ಮೀಟರ್ ಮೇಲೆ ಕೊಡಿ ಸಾರ್ ಬತ್ತಿನಿ ಅನ್ನೋದು ಈಗ ಆ್ಯಪ್‌ಗಳಲ್ಲೂ ಶುರುವಾಯ್ತು
ಬೆಂಗಳೂರಲ್ಲಿ ಆಟೋ ಡ್ರೈವರ್‌ಗಳು ಹೆಚ್ಚು ಬಾಡಿಗೆ ಕೇಳ್ತಾರೆ, ನಾವು ಕೇಳಿದ ಕಡೆಯಲ್ಲಿ ಬರುವುದಿಲ್ಲ ಎನ್ನುವುದು ಬೆಂಗಳೂರಿನ ಕೆಲವು ಆಟೋ ಡ್ರೈವರ್‌ಗಳ ಬಗ್ಗೆ ಇರುವ ಬಹುದೊಡ್ಡ ದೂರು. ಕೆಲವು ಆಟೋ ಚಾಲಕರು ಈ ರೀತಿ ಮಾಡುವುದರಿಂದಲೇ ಬಹುತೇಕ ಆಟೋ ಚಾಲಕರ ಮೇಲೆ ಈ ಅಭಿಪ್ರಾಯ ಇದೆ. ಆಟೋದವರು ಎಲ್ಲರೂ ಈ ರೀತಿ ಮಾಡುತ್ತಾರೆ ಎಂದು ಹೇಳುತ್ತಿಲ್ಲ. ಬೆಂಗಳೂರಿನಲ್ಲಿ ಕೆಲವೊಂದು ಆಟೋ ಚಾಲಕರು ಗ್ರಾಹಕರೊಂದಿಗೆ ಕೋಪದಿಂದ ವರ್ತಿಸುವುದು ಇದೆ. ಈ ಬಗ್ಗೆ ಜನರಲ್ಲಿ ಇರುವ ಅಸಮಾಧಾನವನ್ನು ತಪ್ಪಿಸಿದರೆ ಸಾಕು.
ಈಚೆಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಆಟೋ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕಾಗಿ ಆಟೋ ಡ್ರೈವರ್ ಮಹಿಳೆಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದು, ಅಸಭ್ಯವಾಗಿ ವರ್ತಿಸಿದ್ದ. ಇದು ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೇ ಬುಕ್ಕಿಂಗ್ ಕ್ಯಾನ್ಸಲ್ ಮಾಡುವುದು ಗ್ರಾಹಕರ ಇಚ್ಛೆ ಇದಕ್ಕೆ ಅವರಿಗೆ (ಬುಕ್ಕಿಂಗ್ ಕ್ಯಾನ್ಸಲ್ ಮಾಡಿದವರಿಗೆ) ಶುಲ್ಕವೂ ಬೀಳುತ್ತದೆ. ಈ ಶುಲ್ಕವನ್ನು ಕಂಪನಿಗಳು ಆಟೋ ಚಾಲಕರಿಗೆ ವರ್ಗಾಯಿಸುತ್ತವೆ. ಹೀಗಾಗಿ, ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರೆ ಈ ರೀತಿ ವರ್ತಿಸುವ ಅವಶ್ಯಕತೆ ಇಲ್ಲ ಎಂದು ಕೆಲವರು ಹೇಳಿದ್ದರು.

