ಡಿಸೆಂಬರ್ ಮೊದಲವಾರ ಶುರುವಾಯ್ತು ಆರ್ಥಿಕ ಬರಗಾಲ

ಬೆಂಗಳೂರು, ಡಿಸೆಂಬರ್ 1: ದೇಶದಲ್ಲಿಯೇ ಅಪನಗದೀಕರಣದಿಂದಾಗಿ ಆರ್ಥಿಕ ಬರಗಾಲ ಶುರುವಾಗಿದೆ. ಡಿಸೆಂಬರ್ ತಿಂಗಳ ಮೊದಲನೇ ತಾರೀಖು ಸಂಬಳ ಪಡೆಯುವುದೆಲ್ಲಿ ಎಂಬ ಆತಂಕದಲ್ಲಿ ಉದ್ಯೋಗಸ್ಥ ಚಿಂತಿಸುವಂತಾಗಿದೆ.

ಬೆಂಗಳೂರಿನ ಐನೂರಕ್ಕೂ ಹೆಚ್ಚು ಎಟಿಎಂಗಳಲ್ಲಿ ಸರಾಗವಾಗಿ ಹಣ ಪಡೆದು ನಿತ್ಯ ಖರ್ಚಿಗೆ ಬಳಸುತ್ತಿದ್ದ ನೌಕರರು, ಉದ್ಯೋಗಸ್ಥರು ಗುರುವಾರ ಮಾಡುವ ಕೆಲಸವನ್ನೆಲ್ಲಾ ಬಿಟ್ಟು ಎಟಿಎಂ, ಬ್ಯಾಂಕಿನ ಮುಂದೆ ಕಾಯುವಂತಾಗಿದೆ, ಬೆಂಗಳೂರಿನ ನೂರಾರು ಎಟಿಎಂಗಳಲ್ಲಿ ಹಣವಿಲ್ಲದ ಕಾರಣ ಎಟಿಎಂ ದರುಸ್ತಿಯಲ್ಲಿದೆ ಎಂಬ ಫಲಕವೇ ಮುಂದುವರೆದಿದೆ.[ಬ್ಯಾಂಕಿನಲ್ಲಿ ಹಣವಿಲ್ಲ: ಸಾಮಾನ್ಯನ ಸಹನೆಗೆ ಮಿತಿಯಿಲ್ಲವೇ?]

December first: people have no money queue forming in bank and ATM

ಎಟಿಎಂ ಮುಂದೆ ಹೊದರೆ ಸಾಕು, ಸಿಬ್ಬಂದಿಯೇ ಕೈ ಅಲ್ಲಾಡಿಸಿ ಹಣವಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಬ್ಯಾಂಕಿನ ಮುಂದೆ ಅಲ್ಲಲ್ಲಿ ನಿಧಾನವಾಗಿ ಗುರುವಾರದ ಬೆಳಗಿನಿಂದಲೇ ಕ್ಯೂ ಪ್ರಾರಂಭವಾಗಿದೆ. ಜನರನ್ನು ಕೇಳಿದರೆ ನಿರ್ಧಾರ ಒಳ್ಳೆಯದು ವ್ಯವಸ್ಥೆ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ.

ಹೆಚ್ಚು ಹಣ ಅವಶ್ಯಕತೆಯಿದ್ದು ಮದುವೆ, ನಾಮಕರಣ, ಗೃಹಪ್ರವೇಶ ಮಾಡುವವರು ಹಣಕ್ಕಾಗಿ ತೀವ್ರ ಪರಿಪಾಟಲು ಪಡುತ್ತಿದ್ದಾರೆ. ಅದೂ ಈ ಡಿಸೆಂಬರ್ ಮೊದಲವಾರದಲ್ಲಿ ಹಣ ಕೇಳಿದರೆ ಬ್ಯಾಂಕಿನವರೂ 5-6 ಸಾವಿರಕ್ಕಿಂತ ಹೆಚ್ಚು ಕೇಳಬೇಡಿ ಎಂದು ಕಳುಹಿಸುತ್ತಿದ್ದಾರೆ.[ಒಂದನೇ ತಾರೀಖು ಸಂಬಳಕ್ಕೆ ಮತ್ತೆ ಕ್ಯೂ ಶುರವಾಗುತ್ತಾ..?]

December first: people have no money queue forming in bank and ATM

ಕೆಲವೊಂದು ಎಟಿಎಂ,ಬ್ಯಾಂಕುಗಳಲ್ಲಿ ಹಣವನ್ನು ನೀಡುತ್ತಿದ್ದರೂ ಪಡೆದುಕೊಳ್ಳುವ ಹಣಕ್ಕೆ ಮಿತಿ ಹೇರಲಾಗಿದೆ. ಇದೇ ರೀತಿಯಾದರೆ ಜನರು ತಿಂಗಳ ಮೊದಲವಾರದ ಸಂಕಟಗಳಾದ ಬಾಡಿಗೆ, ಕರೆಂಟ್ ಬಿಲ್, ಪೇಪರ್ ಬಿಲ್, ಕೇಬಲ್, ಹಾಲು, ತರಕಾರಿ, ದಿನಸಿ ಕೊಳ್ಳಲು ಏನು ಮಾಡಬೇಕೆಂಬುದು ಪ್ರಶ್ನೆಗಳಾಗಿಯೇ ಉಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+