ಜನ ವಿರೋಧದ ನಡುವೆ ಮನೆಯ ಕಾಂಪೌಂಡ್‌ನಲ್ಲಿ ಮೃತ ಮಹಿಳೆ ಅಂತ್ಯ ಸಂಸ್ಕಾರ
ಬೆಂಗಳೂರು, ಫೆ. 02: ಬೆಂಗಳೂರಿನಲ್ಲಿ ಮೃತ ದೇಹವನ್ನು ಸಾರ್ವಜನಿಕರ ವಿರೋಧದ ನಡುವೆ ಜನ ವಸತಿ ಪ್ರದೇಶದಲ್ಲಿ ಅಂತ್ಯ ಸಂಸ್ಕಾರ ನಡೆಸಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣ ಮನೆ ಆವರಣದಲ್ಲಿ ಅಂತ್ಯ ಸಂಸ್ಕಾರ ಮಾಡುವ ನಿಯಮಗಳ ಬಗ್ಗೆ ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ವಿವಾದಕ್ಕೆ ಎಡೆ ಮಾಡಿಕೊಟ್ಟ ಪ್ರಕರಣ: ಬೊಮ್ಮನಹಳ್ಳಿ ವಲಯದ ಪಾಂಡುರಂಗ ಲೇಔಟ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯ ಅಂತ್ಯ ಸಂಸ್ಕಾರವನ್ನು ಜನ ವಸತಿ ಪ್ರದೇಶದ ತನ್ನ ಸ್ವಂತ ಜಾಗದಲ್ಲಿ (ಈಜುಕೊಳ ಪಕ್ಕ) ಕಳೆದ ಸೋಮವಾರ ನೆರವೇರಿಸಿದ್ದಾರೆ. ಅಕ್ಕ ಪಕ್ಕದಲ್ಲಿ ಮನೆ ಮನೆಗಳಿದ್ದು, ಜನ ವಸತಿ ಪ್ರದೇಶದಲ್ಲಿ ಮಾಡದಂತೆ ಲೇಔಟ್ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನ್ನ ಜಾಗ, ನನ್ನಿಷ್ಟ, ಇದನ್ನು ನೀವು ಯಾರು ಪ್ರಶ್ನೆ ಮಾಡೋಕೆ ಎಂದು 80 ವರ್ಷದ ಮೃತ ಮಹಿಳೆಯ ಅಂತ್ಯ ಸಂಸ್ಕಾರವನ್ನು ಮನೆ ಸಮೀಪದ ಸ್ವಂತ ಜಾಗದಲ್ಲಿಯೇ ಬಿಬಿಎಂಪಿ ಅಧಿಕಾರಿಗಳ ಎದುರಲ್ಲೇ ನೆರವೇರಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ: ಪಾಂಡುರಂಗ ಬಡಾವಣೆಯಲ್ಲಿ ಜನ ವಸತಿ ಪ್ರದೇಶದಲ್ಲಿ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡುವುದನ್ನು ತಡೆಯಲು ಸ್ಥಳೀಯ ನಿವಾಸಿಗಳು ಯತ್ನಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳೀಯ ಪುಟ್ಟೇನಹಳ್ಳಿ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಬಂದರೂ ಮೃತ ಮಹಿಳೆ ಅಂತ್ಯ ಸಂಸ್ಕಾರವನ್ನು ರೆಡ್ಡಿ ಎಂಬ ವ್ಯಕ್ತಿ ನೆರವೇರಿಸಿದ್ದಾರೆ. ನನ್ನ ಮನೆ ಯಜಮಾನರ ಅಂತ್ಯ ಸಂಸ್ಕಾರವನ್ನು ಮೊದಲು ಇಲ್ಲೇ ಮಾಡಿದ್ದೇವೆ. ಅದೇ ಜಾಗದಲ್ಲಿ ಮೃತ ವ್ಯಕ್ತಿಯ ಪತ್ನಿಯನ್ನು ಅಂತ್ಯ ಸಂಸ್ಕಾರ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಲೇಔಟ್ ನಿವಾಸಿಗಳು ಹಾಗೂ ಅಂತ್ಯ ಸಂಸ್ಕಾರ ನೆರವೇರಿಸಿದ ವ್ಯಕ್ತಿ ನಡುವೆ ದೊಡ್ಡ ವಿವಾದ ಉಂಟಾಗಿದೆ. ಲೇಔಟ್ ನಿವಾಸಿಗಳ ಸಂಘದ ಅಧ್ಯಕ್ಷ ಪರಮೇಶ್ವರ ಭಟ್ ಎಂಬುವರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಅಂತ್ಯ ಸಂಸ್ಕಾರದ ನಿಯಮ ಏನು ಹೇಳುತ್ತೆ: ಸಾಮಾನ್ಯವಾಗಿ ಹಳ್ಳಿ ಪ್ರದೇಶದಲ್ಲಿ ವ್ಯಕ್ತಿ ಮೃತಪಟ್ಟರೆ, ಒಂದು ಸರ್ಕಾರ ಅಧಿಸೂಚಿತ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಬೇಕು. ಇಲ್ಲದಿದ್ದರೆ ಅವರ ಸ್ವಂತ ಜಾಗದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ. ಆದರೆ ಬೆಂಗಳೂರು ನಂತರ ನಗರ ಪ್ರದೇಶದ ವಿಚಾರಕ್ಕೆ ಬಂದರೆ ಮನೆ ಅವರಣ, ಸ್ವಂತ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಾರೆ. ಮಿಗಿಲಾಗಿ ಜನ ವಸತಿ ಎನ್ನುವ ಕಾರಣಕ್ಕೆ ಯಾರೂ ಸ್ವಂತ ಮನೆಗಳ ಸಮೀಪ ಅಂತ್ಯ ಸಂಸ್ಕಾರ ನೆರವೇರಿಸುವುದಿಲ್ಲ. ಬೆಂಗಳೂರು ಮಹಾನಗರ ಪಾಲಿಕೆ ಅಧಿಸೂಚಿತ ಜಾಗಗಳಲ್ಲಿಯೇ ಅಂತ್ಯ ಸಂಸ್ಕಾರವನ್ನು ಮಾಡಲಾಗುತ್ತದೆ. ಆದರೆ ಪಾಂಡುರಂಗ ಲೇಔಟ್‌ನಲ್ಲಿ ವ್ಯಕ್ತಿಯೊಬ್ಬ ಮೃತ ದೇಹವನ್ನು ಜನ ವಸತಿ ಪ್ರದೇಶದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಅದನ್ನು ತಡೆಯುವ ನಿಟ್ಟಿನಲ್ಲಿ ಸ್ಥಳಕ್ಕೆ ತೆರಳಿದ ಬಿಬಿಎಂಪಿ ಅಧಿಕಾರಿಗಳು ವಾಪಸು ಬಂದಿದ್ದಾರೆ. ಇದು ಕ್ರಿಮಿನಲ್ ಅಪರಾಧ ವ್ಯಾಪ್ತಿಗೆ ಬರಲ್ಲ ಎಂದು ಪುಟ್ಟೇನಹಳ್ಳಿ ಪೊಲೀಸರು ಸುಮ್ಮನಾಗಿದ್ದಾರೆ.

ಆದರೆ, ಕಾನೂನು ಪ್ರಕಾರ ಲಾ ಆಫ್ ಟಾರ್ಟ್ ಪ್ರಕಾರ ಯಾವುದೇ ಮೃತ ವ್ಯಕ್ತಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ನೆರವೇರಿಸಬೇಕು. ಮೃತ ವ್ಯಕ್ತಿ ಸಹಜ ಸಾವನ್ನಪ್ಪಿರಬೇಕು. ಇನ್ನು ಮೃತ ದೇಹವನ್ನು ಸರ್ಕಾರ ಅಧಿಸೂಚಿತ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಬಹುದು, ಇಲ್ಲವೇ ಸ್ವಂತ ಜಮೀನಿನಲ್ಲಿ ಮಾಡಿಕೊಂಡರೂ ಸಮಸ್ಯೆಯಿಲ್ಲ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗುವಂತಿದ್ದರೆ, ಅವರು ಅದನ್ನು ಪ್ರಶ್ನಿಸಬಹುದು. ಆದರೆ, ನ್ಯಾಯಾಲಯದ ಮೊರೆ ಹೋಗಬೇಕು. ಮೃತ ದೇಹವನ್ನು ಜನ ವಸತಿ ಪ್ರದೇಶದ ಖಾಸಗಿ ಜಾಗದಲ್ಲಿ ಅಂತ್ಯ ಸಂಸ್ಕಾರದಿಂದ ಜನರಿಗೆ ತೊಂದರೆ ಉಂಟಾಗುವಂತಿದ್ದರೆ, ಅಥವಾ ಒಂದು ಧರ್ಮ, ಸಮುದಾಯದ ಹಕ್ಕುಗಳಿಗೆ ತೊಡಕು ಮಾಡುವಂತಿದ್ದರೆ ಅಂತ್ಯ ಸಂಸ್ಕಾರ ಮಾಡಿದ ಮೃತ ದೇಹ ಬದಲಿಸುವಂತೆ ಕೋರಿ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ವಕೀಲ ರಾಜಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.

Recommended Video
ಪಾಂಡುರಂಗ ಬಡಾವಣೆ ಜನ ವಸತಿ ಪ್ರದೇಶದಲ್ಲಿ ಮೃತ ಮಹಿಳೆ ಅಂತ್ಯ ಸಂಸ್ಕಾರ ಮಾಡಿರುವ ಪ್ರಕರಣ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದ್ದು, ಇದೀಗ ಅನಿವಾರ್ಯವಾಗಿ ನ್ಯಾಯಾಲಯದಲ್ಲಿಯೇ ತೀರ್ಮಾನವಾಗಬೇಕಾಗುತ್ತದೆ. ಬಹುಶಃ ಈ ಪ್ರಕರಣದಲ್ಲಿ ನ್ಯಾಯಾಲಯ ನೀಡುವ ತೀರ್ಪಿನಿಂದಷ್ಟೇ ವಿವಾದ ಬಗೆ ಹರಿಯಬೇಕು ಎಂದು ವಕೀಲರು ಸಲಹೆ ನೀಡಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಆಗಿ ಬದಲಾದ ಪೆರಿಫೆರಲ್ ರಿಂಗ್ ರೋಡ್: 2029ರ ವೇಳೆಗೆ ನಗರದ ಟ್ರಾಫಿಕ್ಗೆ ಸಿಗಲಿದೆ ಮುಕ್ತಿ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications