ಪೋಕ್ಸೋ ಪ್ರಕರಣದ ನ್ಯಾಯವಾದಿಗಳಿಗೆ ತರಬೇತಿ: ಪರಂ ಇಂಗಿತ

ಬೆಂಗಳೂರು, ಆಗಸ್ಟ್ 27: ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಬೇಕಾದ ತಾಂತ್ರಿಕ ಸಲಹೆಗಳನ್ನು ನೀಡಲು ಎಲ್ಲಾ ಜಿಲ್ಲಾ ವಕೀಲರಿಗೆ ಹಿರಿಯ ವಕೀಲರು ತರಬೇತಿ ನೀಡುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.

ವಿಧಾನಸೌಧದಲ್ಲಿ ಜಿಲ್ಲೆಗಳಲ್ಲಿ ಪೋಕ್ಸೋ ಪ್ರಕರಣ ನಿರ್ವಹಿಸುವ ವಿಶೇಷ ಸರ್ಕಾರಿ ಅಭಿಯೋಜಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪೋಕ್ಸೋ ಕಾಯಿದೆ ಬಗೆಹರಿಸುವಲ್ಲಿ ಜಿಲ್ಲಾ ವಕೀಲರು ಎಡವುತ್ತಿದ್ದಾರೆ.‌ ಹೀಗಾಗಿ ಹಿರಿಯ ವಕೀಲರು ಹಾಗೂ‌ ನ್ಯಾಯಾಧೀಶರ ಸಮ್ಮುಖದಲ್ಲಿ ತರಬೇತಿ ಕೊಡಿಸುವುದು ಸೂಕ್ತ ಎಂದರು.

ಮಕ್ಕಳ ಮೇಲಾಗುವ ದೌರ್ಜನ್ಯ ನಿಯಂತ್ರಣಕ್ಕೆಂದೇ ಪೋಕ್ಸೋ ಕಾಯ್ದೆ ತರಲಾಗಿದೆ. ಆದರೆ ಈ ಇದರಡಿ ದಾಖಲಾಗುವ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿಯುತ್ತಿರುವುದು ಆರೋಪಿಗಳಲ್ಲಿ ಭಯ ಕಡಿಮೆಯಾಗಿದೆ. ಇಂಥ ಪ್ರಕರಣಗಳು ಹೆಚ್ಚುತ್ತಲೇ ಇವೆ.

DCM insists to train advocates who please POCSO cases

ಪ್ರಕರಣಗಳು ಯಾವ ಕಾರಣಕ್ಕೆ ತಡವಾಗುತ್ತಿದೆ? ಪೊಲೀಸ್ ಇಲಾಖೆಯಿಂದ ಸಾಕ್ಷಾಧಾರ ಕಲೆ‌ಹಾಕುವಲ್ಲಿ ತಡವಾಗುತ್ತಿದೆಯೇ? ಈ ಬಗ್ಗೆ ನನ್ನ ಗಮನಕ್ಕೆ ತನ್ನಿ. ಸಣ್ಣ ಕಾರಣಕ್ಕೆ ಪ್ರಕರಣವನ್ನು ಬಾಕಿ ಇಡಬಾರದು. ಪೊಲೀಸ್ ಅಧಿಕಾರಿಗಳ ಸಹಕಾರವಿಲ್ಲದಿದ್ದರೆ ಡಿಜಿ ಅವರ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.

ಈಗ ಬಾಕಿ ಇರುವ ಪ್ರಕರಣಗಳ ಕಾರಣಗಳನ್ನು 15 ದಿನದೊಳಗೆ ಮರುಪರಿಶೀಲನೆ ಮಾಡಿ, ಬಾಕಿ ಪ್ರಕರಣ ಕೈಗೆತ್ತಿಕೊಳ್ಳಿ ಎಂದು ಸೂಚಿಸಿದರು. ಡಿಜಿ ನೀಲಮಣಿ ರಾಜು, ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+