ಸೆಪ್ಟೆಂಬರ್ 'ತಿಂಗಳ ಪುಸ್ತಕ' ಚರ್ಚೆಗೆ 'ದೇವರು ಕಚ್ಚಿದ ಸೇಬು'
ಬೆಂಗಳೂರು, ಸೆಪ್ಟೆಂಬರ್ 19: 'ಈ ಹೊತ್ತಿಗೆ' ತಿಂಗಳ ಪುಸ್ತಕ ಓದು, ಚರ್ಚೆಗೆ ದಯಾನಂದ ಅವರ 'ದೇವರು ಕಚ್ಚಿದ ಸೇಬು' ಪುಸ್ತಕದ ಚರ್ಚೆ ನಡೆಯಲಿದೆ.
ಸೆಪ್ಟೆಂಬರ್ 22 ರ ಭಾನುವಾರದಂದು ಪುಸ್ತಕ ಚರ್ಚೆ ಮತ್ತು ಓದು ಕಾರ್ಯಕ್ರಮ ನಡೆಯಲಿದ್ದು, ಪುಸ್ತಕದ ಲೇಖಕರಾದ ದಯಾನಂದ, ಯುವ ಕವಿ ಸಂದೀಪ್ ಈಶಾನ್ಯ ಅವರು ಇರಲಿದ್ದಾರೆ.
ಕಾರ್ಯಕ್ರಮವು ಜಯನಗರ 4ನೇ 'ಟಿ' ಬ್ಲಾಕ್ ನ ಸಿರಿ ಸಂಪಿಗೆ ಕಲಾಕ್ಷೇತ್ರದಲ್ಲಿ ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ.

ದಯಾನಂದ ಅವರು ಕತಾ ಸಂಕಲನವಾದ 'ದೇವರು ಕಚ್ಚಿದ ಸೇಬು' ಛಂದ ಪುಸ್ತಕ ಬಹುಮಾನ ಪಡೆದು 2017 ರಲ್ಲಿ ಪ್ರಕಟವಾಗಿದೆ. ಆಧುನಿಕ ಬದುಕಿನ ಅನೇಕ ಮಜಲುಗಳನ್ನು ಪ್ರಯತ್ನ ಇವರ ಕತೆಗಳಲ್ಲಿ ಕಾಣಸಿಗುತ್ತದೆ.












Click it and Unblock the Notifications