ಕೊರೊನಾ ವೈರಸ್‌ನಿಂದ ಕುಸಿದ ಮೊಬೈಲ್ ಮಾರುಕಟ್ಟೆ

ಬೆಂಗಳೂರು, ಮೇ 12: ಕೊರೊನಾ ವೈರಸ್‌ ದೇಶದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಿದೆ. ಮೊಬೈಲ್ ಮಾರುಕಟ್ಟೆಗೆ ಸಹ ಕೊರೊನಾ ದೊಡ್ಡ ಹೊಡೆತ ನೀಡಿದೆ.

ಕೊರೋನಾ ಹರಡುವಿಕೆ ತಡೆಗೆ ಲಾಕ್ ಡೌನ್ ಮಾಡಿರುವ ಹಿನ್ನಲೆ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡಿ ಭಾಗಗಳ ಕೊರತೆ ಉಂಟಾಗಿದೆ. ಚೀನಾದಿಂದ ಬರುತ್ತಿದ್ದ ಮೊಬೈಲ್ ಬಿಡಿ ಭಾಗಗಳ ಸಂಖ್ಯೆ ಇಳಿಮುಖವಾಗಿದೆ.

2019ರಲ್ಲಿ ಚೀನಾ ಮೂಲದ ಮೊಬೈಲ್ ಕಂಪನಿಗಳು ಶೇ.72ರಷ್ಟು ಭಾರತದಲ್ಲಿತ್ತು. ಆದರೆ, ಇದೀಗ ಲಾಕ್‌ ಡೌನ್ ಹಿನ್ನೆಲೆ ಮೊಬೈಲ್ ಬಿಡಿ ಭಾಗಗಳು ಸಿಗುತ್ತಿಲ್ಲ. ಕಾರಣ ಅವುಗಳ ಬೆಲೆ ಬಲು ದುಬಾರಿಯಾಗಿದೆ.

Deficiency For Mobile Spare Parts In Market

''ಕೊರೋನಾ ಮುನ್ನ ಸಮುದ್ರದ ಮೂಲಕ ಚೀನಾದಿಂದ ಮೊಬೈಲ್ ಬಿಡಿ ಭಾಗಗಳು ಆಮದಾಗುತ್ತಿತ್ತು. ಈಗ ವಿಮಾನದ ಮೂಲಕ ಮೊಬೈಲ್ ಬಿಡಿ ಭಾಗಗಳ ಸಾಗಾಣೆ ಹಿನ್ನೆಲೆ ವೆಚ್ಚದಲ್ಲಿ 5 ಪಟ್ಟು ಹೆಚ್ಚಳವಾಗಿದೆ'' ಎಂದು ಕರ್ನಾಟಕ ಮೊಬೈಲ್ ವಿತರಕರ ಸಂಘದ ಕಾರ್ಯದರ್ಶಿ ಪ್ರವೀಣ್ ಚೌಹಾಣ್ ಮಾಹಿತಿ ನೀಡಿದ್ದಾರೆ.

100 ರೂಪಾಯಿ ಇದ್ದ ಮೊಬೈಲ್ ವಸ್ತುಗಳ ಬೆಲೆಯನ್ನು 1000 ರೂಪಾಯಿಗೆ ಏರಿಸಲಾಗಿದೆ. ಇದರಿಂದಾಗಿ ಚಿಲ್ಲರೆ ಮೊಬೈಲ್ ವ್ಯಾಪಾರಿಗಳಿಗೆ ಬಾರೀ ಹೊಡೆತ ನೀಡಿದೆ. ಇದು ದೇಶದ ಆರ್ಥಿಕ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+