ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ : ಯಮನಿಗೆ ಆಹ್ವಾನ ನೀಡಬೇಡಿ ಬೈಕ್ ಚಾಲಕರೆ

|
Google Oneindia Kannada News

ಬೆಂಗಳೂರು, ಜನವರಿ, 30 : ಬೆಂಗಳೂರಿನ ರಸ್ತೆಗಳಲ್ಲಿ ಅತಿವೇಗದಿಂದ ಬೈಕ್ ಓಡಿಸುವ ಸವಾರರಿಗೆ ಈ ವಿಡಿಯೋ ಎಚ್ಚರಿಕೆಯ ಗಂಟೆಯಂತಿದೆ. ಹೊಸೂರು ರಸ್ತೆಯಲ್ಲಿ ಸವಾರನೊಬ್ಬ ಟೆಂಪೊ ಟ್ರಾವಲರ್ ಗೆ ಡಿಕ್ಕಿ ಹೊಡೆಯುವುದನ್ನು ಚಿತ್ರಿಸಿರುವ ಈ ವಿಡಿಯೋ ಹೃದಯ ಹಿಂಡುವಂತಿದೆ.

ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ಪೂರ್ವ ಟ್ರಾಫಿಕ್ ವಿಭಾಗದ ವ್ಯಾಪ್ತಿಯಲ್ಲಿ ಎಲಿವೇಟೆಡ್ ರಸ್ತೆಯಲ್ಲಿ ಹೆಚ್ಚು ಸಂಚಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಪೂರ್ವ ಟ್ರಾಫಿಕ್ ಡಿಸಿಪಿ ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಂಗಳೂರು ಎಲಿವೇಟೆಡ್ ಟೋಲ್ ವೇ ಲಿಮಿಟೆಡ್(ಬಿಇಟಿಎಲ್)ಗೆ ಪತ್ರ ಬರೆದಿದ್ದಾರೆ.

ಎಲಿವೇಟೆಡ್ ರಸ್ತೆಯಲ್ಲಿ ದಿನನಿತ್ಯ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಹೆದ್ದಾರಿಯ ಮುಖ್ಯ ವಾಹಿನಿಗೆ ಉಪರಸ್ತೆಗಳಿಂದ ಸೇರುವ ಸಂದರ್ಭದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಜನವರಿ 26ರಂದು ಟೆಂಪೋ ಟ್ರಾವೆಲರ್ ಒಂದಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸಂಚಾರ ದಟ್ಟಣೆ ಮಾಹಿತಿಯುಳ್ಳ ನೂತನ ಆ್ಯಪ್ 'ಟ್ರಾಫಿಕ್ ಅನಲೈಸರ್'ಸಂಚಾರ ದಟ್ಟಣೆ ಮಾಹಿತಿಯುಳ್ಳ ನೂತನ ಆ್ಯಪ್ 'ಟ್ರಾಫಿಕ್ ಅನಲೈಸರ್'

ಉಪ ರಸ್ತೆಯಿಂದ ಮುಖ್ಯ ರಸ್ತೆಗೆ ತೆರಳುವ ವೇಳೆ ವಿಪರೀತ ವೇಗದಿಂದ ಬಂದು ವಾಹನಗಳಿಂದ ಅಪಘಾತ ಉಂಟಾಗುತ್ತಿದೆ. ಹೀಗಾಗಿ ಎಲಿವೇಟೆಡ್ ರಸ್ತೆಗಳಲ್ಲಿ ಪ್ರತಿ 750 ಮೀಟರ್ ಅಂತರದಲ್ಲಿ ಬ್ರೇಕರ್ ಅಳವಡಿಸಬೇಕು. ಹಾಗೂ ನಿಗದಿತ ಮಿತಿಗಿಂತ ವೇಗದಲ್ಲಿ ಚಲಿಸುವ ವಾಹನಗಳ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪ್ರತಿ 2 ಕಿ.ಮೀ ಅಂತರದಲ್ಲಿ ಕಾಣಸಿಗುವಂತೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು.

DCP traffic east asks security measures in BETL

ವೇಗದ ಮಿತಿಯನ್ನು ನಿಯಂತ್ರಿಸಲು ಬಿಇಟಿಎಲ್ ಪ್ರತ್ಯೇಕ ರೂಂ ಸ್ಥಾಪಿಸಿಕೊಳ್ಳಬೇಕು ಎಂದು ಪೂರ್ವ ಟ್ರಾಫಿಕ್ ವಲಯದ ಡಿಸಿಪಿ ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಬಿಇಟಿಎಲ್ ಬೆಂಗಳೂರು ಎಲಿವೇಟೆಡ್ ಟೋಲ್ ವೇ ಲಿಮಿಟೆಡ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

ಟ್ರಾಫಿಕ್ ಪೊಲೀಸರ ಕೈಗೆ ಹೊಸ ಮೊಬೈಲ್, ನಿಯಮ ಉಲ್ಲಂಘನೆ ಅಸಾಧ್ಯಟ್ರಾಫಿಕ್ ಪೊಲೀಸರ ಕೈಗೆ ಹೊಸ ಮೊಬೈಲ್, ನಿಯಮ ಉಲ್ಲಂಘನೆ ಅಸಾಧ್ಯ

ಈ ಬಗ್ಗೆ ಬೆಂಗಳೂರು ಪೂರ್ವ ವಲಯದ ಟ್ರಾಫಿಕ್ ಡಿಸಿಪಿ ಟ್ವಿಟ್ಟರ್ ನಲ್ಲಿ ಅಪಘಾತ ಕುರಿತಾದ ವಿಡಿಯೋವನ್ನು ಹಂಚಿಕೊಂಡಿದ್ದು, ಬಿಇಟಿಎಲ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

English summary
Deputy commissioner of police east traffic of bengaluru has written a letter to NHAI and BETL to take more safety measures in elevated roads installing speed control cameras and breakers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X