ಐದು ಲಕ್ಷ ರೂ. ಕೇಸಲ್ಲಿ ವೈಟ್ ಫೀಲ್ಡ್ ಸೈಬರ್ ಪೊಲೀಸರು ಮಾಡಿದ್ದೇನು?
ಬೆಂಗಳೂರು, ಜು. 24: ಹಣಕಾಸಿನ ವಿವಾದ ಬಗೆಹರಿಸಲು ಐದು ಲಕ್ಷ ರೂ. ಲಂಚ ವಸೂಲಿ ಮಾಡಿ ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ಇದೀಗ ಎಸಿಬಿ ತನಿಖೆಗೆ ಗುರಿಯಾಗಿದ್ದಾರೆ. ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರ ವಿರುದ್ಧ ಎಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವೈಟ್‌ಫೀಲ್ಡ್ ವಿಭಾಗದ ಸೈಬರ್ ಠಾಣೆ ಇನ್‌ಸ್ಪೆಕ್ಟರ್ ರೇಣುಕಾ, ಪಿಎಸ್ಐ ನವೀನ್, ಪೇದೆಗಳಾದ ಹೇಮಂತ್ ಮತ್ತು ಮಂಜುನಾಥ್ ವಿರುದ್ಧ ಬೆಂಗಳೂರು ನಗರ ಘಟಕದ ಎಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೇ ಇನ್‌ಸ್ಪೆಕ್ಟರ್ ರೇಣುಕಾ ಮನೆಯಲ್ಲಿ ಎಸಿಬಿ ಪೊಲೀಸರು ಲಂಚದ ಹಣಕ್ಕಾಗಿ ಶೋಧ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ವೈಟ್‌ಫೀಲ್ಡ್ ನಿವಾಸಿ ಸುದೀಪ್ ಇಂಟೀರಿಯರ್ ಡಿಸೈನ್ ಗುತ್ತಿಗೆದಾರನಾಗಿದ್ದ ಶ್ವೇತಾ ಸಿಂಗ್ ಅವರ ಮನೆಯ ಇಂಟೀರಿಯರ್ ಡಿಸೈನ್ ಮಾಡುವ ಕೆಲಸ ಸಂಬಂಧ ಐದು ಲಕ್ಷ ರೂ. ಹಣ ಪಡೆದಿದ್ದರು. ಕೆಲಸ ಮಾಡಿಕೊಡದ ಕಾರಣ ಶ್ವೇತಾ ಸಿಂಗ್ ಸುದೀಪ್ ವಿರುದ್ಧ ಹಣ ಮೋಸ ಮಾಡಿರುವ ಆರೋಪ ಹೊರಿಸಿ ವೈಟ್‌ಫೀಲ್ಡ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಸುದೀಪ್ ಅವರ ಮನೆಗೆ ತೆರಳೀದ್ದ ಪಿಎಸ್ಐ ನವೀನ್ ಹಾಗೂ ಸಿಬ್ಬಂದಿ, "ನಿನ್ನ ಹಾಗೂ ನಿನ್ನ ಪತ್ನಿ ವಿರುದ್ದ ಚೀಟಿಂಗ್ ಕೇಸ್ ದಾಖಲಾಗಿದೆ ಎಂದೇಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ದೂರುದಾರರಿಗೆ ಐದು ಲಕ್ಷ ರೂ.ಹಣ ಜತೆಗೆ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗದಂತೆ ಮನೆಗೆ ಹೋಗಲು ಲಂಚದ ಹಣ ಹತ್ತು ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಮಾತ್ರವಲ್ಲ ಮನೆಗೆ ಬಿಡದೇ ಸುದೀಪ್ ಹಾಗೂ ಅವರ ಪತ್ನಿ ಸಿಸ್ನಾಸಿಂಗ್ ಅವರನ್ನು ಠಾಣೆಯಲ್ಲಿ ಕೂರಿಸಿದ್ದಾರೆ.
ಪರಿಚಿತರ ಮೂಲಕ ಹತ್ತು ಲಕ್ಷ ರೂ. ಹಣ ಬ್ಯಾಂಕ್ ಗೆ ಹಾಕಿಸಿಕೊಂಡು ಹಣವನ್ನು ತಲುಪಿಸಿದ್ದಾರೆ. ಇಷ್ಟಾಗಿಯೂ ಪುನಃ ಐದು ಲಕ್ಷ ರೂ. ಹಣ ನೀಡುವಂತೆ ಪಿಎಸ್ಐ ನವೀನ್ ಬೇಡಿಕೆ ಇಟ್ಟಿದ್ದಾರೆ. ಐದು ಲಕ್ಷ ರೂ. ಹಣ ವಾಪಸು ನೀಡಿದರೂ ಹತ್ತು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈಟ್ ಫೀಲ್ಡ್ ಸೈಬರ್ ಠಾಣೆ ಪೊಲೀಸರ ಮಾತುಕತೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಸುದೀಪ್ ಎಸಿಬಿಗೆ ಪೊಲೀಸರಿಗೆ ದೂರು ನೀಡಿದ್ದ.

Recommended Video
ದೂರಿನ ಮೇರೆಗೆ ಪ್ರಾಥಮಿಕ ತನಿಖೆ ನಡೆಸಿದ ಎಸಿಬಿ ಪೊಲೀಸರು ಪೊಲೀಸ್ ಇನ್‌ಸ್ಪೆಕ್ಟರ್ ರೇಣುಕಾ, ಪಿಎಸ್ಐ ನವೀನ್ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಐದು ಲಕ್ಷ ರೂ. ಹಣವನ್ನು ದೂರುದಾರೆಯ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಅದನ್ನು ಡ್ರಾ ಮಾಡಿಸಿಕೊಂಡಿದ್ದ ನವೀನ್ ಈ ಪ್ರಕರಣದ ಮೊದಲ ಆರೋಪಿಯಾಗಿದ್ದಾನೆ. ಐದು ಲಕ್ಷ ರೂ. ಹಣ ಕೊಡಿಸುವ ಪ್ರಕರಣದಲ್ಲಿ ಹತ್ತು ಲಕ್ಷ ರೂ. ಲಂಚದ ಹಣವನ್ನು ವಸೂಲಿ ಮಾಡಲು ಹೋಗಿ ಇದೀಗ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications