನದಂಡ ಇತ್ತು. ಏಕೆಂದರೆ ಇದು ವಿರೂಪಗಳಿಗೆ ಕಾರಣವಾಗಬಹುದು ಎಂಬ ಭಯವಿತ್ತು. ಹೀಗಾಗಿ ನಾನು ಇದನ್ನು ರದ್ದುಗೊಳಿಸಿದೆ. ಆದರೆ 18 ವರ್ಷ ತುಂಬುವವರೆಗೆ ಕಾಯುತ್ತೇನೆ ಮತ್ತು ಮತ್ತೆ ಪ್ರಯತ್ನಿಸುತ್ತೇನೆ" ಎಂದು ಅಮರ್ ಹೇಳಿದರು.












Click it and Unblock the Notifications