ಮಳೆಗಾಲ ಪ್ರಾರಂಭವಾದಂತೆ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳ!
ಬೆಂಗಳೂರು, ಜುಲೈ 6: ಮಳೆಗಾಲ ಆರಂಭವಾದಂತೆ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳು ಏಪ್ರಿಲ್-ಮೇ ತಿಂಗಳಲ್ಲಿ ದಿನಕ್ಕೆ 20 ಕ್ಕಿಂತ ಕಡಿಮೆ ಡೆಂಗ್ಯೂ ಪ್ರಕರಣಗಳು ಕಂಡು ಬಂದರೆ ಈಗ ದಿನಕ್ಕೆ ಸುಮಾರು 100ಕ್ಕೆ ಏರಿದೆ ಎಂದು ಅಂಕಿಅಂಶಗಳು ತಿಳಿಸಿವೆ.
ಬೆಂಗಳೂರು ನಗರದಲ್ಲಿನ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳಿಂದ ರೋಗಿಗಳ ಡೇಟಾವನ್ನು ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್‌ಫಾರ್ಮ್ (IHIP) ಪೋರ್ಟಲ್‌ನಲ್ಲಿ ನಮೂದಿಸಲಾಗಿದೆ. ಡೆಂಗ್ಯೂ ಪ್ರಕರಣವು ಮೇ- ಅಂತ್ಯಕ್ಕೆ ಸಂಖ್ಯೆಗಳು ಕ್ರಮೇಣ ಹೆಚ್ಚಾಗಲು ಪ್ರಾರಂಭಿಸಿದವು. ಕ್ರಮೇಣ ಜೂನ್‌ನಿಂದ ಸ್ಥಿರವಾಗಿ ಹೆಚ್ಚಾಗುತ್ತಾ ಬಂದಿದೆ ಎಂದು ಡಿಎಚ್ ವರದಿ ಮಾಡಿದೆ.

ಈಗ ಮಳೆಗಾಲವಾಗಿರುವುದರಿಂದ ನಗರದಲ್ಲಿ ಮತ್ತಷ್ಟು ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ನಿರೀಕ್ಷೆ ಮಾಡಿದ್ದಾರೆ. ನಗರದಲ್ಲಿನ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳಿಂದ ರೋಗಿಗಳ ಅಂಕಿ ಅಂಶವನ್ನು ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್‌ಫಾರ್ಮ್ ಪೋರ್ಟಲ್‌ನಲ್ಲಿ ನಮೂದಿಸಲಾಗಿದೆ.
ನಗರದಲ್ಲಿ ಗಂಭೀರ ಪ್ರಕರಣಗಳು ಕಡಿಮೆ ಇದ್ದರೂ ದಾಖಲಾತಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸ್ಪರ್ಶ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ.ಜಾನ್ ಪಾಲ್ ಮಾತನಾಡಿ, ಆಸ್ಪತ್ರೆಯಲ್ಲಿ ಡೆಂಗ್ಯೂಗೆ ದಾಖಲಾಗುವವರ ಸಂಖ್ಯೆ ಏಪ್ರಿಲ್-ಮೇಗೆ ಹೋಲಿಸಿದರೆ ಈಗ 10 ರಿಂದ 20 ರಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸೇಂಟ್ ಜಾನ್ಸ್ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಪೂರ್ಣಿಮಾ ಆರ್ ಎನ್ ಮಾತನಾಡಿ, ಈ ಬಾರಿ ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿರುವುದು ವಿಭಿನ್ನವಾಗಿದೆ. ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಮೂರರಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ಆದರೆ ಈ ಬಾರಿ ನಾವು ಏಳರಿಂದ 10 ದಿನಗಳ ಕಾಲ ಜ್ವರವನ್ನು ನೋಡುತ್ತಿದ್ದೇವೆ ಮತ್ತು ಆಗ ಮಾತ್ರ ಕಡಿಮೆ ಬಿಪಿ ಮತ್ತು ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಂತಹ ಡೆಂಗ್ಯೂ ನಿರ್ದಿಷ್ಟ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಿದ್ದಾರೆ.

ಮೂರರಿಂದ ನಾಲ್ಕು ದಿನಗಳವರೆಗೆ ಡೆಂಗ್ಯೂ ಜ್ವರವನ್ನು ಕಾಣಬಹುದು. ಅದು ಮೊದಲು ಕಡಿಮೆಯಾಗುತ್ತದೆ ಮತ್ತು ಮತ್ತೆ ಪ್ರಾರಂಭವಾಗುತ್ತದೆ. ಮಕ್ಕಳಿಗೂ ತೀವ್ರ ಆಯಾಸವಿರುತ್ತದೆ. ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಈಗ ಡೆಂಗ್ಯೂ ರೋಗಿಗಳು ಸುಮಾರು 10 ಪ್ರತಿಶತದಷ್ಟು ದಾಖಲಾಗಿದ್ದಾರೆ ಮತ್ತು ಇದು ಜುಲೈ-ಆಗಸ್ಟ್‌ನಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
1 ರಿಂದ 2 ರಷ್ಟು ಡೆಂಗ್ಯೂ ರೋಗಿಗಳು ಪ್ರಸ್ತುತ ಐಸಿಯುಗೆ ದಾಖಲಾಗುತ್ತಿದ್ದಾರೆ. ಇದರೊಂದಿಗೆ ವಿಶೇಷವಾಗಿ ಶಾಲಾ ಮಕ್ಕಳು ಮತ್ತು ವೃದ್ಧರಲ್ಲಿ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಆದಾಗ್ಯೂ, ಹೆಚ್ಚಿನ ಪ್ರಕರಣಗಳು ಆಸ್ಪತ್ರೆಗೆ ದಾಖಲಾಗುತ್ತಿಲ್ಲ. ಹಾಗೆಯೇ ಪರಿಹಾರವಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳು ಸಲ್ಲಿಸಿದ BBMPಯ ಅಂಕಿಅಂಶಗಳು, ವಾರಕ್ಕೊಮ್ಮೆ ಇನ್‌ಫ್ಲೂಯೆನ್ಸ ತರಹದ ಅನಾರೋಗ್ಯದ (ILI) ಪ್ರಕರಣಗಳು 200 ರ ಪ್ರಕರಣಗಳಷ್ಟು ಇದೆ ಎಂದು ತೋರಿಸುತ್ತದೆ.
"ಏಪ್ರಿಲ್-ಮೇಗೆ ಹೋಲಿಸಿದರೆ ಕೆಮ್ಮು, ಶೀತ, ಉಬ್ಬಸ ಇತ್ಯಾದಿ ಸಮಸ್ಯೆ ಇರುವ ರೋಗಿಗಳ ಸಂಖ್ಯೆ 20 ರಿಂದ 30 ಪ್ರತಿಶತದಷ್ಟು ಹೆಚ್ಚಾಗಿದೆ. ಆದರೆ ಸಂಖ್ಯೆ ಅಥವಾ ತೀವ್ರತೆಯ ವಿಷಯದಲ್ಲಿ ಪರಿಸ್ಥಿತಿಯು ಆತಂಕಕಾರಿಯಾಗಿಲ್ಲ. ಕಾಲೋಚಿತ ಸ್ಪೈಕ್ ಇನ್ನೂ 2 ರಿಂದ 4 ವಾರಗಳವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಸೇಂಟ್ ಜಾನ್ಸ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ. ಜಾರ್ಜ್ ಡಿಸೋಜಾ ಹೇಳಿದರು.












Click it and Unblock the Notifications