ಆ್ಯಪ್‌ಗಳಲ್ಲೂ ಎಕ್ಸ್‌ಟ್ರಾ ಕೇಳ್ತಿದ್ದಾರೆ: ಬೆಂಗಳೂರಿನಲ್ಲಿ ಕೆಲವು ಆಟೋದವರು ಮಾತ್ರವಲ್ಲ ಇದೀಗ ಆ್ಯಪ್ ಗಳಲ್ಲೂ ಹೆಚ್ಚು ಹಣ ಕೊಡುವಂತೆ ಕೇಳಲಾಗುತ್ತಿದೆ. ಸೇಫ್ ಆಗಿ ಬಿಡ್ತೀವಿ ತಾನೆ ಒನ್ ಅಂಡ್ ಆಫ್ ಕೊಡಿ ಎನ್ನುವಂತೆ ಆ್ಯಪ್ ಗಳಲ್ಲೂ ಹೆಚ್ಚು ಹಣ ಕೇಳಲಾಗುತ್ತಿದೆ. ಲೇಖಕ ಎಎಸ್‌ಜಿ ಅವರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Capitalism Version of (ಬಂಡವಾಳಶಾಹಿ ಮಾದರಿ) ಮೀಟ್ರು ಮೇಲೆ ಹತ್ ರೂಪಾಯ್ ಕೊಡಿ ಸಾರ್ ಬತ್ತಿನಿ ಎನ್ನುವಂತೆ ಕೆಲವು ಆ್ಯಪ್‌ಗಳು ತೋರಿಸುತ್ತಿವೆ ಎಂದು ಸ್ಕ್ರೀನ್ ಶಾಟ್ ಅನ್ನು ಸಹ ಅವರು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಒಂದಕ್ಕಿಂತ ಒಂದು ಆ್ಯಪ್‌ಗಳಲ್ಲಿ ಕ್ಯಾನ್ಸಲ್ ಆಗುವುದೇ ಹೆಚ್ಚು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಂದರೆ ಯಾವ ಆ್ಯಪ್‌ಗಳು ಸಹ ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲಿ ಅಂತ ಕೇಳಿ ಬುಕ್ಕಿಂಗ್ ಕ್ಯಾನ್ಸಲ್ ಮಾಡ್ತಾರೆ
ಬೆಂಗಳೂರಲ್ಲಿ ಆಟೋ, ಕ್ಯಾಬ್‌ಗಳನ್ನು ಬುಕ್ ಮಾಡುವುದು ಸವಾಲಾಗಿದೆ. ಬುಕ್ ಆಗುವ ಆಟೋ, ಕ್ಯಾಬ್‌ಗಳಿಗಿಂತ ಕ್ಯಾನ್ಸಲ್ ಆಗಿದ್ದೇ ಹೆಚ್ಚು ಎಂದು ಕೆಲವರು ಎಎಸ್‌ಜಿ ಅವರಿಗೆ ರಿಪ್ಲೈ ಕೊಟ್ಟಿದ್ದಾರೆ. ಬುಕ್ಕಿಂಗ್ ಮಾಡಿ ಎಲ್ಲಿ ಹೋಗಬೇಕು ಎಂದು ಆಟೋ (ಆ್ಯಪ್ ಆಧಾರಿತ ಆಟೋ ಸೇವೆಯಲ್ಲಿ) ಕೇಳುತ್ತಾರೆ. ನಿರ್ದಿಷ್ಟ ಜಾಗವನ್ನು ಕೇಳುತ್ತಿದ್ದಂತೆಯೇ ಕ್ಯಾಬ್ ಅಥವಾ ಆಟೋ ಬುಕ್ಕಿಂಗ್ ಸೇವೆಯನ್ನು ಕ್ಯಾನ್ಸಲ್ ಮಾಡುತ್ತಾರೆ. ಇದು ಆ್ಯಪ್ ಆಧಾರಿತ ಆಟೋ ಸೇವೆಯನ್ನು ಬಳಸುವ ಹಲವರ ಗಮನಕ್ಕೆ ಬಂದಿದೆ ಎನ್ನುವ ಚರ್ಚೆ ನಡೆದಿದೆ.
ಮುಂಬೈನ ಆಟೋ ಭಿನ್ನ ಮಾದರಿ
ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗದ ಆಟೋಗಳಿಗೆ ಹೋಲಿಕೆ ಮಾಡಿದರೆ, ಮುಂಬೈನಲ್ಲಿ ಆಟೋ ಸೇವೆ ಭಿನ್ನವಾಗಿದೆ. ಮುಂಬೈನಲ್ಲಿ ಆಟೋ ಚಾಲಕರು ಮೀಟರ್ ಹಾಕದೆ ಆಟೋವನ್ನು ಮುಂದಕ್ಕೆ ತೆಗೆಯುವುದಿಲ್ಲ. ಮೀಟರ್ ಮೇಲೆ ಸೇರಿಸಿಕೊಡಿ ಎಂದು ಕೇಳುವುದಿಲ್ಲ. ಆಟೋದ ಮೀಟರ್‌ನಲ್ಲಿ ಎಷ್ಟು ತೋರಿಸುತ್ತದೆಯೋ ಅಷ್ಟು ಹಣವನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಅದಕ್ಕೆ ಅಲ್ಲಿನ ಆಟೋ ಅಸೋಸಿಯೇಷನ್‌ಗಳು ಸಹ ಕಾರಣ ಎನ್ನಲಾಗುತ್ತದೆ. ದೆಹಲಿಯಲ್ಲೂ ಹೇಳಿಕೊಳ್ಳುವಂತಹ ಆಟೋ ಸೇವೆ ಇಲ್ಲ.












Click it and Unblock the Notifications