ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಠಾತ್ ಭೇಟಿಯಿಂದ ರಿಯಾಲಿಟಿ ಗೊತ್ತಾಗುತ್ತೆ ಎಂದ ಪರಮೇಶ್ವರ

|
Google Oneindia Kannada News

ಬೆಂಗಳೂರು, ನವೆಂಬರ್ 23: ಹಠಾತ್ ಭೇಟಿ ನೀಡಿದರೆ ರಿಯಾಲಿಟಿ ತಿಳಿಯಲು ಸಾಧ್ಯ ಎಂದು ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಹೇಳಿದರು.

ಹೇಳಿ ಪರಿಶೀಲನೆಗೆ ತೆರಳಿದರೆ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಳ್ಳುತ್ತಾರೆ. ಹೀಗಾಗಿ ದಿಢೀರ್‌ ಭೇಟಿ‌ನೀಡಿದೆ. ಮುಂದಿನ‌ ದಿನಗಳಲ್ಲಿ ಇಂಥ ಇನ್ನಷ್ಟು ದಿಢೀರ್‌ ಭೇಟಿ ನೀಡಿ, ವಸ್ತು ಸ್ಥಿತಿಯನ್ನು ಪರಿಶೀಲಿಸಿ ಕ್ರಮ‌ಕೈಗೊಳ್ಳುತ್ತೇನೆ ಎಂದು ಹೇಳಿದರು.

ಹೆರಿಗೆ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ಮಾಡಿದ ಪರಮೇಶ್ವರ ಹೆರಿಗೆ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ಮಾಡಿದ ಪರಮೇಶ್ವರ

ಮೇಯರ್ ಹಾಗೂ ಆಯುಕ್ತರೊಂದಿಗೆ ಪರಮೇಶ್ವರ ಅವರು ದೇವಸಂದ್ರ ಬಳಿ ಇರುವ ರಾಧಕೃಷ್ಣ ದೇವಸ್ಥಾನ ಇಂದಿರಾ ಕ್ಯಾಂಟಿನ್, ಇಂದಿರಾ ಅಡುಗೆ ಮನೆ, ಸಾರ್ವಜನಿಕ ಗ್ರಂಥಾಲಯ, ರಿಂಗ್‌ರಸ್ತೆ ವೈಟ್‌ಟಾಪಿಂಗ್, ಗಂಗಾನಗರ ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

DCM says surprise visit will continue to find out reality

ಮೊದಲಿಗೆ ದೇವಸಂದ್ರ ಇಂದಿರಾ ಕ್ಯಾಂಟಿನ್‌ ಭೇಟಿ ನೀಡಿದ ಪರಮೇಶ್ವರ್, ಅಲ್ಲಿ ಜನರಿಗೆ ನೀಡುವ ತಿಂಡಿಗಳ ಬಗ್ಗೆ ಪರಿಶೀಲನೆ ನಡೆಸಿದರಿ. ಮೂರು ಇಡ್ಲಿ ಹಾಗೂ ಬಿಸಿಬೇಳೆ ಬಾತ್‌‌ಗೆ 10 ರುಪಾಯಿ ಹಣ ನೀಡಿ ಖರೀದಿ, ತಿಂಡಿ ರುಚಿ ಪರಿಶೀಲಿಸಿದರು.

ಇಂದಿರಾ ಕ್ಯಾಂಟೀನ್‌ಗೆ ಬಂದಿದ್ದ ಸಾರ್ವಜನಿಕರ ಬಳಿ ಮಾತನಾಡಿ, ಕ್ಯಾಂಟಿನ್‌ನಲ್ಲಿ ನೀಡುವ ಊಟದ ಬಗ್ಗೆ ವಿಚಾರಿಸಿದರು. ಪ್ರತಿಯೊಬ್ಬರೂ ತಿಂಡಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು.

ಬಳಿಕ ದೇವಸಂದ್ರ ಇಂದಿರಾ ಕ್ಯಾಂಟೀನ್‌ ತೆರಳಿದ ಅವರು, ಅಡುಗೆ ತಯಾರಿಸುವ ವಿಧಾನ ಹಾಗೂ ಶುಚಿತ್ವವನ್ನು ಪರಿಶೀಲಿಸಿದರು. ಪ್ರತಿಯೊಂದು ಸ್ವಚ್ಛವಾಗಿದ್ದರಿಂದ ಅಲ್ಲಿನ ಸಿಬ್ಬಂದಿಗೆ ಶ್ಲಾಂಘಿಸಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನೋಕೆ ಹೋದ ಡಿಸಿಎಂ ಪೇಚಿಗೆ ಸಿಲುಕಿದ್ರು ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನೋಕೆ ಹೋದ ಡಿಸಿಎಂ ಪೇಚಿಗೆ ಸಿಲುಕಿದ್ರು

ಪಕ್ಕದಲ್ಲೇ ಇದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ತೆರಳಿದ ಅವರು, ನಿತ್ಯ ಎಷ್ಟು‌ಮಂದಿ ಪುಸ್ತಕ ಓದಲು ಆಗಮಿಸುತ್ತಾರೆ ಎಂದು ಹಾಜರಾತಿ ಪುಸ್ತಕ ವೀಕ್ಷಿಸಿದರು.

ಬಳಿಕ ಹೆಬ್ಬಾಳ ರಿಂಗ್‌ ರಸ್ತೆಯಲ್ಲಿ‌ ನಡೆಯುತ್ತಿದ್ದ ವೈಟ್‌ಟಾಪಿಂಗ್‌ ಕಾಮಗಾರಿ ವೀಕ್ಷಿಸಿದರು.‌ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಂಗಾನಗರ ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ ಅವರು ಇಲ್ಲಿನ ವ್ಯವಸ್ಥೆ ಪರಿಶೀಲಿಸಿದರು.

ಬಳಿಕ ಮಾಧ್ಯಮದಿಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್‌ಗಳಲ್ಲಿ‌ಊಟದ ಗುಣಮಟ್ಟದ ಬಗ್ಗೆ ದೂರು ಕೇಳಿ ಬಂದಿದ್ದರಿಂದ ಇಂದು ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದೆ.‌ ನಾನೂ ಸಹ ತಿಂಡಿ ಸೇವಿಸಿದೆ.‌ ರುಚಿ ಹಾಗೂ ಶುಚಿ ಎರಡೂ ಉತ್ತಮವಾಗಿದೆ ಎಂದು ಹೇಳಿದರು.

English summary
Deputy chief minister Dr.G. Parameshwara has said that surprise visit will be continue in Bengaluru to find out reality about development works and governance in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X